ಕೆಜಿಎಫ್ ಬಾಬು ಮನೆಗೆ ಬೆಂಕಿ, ರಾಜಕೀಯ ದ್ವೇಷದಿಂದ ಕೃತ್ಯದ ಆರೋಪ

By Suvarna News  |  First Published Feb 4, 2023, 8:18 PM IST

ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟು ಸಮಾಜ ಸೇವೆ ಮಾಡ್ತಿರೋ ಕೆಜಿಎಫ್ ಬಾಬು ಮನೆಗೆ ಕಿಡಿಗೇಡಿಗಳು ಬೆಂಕಿ ಇಟ್ಟಿದ್ದಾರೆ. ಸದ್ಯ ಯಾವುದೇ ಪ್ರಾಣ ಹಾನಿಯಾಗದೇ ಮನೆಯಲ್ಲಿದ್ದವ್ರು ಪಾರಾಗಿದ್ದಾರೆ.


ವರದಿ: ಕಿರಣ್.ಕೆ.ಎನ್.ಏಷ್ಯಾನೆಟ್ ಸುವರ್ಣ ನ್ಯೂಸ್

ಬೆಂಗಳೂರು (ಫೆ.4): ಕೆಜಿಎಫ್ ಬಾಬು ಆಗಾಗ ಒಂದಲ್ಲ ಒಂದ್ ಸುದ್ದಿಯಲ್ಲಿರ್ತಾರೆ. ಈ ಬಾರಿಯೂ ಸುದ್ದಿಯಲ್ಲಿದ್ದಾರೆ. ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟು ಸಮಾಜ ಸೇವೆ ಮಾಡ್ತಿರೋ ಸ್ಕ್ರಾಪ್ ಬಾಬು ಮನೆಗೆ ಕಿಡಿಗೇಡಿಗಳು ಬೆಂಕಿ ಇಟ್ಟಿದ್ದಾರೆ. ಸದ್ಯ ಯಾವುದೇ ಪ್ರಾಣ ಹಾನಿಯಾಗದೇ ಮನೆಯಲ್ಲಿದ್ದವ್ರು ಪಾರಾಗಿದ್ದು, ಘಟನೆಗೆ ರಾಜಕೀಯ ದ್ವೇಷವೇ ಕಾರಣ ಅಂತ ಕೇಳಿ ಬಂದಿದೆ. ತಡರಾತ್ರಿ ಬೆಂಗಳೂರಿನ ಕೆ.ಎಸ್. ಗಾರ್ಡನ್ ನಲ್ಲಿ ಮನೆಗೆ ದುಷ್ಕರ್ಮಿಗಳು ಮನೆಯೊಂದಕ್ಕೆ ಬೆಂಕಿ ಹಚ್ಚಿದ್ರಿಂದ ಕೆಜಿಎಫ್ ಫ್ಯಾಮಿಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ‌.

Latest Videos

undefined

ಇಷ್ಟಕ್ಕು ದುಷ್ಕರ್ಮಿಗಳು ಬೆಂಕಿ ಹಚ್ಚಿರೋದು ಕೋಟಿ ಕುಳಕ್ಕೆ ಹೆಸ್ರುವಾಸಿಯಾಗಿರೋ ಯೂಸುಫ್ ಖಾನ್ ಅಲಿಯಾಸ್ ಸ್ಕ್ರಾಪ್ ಬಾಬು ಅಲಿಯಾಸ್ ಕೆಜಿಎಫ್ ಬಾಬು ಮನೆಗೆ. ಹೌದು ರಾತ್ರಿ 2.30 ರ ಸುಮಾರಿಗೆ ಲಾಲ್ ಬಾಗ್ ರೋಡ್ ನಲ್ಲಿರೋ ಕೆಜಿಎಫ್ ಬಾಬು ಗೆ ಸೇರಿದ ಹಳೆ ಮನೆ ಬಂದಿದ್ದ ಏಳೆಂಟು ಮಂದಿ ಮನೆ ಮುಂದೆ ಇದ್ದ ಶೂ ರ್ಯಾಕ್ ಸೇರಿದಂತೆ ಕೆಲ ವಸ್ತುಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಎಸ್ಕೇಪ್ ಆಗಿದ್ದಾರೆ. ಯಾವಾಗ ಬೆಂಕಿ ಹೊತ್ತಿಕೊಂಡು ಉರಿಯೋದಕ್ಕೆ ಶುರುವಾಯ್ತೋ ಮನೆಯೊಳಗೆ ದಟ್ಟವಾದ ಹೊಗೆ ಆವರಿಸಿದ್ದು, ಮನೆಯಲ್ಲಿದ್ದ ಶಾಹಿನ್ ತಾಜ್ ಕಿರುಚಿಕೊಂಡಿದ್ದು ಸಹಾಯಕ್ಕೆ ಧಾವಿಸಿದ ನೆರೆಯವ್ರು ತಮ್ಮ ತಮ್ಮ ಮನೆಯಲ್ಲಿನ ಬಿಂದುಗೆಗಳಲ್ಲಿ ನೀರು ತಂದು ಹಾಕುವ ಮೂಲಕ‌ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ರು.

ನಂತರ ಪೊಲೀಸ್ರಿಗೆ ಘಟನೆ ಸಂಬಂಧಿಸಿದಂತೆ ಸುದ್ದಿ ಮುಟ್ಟಿಸಿದ್ದು, ಸ್ಥಳಕ್ಕೆ ಧಾವಿಸಿದ ಪೊಲೀಸ್ರು ಪರಿಶೀಲನೆ ನಡೆಸಿದ್ದು, ಕೃತ್ಯವೆಸಗಿದವ್ರ ಬಗ್ಗೆ ಮಾಹಿತಿ ಕಲೆ ಹಾಕೋದಕ್ಕೆ ಶುರು ಮಾಡಿದ್ರು. ಆ ವೇಳೆ ಮಾಜಿ ಶಾಸಕ‌ ಆರ್.ವಿ ಲ. ದೇವರಾಜ್ ಪುತ್ರ, ಸುಧಾಮನಗರ ವಾರ್ಡ್ ಮಾಜಿ ಕಾರ್ಪೋರೇಟರ್ ಆರ್.ವಿ. ಯುವರಾಜ್ ಮೇಲೆ  ಆರೋಪ ಮಾಡಿ, ದೂರು ದಾಖಲಿಸಿದ್ದಾರೆ.

ಕಿಚ್ಚ ಸುದೀಪ್ ಮುಂದಿನ ಚಿತ್ರಕ್ಕೆ ಪ್ರಶಾಂತ್ ನೀಲ್ ಡೈರೆಕ್ಟರ್?

ಇನ್ನೂ ಸುದ್ದಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ್ದ ಕೇಂದ್ರ ವಿಭಾಗ ಡಿಸಿಪಿ ಶ್ರೀನಿವಾಸ್ ಗೌಡ ಘಟನೆ ಸಂಬಂಧಿಸಿದಂತೆ ಮನೆಯಲ್ಲಿದ್ದ ಕೆಜಿಎಫ್ ಬಾಬು ಸೋದರಿ ಹಾಗೂ ಕೆಜಿಎಫ್ ಬಾಬು ಬಳಿ ಮಾಹಿತಿ ಕಲೆ ಹಾಕಿದ್ದು, ಬೆಂಕಿ ಹಚ್ಚಿ ಎಸ್ಕೇಪ್ ಆಗಿರೋ ಕಿಡಿಗೇಡಿಗಳನ್ನ ಆದಷ್ಟು ಬೇಗ ಪತ್ತೆಯಚ್ಚುವುದಾಗಿ ತಿಳಿಸಿದ್ದಾರೆ.

ಅಭಿಮಾನಿಗಳ ಸಿಂಪಲ್ ಪ್ರೀತಿಗೆ ಕರಗಿದ ಕೆಜಿಎಫ್ ಕಿಂಗ್ ಯಶ್

ಮತ್ತೊಂದೆಡೆ ಕೆಜಿಎಫ್ ಬಾಬು ಸಿಂಪತಿ ಹಾಗೂ ಭದ್ರತೆ ಪಡೆಯುವ ದೃಷ್ಟಿಯಿಂದ ಈ ರೀತಿ ಮಾಡಿಕ್ಕೊಂಡಿದ್ದಾರೆ ಎಂಬ ಮಾತುಗಳು ಸಹ ಕೇಳಿ‌ಬರ್ತಿದೆ. ಸದ್ಯ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರೋ ಸಂಪಂಗಿರಾಮನಗರ ಪೊಲೀಸ್ರು ದುಷ್ಕರ್ಮಿಗಳ ಪತ್ತೆಗೆ ಅಕ್ಕಪಕ್ಕದಲ್ಲಿರೋ ಸಿಸಿಟಿವಿ ಪರಿಶೀಲನೆ ನಡೆಸ್ತಿದ್ದು, ಆರೋಪಿಗಳು ಸಿಕ್ಕಿ ಬಿದ್ರೆ ಬೆಂಕಿ ಪ್ರಕರಣದ ಅಸಲಿ ಸತ್ಯ ಬೆಳಕಿಗೆ ಬರಲಿದೆ.

click me!