ಜೀವನದಲ್ಲಿ ಜಿಗುಪ್ಸೆಗೊಂಡು ವಿದೇಶಿ ಪ್ರಜೆಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೋರಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬೆಂಗಳೂರು (ಆ.4): ಜೀವನದಲ್ಲಿ ಜಿಗುಪ್ಸೆಗೊಂಡು ವಿದೇಶಿ ಪ್ರಜೆಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೋರಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬ್ರಿಟನ್ ದೇಶದ ಗೇವಿನ್ ಜೇಮ್ಸ್ ಯಂಗ್ (59) ಮೃತ ದುರ್ದೈವಿ. ಕೋರಮಂಗಲದ 7ನೇ ಹಂತದ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಅವರ ಮೃತದೇಹ ಶನಿವಾರ ಪತ್ತೆಯಾಗಿದೆ. ನಾಲ್ಕೈದು ದಿನಗಳ ಹಿಂದೆ ಅತಿಯಾದ ಮಾತ್ರೆಗಳ ಸೇವನೆಯಿಂದ ಜೇಮ್ಸ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಬೆಂಗಳೂರು: ಸ್ನೇಹಿತ ಜತೆ ಪತ್ನಿ ಅನೈತಿಕ ಸಂಬಂಧ, ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಹತ್ಯೆ..!
ಕೆಲ ದಿನಗಳ ಹಿಂದೆ ಭಾರತಕ್ಕೆ ಬಂದಿದ್ದ ಜೇಮ್ಸ್ ಅವರು, ಜುಲೈ ಮೊದಲ ವಾರ ನಗರಕ್ಕೆ ಆಗಮಿಸಿದ್ದರು. ಆನ್‌ಲೈನ್ ಮೂಲಕ ಕೋರಮಂಗಲದಲ್ಲಿ ಬಾಡಿಗೆ ಮನೆಗೆ ಪಡೆದು ಅವರು ನೆಲೆಸಿದ್ದರು. ಜು.27ರಂದು ತಮ್ಮ ಮನೆ ಮಾಲೀಕರಿಗೆ ಕರೆ ಮಾಡಿ ತನ್ನನ್ನು ಆ.1ವರೆಗೆ ತೊಂದರೆ ಮಾಡಬೇಡಿ ಎಂದು ಜೇಮ್ಸ್ ಹೇಳಿದ್ದರು. ಹೀಗಾಗಿ ಯಾರೂ ಆತನನ್ನು ಮಾತನಾಡಿಸಿರಲಿಲ್ಲ. ಕೊನೆಗೆ ಶನಿವಾರ ಬೆಳಗ್ಗೆ ಜೇಮ್ಸ್‌ಗೆ ಮನೆ ಮಾಲಿಕರು ಕರೆ ಮಾಡಿದ್ದರು. ಆದರೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆಗ ಮನೆ ಬಳಿ ಬಂದಾಗ ದುರ್ವಾಸನೆ ಬಂದಿದೆ. ಇದರಿಂದ ಆತಂಕಗೊಂಡ ಅವರು ಕೂಡಲೇ ಪೊಲೀಸರಿಗೆ ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ತೆರಳಿ ಮನೆ ಬಾಗಿಲು ಮುರಿದು ಒಳ ಪ್ರವೇಶಿಸಿದಾಗ ಮಲಗುವ ಕೋಣೆಯ ಹಾಸಿಗೆ ಮೇಲೆ ಜೇಮ್ಸ್ ಮೃತದೇಹ ಪತ್ತೆಯಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಡೆತ್ ನೋಟ್ ಪತ್ತೆ: ಮೃತನ ಮನೆಯಲ್ಲಿ ಡೆತ್ ನೋಟ್ ಪತ್ತೆಯಾಗಿದ್ದು, ಇದರಲ್ಲಿ ತಮ್ಮ ಆತ್ಮಹತ್ಯೆ ನಿರ್ಧಾರದ ಬಗ್ಗೆ ಅವರು ಬರೆದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಕದ್ದ ಬೈಕ್ ತೆಗೆದುಕೊಂಡು ಹೋಗುವಾಗ ಆಯತಪ್ಪಿ ಬಿದ್ದರೂ ನೆರವಿಗೆ ಬಂದಿಲ್ಲವೆಂದು ಸ್ನೇಹಿತನಿಗೆ ಚಾಕು ಇರಿತ!
ತಾಯಿ ಸಾವಿನಿಂದ ಬೇಸತ್ತು ರೈಲಿಗೆ ತಲೆಕೊಟ್ಟ ಅಕ್ಕ, ತಮ್ಮ
ಶಿಡ್ಲಘಟ್ಟ: ತಾಯಿ ನಿಧನರಾದ ಕೊರಗಿನಿಂದ ಹೊರಬರಲಾಗದೆ ಯುವತಿ ಹಾಗೂ ಆಕೆಯ ಕಿರಿಯ ಸಹೋದರ ಚಲಿಸುತ್ತಿದ್ದ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ಗುರುವಾರ ರಾತ್ರಿ ಶಿಡ್ಲಘಟ್ಟ ರೈಲ್ವೆ ನಿಲ್ದಾಣದ ಬಳಿ ನಡೆದಿದೆ.
ಇಲ್ಲಿಯ ಪ್ರೇಮ ನಗರದ ನಿವಾಸಿ ಶಿಲ್ಪ ಅಲಿಯಾಸ್ ನವ್ಯ (23), ಪ್ರಭು (20) ಮೃತ ಅಕ್ಕತಮ್ಮ. 4 ತಿಂಗಳ ಹಿಂದೆ ನಟರಾಜ್ ಅವರ ಪತ್ನಿ ಲಲಿತಮ್ಮ ಮೃತಪಟ್ಟಿದ್ದರು. ಆದರೆ ತಾಯಿ ಮೃತಪಟ್ಟ ಕೊರಗಿನಿಂದ ನವ್ಯ ಹಾಗೂ ಪ್ರಭು ಹೊರ ಬಂದಿರಲಿಲ್ಲ. ತಾಯಿ ಮೃತಪಟ್ಟಿದ್ದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಗುರುವಾರ ರಾತ್ರಿ ಚಿಕ್ಕಬಳ್ಳಾಪುರದಿಂದ ಶಿಡ್ಲಘಟ್ಟ ಮಾರ್ಗವಾಗಿ ಕೋಲಾರಕ್ಕೆ ಹೊರಟಿದ್ದ ಪ್ಯಾಸೆಂಜರ್ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ.