ರೈತರ ಹೆಸರಲ್ಲಿ ₹20ಕೋಟಿ ಗುಳಂ: ಧಾರವಾಡ ಕೆಐಎಡಿಬಿ ಭ್ರಷ್ಟ ಅಧಿಕಾರಿಗಳ ವಿರುದ್ಧಎಫ್‌ಐಆರ್

By Ravi JanekalFirst Published Dec 24, 2022, 10:38 AM IST
Highlights

ಕೆಐಎಡಿಬಿಯ 4 ಅಧಿಕಾರಿಗಳು 3 ಬ್ಯಾಂಕ್ ಸೇರಿ 10 ಜನ ರೈತರ ವಿರುದ್ದ ಪ್ರಕರಣ ದಾಖಲು ಆಗಿದೆ. ಸದ್ಯ ನಾಲ್ಕು ಜನ ಅಧಿಕಾರಿಗಳನ್ನ ಅಮಾನತು ಮಾಡಲಾಗಿದೆ. ಸಾಮಾಜಿಕ ಹೋರಾಟಗಾರ ಬಸವರಾಜ ಕೊರವರ ಅವರಿಗೆ ಮೊದಲ ಹಂತದ ಜಯ ಸಿಕ್ಕಂತಾಗಿದೆ..

 ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್ ಧಾರವಾಡ

ಧಾರವಾಡ (ಡಿ.24): ಕೆಐಎಡಿಬಿಯ 4 ಅಧಿಕಾರಿಗಳು 3 ಬ್ಯಾಂಕ್ ಸೇರಿ 10 ಜನ ರೈತರ ವಿರುದ್ದ ಪ್ರಕರಣ ದಾಖಲು ಆಗಿದೆ. ಸದ್ಯ ನಾಲ್ಕು ಜನ ಅಧಿಕಾರಿಗಳನ್ನ ಅಮಾನತು ಮಾಡಲಾಗಿದೆ. ಸಾಮಾಜಿಕ ಹೋರಾಟಗಾರ ಬಸವರಾಜ ಕೊರವರ ಅವರಿಗೆ ಮೊದಲ ಹಂತದ ಜಯ ಸಿಕ್ಕಂತಾಗಿದೆ..

 ಧಾರವಾಡ ವಿದ್ಯಾಗಿರಿ ಪೋಲಿಸ್ ಠಾಣೆಯಲ್ಲಿ 14 ಜನರ ದೂರು ದಾಖಲು ಆಗಿದೆ.  ಕೆಐಎಡಿಬಿಯ ನಾಲ್ಕು ಜನ ಭಷ್ಟ ಅಧಿಕಾರಿಗಳು ಅಧಿಕಾರ ದುರ್ಬಳಕೆ ಮಾಡಿಕೊಂಡು 10 ಜನ ರೈತರ ಹೆಸರಿನಲ್ಲಿ ₹20 ಕೋಟಿ ಅಧಿಕ ಹಣವನ್ನ ಲಪಟಾಯಿಸಿ ಸರಕಾರಕ್ಕೆ ವಂಚನೆ ಮಾಡಿರುವ ಆರೋಪ ಸಾಬೀತಾಗಿರುವ ಹಿನ್ನಲೆ ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಈಗಿನ ಭೂಸ್ವಾಧಿನಾಧಿಕಾರಿ ಮಮತಾ ಸಾಲಿಗೌಡರ ಅವರು 14 ಜನರ‌ ವಿರುದ್ದ ವಿದ್ಯಾಗಿರಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲು ಆಗಿದೆ.

Dharwad KIADB Scam: ಕೋಟಿಗಟ್ಟಲೆ ನುಂಗಿದ ಕೆಐಎಡಿಬಿ ಅಧಿಕಾರಿಗಳ ವಿರುದ್ಧ ಲೋಕಾಯುಕ್ತದಲ್ಲಿ ಕೇಸ್ ದಾಖಲು

ಸಾಮಾಜಿಕ ಕಾರ್ಯಕರ್ತ ಬಸವರಾಜ ಕೊರವರ ಈ ಅಕ್ರಮವನ್ನ ಬಯಲಿಗೆ ಎಳೆದಿದ್ದರು. ಈ ಪ್ರಕರಣ ರಾಜ್ಯಾದ್ಯಂತ ಸುದ್ದಿಯಾಗಿತ್ತು. ಸದ್ಯ ನಾಲ್ವರು ಅಧಿಕಾರಿಗಳನ್ನ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

 ಆಗಿನ ಭೂಸ್ವಾಧೀನಾಧಿಕಾರಿ ವಿ.ಡಿ ಸಜ್ಜನ್, ಮ್ಯಾನೇಜರ್ ಸಿಂಪಿ, ಹಿರಿಯ ಸಹಾಯಕ ಶಂಕರ ತಳವಾರ್, ಶಿರಸ್ತೆದಾದ ಹೇಮಚಂದ್ರ ಬಿ ಚಿಂತಾಮಣಿ, ನಾಲ್ವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲು ಆಗಿದೆ. ಜೊತೆಗೆ ಐಡಿಬಿಐ ಬ್ಯಾಂಕ್ ಸೇರಿದಂತೆ ಇನ್ನೆರಡು ಬ್ಯಾಂಕ್ ಮೇಲೂ ದೂರು ದಾಖಲು ಆಗಿದೆ. ಈ ನಾಲ್ವರು ಅಧಿಕಾರಿಗಳು ರೈತರ ಹೆಸರಲ್ಲಿ ಸರಕಾರಕ್ಕೆ ನಕಲಿ ದಾಖಲೆ‌ ಸೃಷ್ಠಿ ಮಾಡಿ ವಂಚನೆ ಮಾಡಿದ್ದರು. 10 ಜನರ ರೈತರ ಹೆಸರಲ್ಲಿ ಎರಡು ಬಾರಿ ಹಣ ಬಿಡುಗಡೆ ಮಾಡಿಕ್ಕೊಂಡಿದ್ದರು. ಮ್ಯಾನೇಜರ್ ಸಿಂಪಿ, ಮತ್ತು ಹಿರಿಯ ಸಹಾಯಕ ಅಧಿಕಾರಿ ಶಂಕರ್ ತಳವಾರ ಇಬ್ಬರನ್ನು ಅಮಾನತು ಮಾಡಿದ ಕೆಐಎಡಿಬಿ ಹಿರಿಯ ಅಧಿಕಾರಿಗಳು ಸದ್ಯ  ಭೂಸ್ವಾಧೀನಾಧಿಕಾರಿ ವಿ.ಡಿ ಸಜ್ಜನ್ ಮತ್ತು ಹೇಮಚಂದ್ರ ಚಿಂತಾಮಣಿ ನಿವೃತ್ತಿ ಹೊಂದಿದ್ದಾರೆ. ಆದರೂ ಅವರ ಮೇಲೆ ಕ್ರಮ ಆಗಬೇಕು ಎಂದು ಒತ್ತಾಯ ಮಾಡಿದ್ದಾರೆ.

ಕೇವಲ ಅಮಾನತ್ತು ಮಾಡಿ ಆದೇಶ ಮಾಡೋದು ಅಷ್ಟೇ ಅಲ್ಲ, ಸೇವೆಯಿಂದ ವಜಾ ಮಾಡಬೇಕು ಎಂದು ಒತ್ತಾಯ ಕೇಳಿ ಬರುತ್ತಿದೆ
ನಾಲ್ವರು ಅಧಿಕಾರಿಗಳ ಮಾಡಿದ ತಪ್ಪಿಗೆ ರೈತರ ಮೇಲೂ ಎಫ್‌ಐಆರ್ ದಾಖಲು ಮಾಡಿದ್ದು, ರೈತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇನ್ನು ಭೂಸ್ವಾಧೀನ ಅಧಿಕಾರಿ ಅವರನ್ನ‌ ಕೇಳಿದೆರೆ ಅವರೂ ರೈತರು ಹಣ ಬಿಡುಗಡೆಗೆ ಅರ್ಜಿ ಕೊಟ್ಡಿರುವ ಹಿನ್ನಲೆ ಅವರ‌ ಮೇಲೂ ದೂರು ದಾಖಲು ಮಾಡಲಾಗಿದೆ. ಆದರೆ ಪೋಲಿಸರು ವಿಚಾರಣೆಯನ್ನ‌ ಮಾಡುತ್ತಿದ್ದಾರೆ. ಇನ್ನು ನಿಜವಾಗಿಯೂ ರೈತರು ಅರ್ಜಿ ಕೊಟ್ಡಿದ್ರಾ? ರೈತರ ಹೆಸರಲ್ಲಿರುವ ನಕಲಿ ಆಗಿದೆನಾ? ಇವೆಲ್ಲವೂ ಪೋಲಿಸ್ ತನಿಖೆಯಿಂದ‌ ಹೊರ ಬರಬೇಕಿದೆ.

 

Dharwad KIADB: ರೈತರ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಂತರ ರೂ. ವಂಚನೆ

ಹಿಂದೆಂದೂ ಆಗದ‌ ತನಿಖೆ‌ ಈಗಿನ ಭೂಸ್ವಾಧೀನಾಧಿಕಾರಿಯಾದ ಮಮತಾ ಹೊಸಗೌಡರ ಬಂದ‌ ಮೇಲೆ‌ ಕೆ‌ಐಎಡಿಬಿ‌ಇಲಾಖೆಯನ್ನ‌ ಸ್ವಚ್ಛಗೊಳಿಸುತ್ತಿದ್ದಾರೆ. ಕೇವಲ ಅಧಿಕಾರಿಗಳನ್ನ ಅಮಾನತ್ತು ಮಾಡೋದಲ್ಲ. ಭಷ್ಟರನ್ನು ಸೇವೆಯಿಂದ ವಜಾ ಮಾಡಬೇಕು ಎಂದು ಬಸವರಾಜ ಕೊರವರ ಮತ್ತು ಅನ್ನದಾತರು ಆಗ್ರಹಿಸಿದ್ದಾರೆ.

click me!