ಕುವೈತ್ ನಲ್ಲಿ ಸಿಲುಕಿದ್ದ ಕೊಡಗಿನ ಮಹಿಳೆ ಸುರಕ್ಷಿತವಾಗಿ ಸ್ವದೇಶಕ್ಕೆ ವಾಪಸ್

By Suvarna NewsFirst Published Feb 4, 2023, 6:29 PM IST
Highlights

ಉತ್ತಮ ಸಂಬಳ ಸಿಗುತ್ತದೆ ಎನ್ನುವ ಕನಸು ಹೊತ್ತು ವಿದೇಶಕ್ಕೆ ಹಾರಿ ಅಲ್ಲಿ ಗೃಹಬಂಧನದಲ್ಲಿದ್ದ ಮಹಿಳೆಯನ್ನು ಕೊನೆಗೂ ಕೊಡಗು ಜಿಲ್ಲಾಡಳಿತ ಸುರಕ್ಷಿತವಾಗಿ ಸ್ವದೇಶಕ್ಕೆ ವಾಪಸ್ ಕರೆತಂದಿದೆ. 

ವರದಿ:ರವಿ ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್ 

ಕೊಡಗು (ಫೆ.4): ಉತ್ತಮ ಸಂಬಳ ಸಿಗುತ್ತದೆ ಎನ್ನುವ ಕನಸುಹೊತ್ತು ವಿದೇಶಕ್ಕೆ ಹಾರಿ ಅಲ್ಲಿ ಗೃಹಬಂಧನದಲ್ಲಿದ್ದ ಮಹಿಳೆಯನ್ನು ಕೊನೆಗೂ ಕೊಡಗು ಜಿಲ್ಲಾಡಳಿತ ಸುರಕ್ಷಿತವಾಗಿ ಸ್ವದೇಶಕ್ಕೆ ವಾಪಸ್ ಕರೆತಂದಿದೆ.  ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಕರಡಿಗೋಡು ಗ್ರಾಮದ ಚಿಕ್ಕಿ ಎಂಬುವರ ಮಗಳು ಪಾರ್ವತಿ ಉತ್ತಮ ಸಂಬಳ ಸಿಗುತ್ತದೆ ಎಂಬ ಉದ್ದೇಶದಿಂದ ಖಾಸಗಿ ಏಜೆನ್ಸಿ ಮೂಲಕ ಕುವೈತ್‍ಗೆ ಹೋಗಿದ್ದರು. ಆದರೆ ಅಲ್ಲಿ ಗೃಹಬಂಧನಕ್ಕೆ ಒಳಗಾಗಿ ಪಡಬಾರದ ಕಷ್ಟ ಪಡುವಂತೆ ಆಗಿತ್ತು. ಕುವೈತ್ ನಲ್ಲಿ ಪಟ್ಟ ಕಣ್ಣಿರಿನ ಕಥೆಯನ್ನ ಮನೆಯವರಿಗೆ ಹೆಳಿಕೊಂಡಿದ್ಲು. ಆಕೆಯ ಸಹಾಯಕ್ಕಾಗಿ ಕುಟುಂಬ ಕೊಡಗು ಜಿಲ್ಲಾಡಳಿತದ ಹೋಗಿತ್ತು. ಮಹಿಳೆಯ ಕಷ್ಟ ಅರಿತ ಕೊಡಗು ಜಿಲ್ಲಾಡಳಿತ ಮಹಿಳೆಯ ಸಹಾಯಕ್ಕೆ ನಿಂತ್ತಿದ್ದು, ಕೊನೆಗೂ ಜಿಲ್ಲಾಡಳಿತ ಆಕೆಯನ್ನ ಸೇಫ್ ಮಾಡಿ ಕರೆತಂದಿದೆ.

ಹೀಗೆ ಕುವೈತ್ ನಲ್ಲಿ ಬಂಧಿಯಾಗಿದ್ದು, ಜಿಲ್ಲೆಗೆ ಸೇಫ್ ಆಗಿ ಬಂದ ಮಹಿಳೆ ಹೆಸರು 32 ವರ್ಷದ ಪಾರ್ವತಿ. ತೀರಾ ಬಡತನದಲ್ಲಿ ಬದುಕುತ್ತಿರುವ ಕುಟುಂಬದ ಮಹಿಳೆ ಪಾರ್ವತಿ ನನ್ನ ಇಬ್ಬರು ಮಕ್ಕಳನ್ನು ಚೆನ್ನಾಗಿ ಸಾಕಿ ಸಲಹಬೇಕು. ಅವರಿಗೆ ಉತ್ತಮ ವಿದ್ಯಾಭ್ಯಾಸ ನೀಡಬೇಕು. ನಾನೂ ಒಂದು ಮನೆಯನ್ನು ಕಟ್ಟಬೇಕು. ವಯಸ್ಸಾಗಿರುವ ನನ್ನ ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎನ್ನುವ ಉದ್ದೇಶದಿಂದ ಪಾರ್ವತಿ ಕೇರಳದ ಕಣ್ಣೂರು ಜಿಲ್ಲೆಯ ತಲಚೇರಿಯಲ್ಲಿ ಮನೆಕೆಲಸಕ್ಕೆ ಸೇರಿಕೊಂಡಿದ್ದರು. ಅಲ್ಲಿ ತಮಿಳುನಾಡು ಏಜೆಂಟ್ ಮೂಲಕ ವಿದೇಶದಲ್ಲಿ ಮನೆ ಕೆಲಸ ಮಾಡಲು ಕಳೆದ ಸೆಪ್ಟೆಂಬರ್ 3 ರಂದು ಕರಡಿಗೋಡಿನಿಂದ ಹೊರಟು ಸೆಪ್ಟೆಂಬರ್ 4 ಕ್ಕೆ ಕುವೈತ್ ಗೆ ತಲುಪಿದ್ದರು.

ಹೆಣ್ಣು ಮಕ್ಕಳೇ ಹುಷಾರ್! ಕೆಲಸ ಕೊಡಿಸೊದಾಗಿ ನಂಬಿಸಿ ಯುವತಿಯ ಅತ್ಯಾಚಾರ 

ಭಾರತದ ಏಜೆಂಟ್ ಮೂಲಕ ಕುವೈತ್ ನ ಶ್ರೀಲಂಕಾದ ಏಜಂಟ್ ಸಂಪರ್ಕಿಸಿ ಕೆಲಸಕ್ಕೆ ಸೇರಿದ್ದರು. ಕುವೈತ್ ನ ಅರಬಿ ಒಬ್ಬರ ಮನೆಗೆ ಕೆಲಸಕ್ಕೆ ಸೇರಿದ ಪಾರ್ವತಿಗೆ ಅಲ್ಲಿ ಪ್ರತಿ ನಿತ್ಯ ಕಿರುಕುಳ ನೀಡಲಾಗಿತ್ತು. ಜೊತೆಗೆ ಕನಿಷ್ಠ ಸರಿಯಾಗಿ ಊಟ, ನಿದ್ದೆ ಇಲ್ಲದೆ ಆಕೆ ಪಟ್ಟ ಚಿತ್ರ ಹಿಂಸೆ ಅಷ್ಟಿಟ್ಟಲ್ಲ. ತನ್ನನ್ನು ವಾಪಸ್ ನನ್ನ ದೇಶಕ್ಕೆ ಕಳುಹಿಸುವಂತೆ ಕೇಳಿಕೊಳ್ಳುತ್ತಿದ್ದಂತೆ ಮಹಿಳೆಯನ್ನು ಯಾರು ಇಲ್ಲದ ಮನೆಗೆ ಕೂಡಿ ಹಾಕಲಾಗಿತ್ತು. ಈ ವಿಷಯವನ್ನು ಪಾವರ್ತಿಯವರ ತಾಯಿ ಚಿಕ್ಕಿ ಕುಂಟುಂಬ ಜಿಲ್ಲಾಡಳಿತದ ಗಮನಕ್ಕೆ ತಂದು ಆಕೆಯ ರಕ್ಷಣೆಗಾಗಿ ಮೊರೆ ಇಟ್ಟಿತ್ತು.

ಒಂದೇ ಟೈಮಲ್ಲಿ 12 ಯುವತಿಯರೊಂದಿಗೆ ಚಾಟಿಂಗ್: ಕೆಲಸ ಕೊಡಿಸೋ ನೆಪದಲ್ಲಿ ಕಾಮಕ್ರೀಡೆಗೆ ಬಳಕೆ

ಇದಕ್ಕೆ ಸ್ಪಂದಿಸಿದ ಕೊಡಗು ಜಿಲ್ಲಾಡಳಿತ ಪಾರ್ವತಿಯನ್ನ ಸೇಫ್ ಆಗಿ ಕರೆತರಲು ಮುಂದಾಗಿತ್ತು. ಅದಕ್ಕಾಗಿ ಕೊಡಗು ಜಿಲ್ಲಾಧಿಕಾರಿ ಸತೀಶ್ ಅವರು ಈ ಪಾರ್ವತಿಯನ್ನ ಸೇಫ್ ಆಗಿ ಕರೆತರಲು ಜಿಲ್ಲಾ ವಿಪ್ಪತ್ತು ನಿರ್ವಹಣಾ ಪರಿಣಿತ ಅನನ್ಯ ವಾಸುದೇವ್ ಅವರಿಗೆ ವಹಿಸಿತ್ತು. ಇದರಿಂದ ಕಾರ್ಯಪ್ರವೃತರಾದ ಅನನ್ಯ ವಾಸುದೇವ್. ಕುವೈತ್ ನ ಭಾರತೀಯ ರಾಯಾಬಾರಿ ಕಚೇರಿಯ ಸಹಾಯ ಪಡೆದು ಆಕೆ ಇರುವ ಪ್ರದೇಶವನ್ನ ಗುರುತಿಸಿ ಆಕೆಯನ್ನ ಕರೆ ತರುವ ಪ್ರಯತ್ನ ನಡೆಸಿತು. ಬೇರೆ ದೇಶದಿಂದ ಏಕಾ ಏಕಿಯಾಗಿ ಕರೆ ತರೋದು ಅಂದ್ರೆ ಅದು ಸುಲಭದ ಮಾತಲ್ಲ. ಆದ್ರು ಎಲ್ಲ ತಾಂತ್ರಿಕ ಸಮಸ್ಯೆಯನ್ನ ಎದುರಿಸಿ ಆಕೆಯನ್ನ ಸೇಫ್ ಆಗಿ ಕೊಡಗಿಗೆ ಕರೆತರಲಾಗಿದೆ. ಇನ್ನೂ ಯಾರು ವಿದೇಶಕ್ಕೆ ತೆರಳಬೇಕಾದ್ರೆ ಕೊಂಚ ಎಚ್ಚರ ವಹಿಸುವಂತೆ ಜಿಲ್ಲಾಡಳಿತ ಕೂಡ ಸೂಚನೆ ನೀಡಿದೆ. ಯಾವುದೋ ಪ್ರೈವೇಟ್ ಏಜೆನ್ಸಿ ಜೊತೆ ಹೋಗುವಾಗ ಬಹಳ ಎಚ್ಚರ ವಹಿಸುವಂತೆ ಜಿಲ್ಲಾಡಳಿತ ಸೂಚಿಸಿದೆ.

click me!