ಶಾಸಕ ಹರೀಶ್ ಪೂಂಜಾಗೆ ತಲವಾರು ತೋರಿಸಿ ಬೆದರಿಕೆ: ಪ್ರಕರಣ ದಾಖಲು

By Suvarna News  |  First Published Oct 14, 2022, 10:50 AM IST

Harish Poonja: ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾಗೆ ತಲವಾರು ತೋರಿಸಿ ಜೀವ ಬೆದರಿಕೆ ಒಡ್ಡಿದ ಬಗ್ಗೆ ಆರೋಪಿಸಲಾಗಿದ್ದು,  ಈ ಸಂಬಂದ ಪ್ರಕರಣ ದಾಖಲಾಗಿದೆ


ಮಂಗಳೂರು (ಅ. 14): ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾಗೆ (Harish Poonja) ತಲವಾರು ತೋರಿಸಿ ಜೀವ ಬೆದರಿಕೆ ಒಡ್ಡಿದ ಬಗ್ಗೆ ಆರೋಪಿಸಲಾಗಿದ್ದು, ಈ ಬಗ್ಗೆ ಶಾಸಕ ಪೂಂಜಾ ಕಾರು ಚಾಲಕ ನೀಡಿದ ದೂರಿನ ಹಿನ್ನೆಲೆಯಲ್ಲಿ ಬಂಟ್ವಾಳ (Bamtwal) ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪರಂಗೀಪೇಟೆ ಬಳಿ ಘಟನೆ ನಡೆದಿದ್ದು, ನಿನ್ನೆ ರಾತ್ರಿ 11.15ರ ಸುಮಾರಿಗೆ ಶಾಸಕ ಪೂಂಜಾ ಕಾರು ಅಡ್ಡಗಟ್ಟಿ ಕೊಲೆ ಬೆದರಿಕೆ ಒಡ್ಡಿದ ಬಗ್ಗೆ ದೂರು ನೀಡಲಾಗಿದೆ. ಶಾಸಕ ಪೂಂಜಾ ಕಾರು ಚಾಲಕ ನವೀನ್ ರಿಂದ ಬಂಟ್ವಾಳ ಗ್ರಾಮಾಂತರ ಠಾಣೆಗೆ ದೂರು ನೀಡಲಾಗಿದೆ. 

ಬಿಳಿ ಬಣ್ಣದ ಸ್ಕಾರ್ಫಿಯಾ ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದು ಬೆದರಿಕೆ ಒಡ್ಡಲಾಗಿದೆ. ನಿನ್ನೆ ಸಂಜೆ 6.20ಕ್ಕೆ ವಿಮಾನ ಮೂಲಕ ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸಿದ್ದ ಶಾಸಕ ಪೂಂಜಾ, ಅಲ್ಲಿಂದ ಸರ್ಕ್ಯೂಟ್ ಹೌಸ್ ಗೆ ಆಗಮಿಸಿ ಮೀಟಿಂಗ್ ನಲ್ಲಿ ಭಾಗವಹಿಸಿದ್ದರು.‌ ಬಳಿಕ ರಾತ್ರಿ 10.45ರ ಹೊತ್ತಿಗೆ ಸಂಬಂಧಿಕರಾದ ಕುಶಿತ್ ಮತ್ತು ಪ್ರಶಾಂತ್ ಜೊತೆ ಬೇರೆ ಕಾರಿನಲ್ಲಿ ಶಾಸಕ ಹರೀಶ್ ಪೂಂಜಾ ಬೆಳ್ತಂಗಡಿ ಕಡೆಗೆ ಹೊರಟಿದ್ದಾರೆ. ಹೀಗಾಗಿ ಪೂಂಜಾ ಹೋಗುತ್ತಿದ್ದ ಕಾರಿ‌ನ ಹಿಂದೆ ಶಾಸಕರ ಅಧಿಕೃತ ಕಾರನ್ನು ಚಾಲಕ ನವೀನ್ ಚಲಾಯಿಸಿಕೊಂಡು ಬಂದಿದ್ದಾರೆ.

Tap to resize

Latest Videos

ಮುಸ್ಲಿಮರ ಮತ ಬೇಡ ಎಂದ ಬಿಜೆಪಿ ಶಾಸಕರಿಗೆ ಟೋಪಿ, ಹಸಿರು ಶಾಲು ಕೋರಿಯರ್..!

ಈ ವೇಳೆ ಪಡೀಲ್ ರೈಲ್ವೇ ಬ್ರಿಡ್ಜ್ ಅಡಿಯಿಂದ ಸ್ಕಾರ್ಪಿಯೋ ಕಾರು ಹಿಂಬಾಲಿಸಿಕೊಂಡು ಬಂದಿತ್ತು. ಈ ಬಗ್ಗೆ ಫೋನ್ ಮೂಲಕ ಶಾಸಕ ಪೂಂಜಾಗೆ ಮಾಹಿತಿ ನೀಡಿದ ಚಾಲಕ ನವೀನ್, ಕಾರು ಹಿಂಬಾಲಿಸುವ ಬಗ್ಗೆ ಮಾಹಿತಿ ನೀಡಿದ್ದಾರೆ. ಆದರೆ ಈ ವೇಳೆ ಎದುರಿಗಿದ್ದ ಶಾಸಕರ ಸಂಬಂಧಿಯ ಕಾರು ಅಡ್ಡಗಟ್ಡಿದ ಸ್ಕಾರ್ಫಿಯಾ ಕಾರು, ಪರಂಗೀಪೇಟೆ ಬಳಿ ಅಡ್ಡಗಟ್ಟಿ ತಲವಾರು ತೋರಿಸಿ ಅವಾಚ್ಯ ಶಬ್ದಗಳಿಂದ ಬೈದು ಪರಾರಿಯಾಗಿದೆ. ಬಿ.ಸಿ.ರೋಡ್ ಕಡೆಗೆ ವೇಗವಾಗಿ ಕಾರು ಚಲಾಯಿಸಿ ಪರಾರಿಯಾಗಿದ್ದು, ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ‌ಪ್ರಕರಣ ದಾಖಲಾಗಿದೆ. ಸದ್ಯ ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದು, ಸಿಸಿಟಿವಿ ದೃಶ್ಯಗಳ ಪರಿಶೀಲನೆ ನಡೆಸ್ತಿದಾರೆ

click me!