ಫೇಸ್‌ಬುಕ್‌, ಇನ್ಸ್ಟಾಗ್ರಾಮ್‌ಗೆ ಅಶ್ಲೀಲ ವಿಡಿಯೋ ಲಿಂಕ್‌..!

Kannadaprabha News   | Asianet News
Published : May 09, 2021, 08:05 AM ISTUpdated : May 09, 2021, 08:14 AM IST
ಫೇಸ್‌ಬುಕ್‌, ಇನ್ಸ್ಟಾಗ್ರಾಮ್‌ಗೆ ಅಶ್ಲೀಲ ವಿಡಿಯೋ ಲಿಂಕ್‌..!

ಸಾರಾಂಶ

* ಹುಬ್ಬಳ್ಳಿ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು * ಫೇಸ್‌ಬುಕ್‌ ಪಾಲೋವರ್ಸ್‌ಗಳಿಗೆ ಅಶ್ಲೀಲ ಮೆಸೇಜ್‌ ಕಳಿಸಿದ ದುಷ್ಕರ್ಮಿ * ವ್ಯಾಪಾರದಲ್ಲಿ ನಷ್ಟವಾಗುವಂತೆ ಮಾಡಿದ ಖದೀಮ

ಹುಬ್ಬಳ್ಳಿ(ಮೇ.09): ಜಾಹೀರಾತಿಗಾಗಿ ಕ್ರಿಯೆಟ್‌ ಮಾಡಿದ ಫೇಸ್‌ಬುಕ್‌ ಹಾಗೂ ಇನ್ಸ್ಟಾಗ್ರಾಮ್‌ ಖಾತೆಗೆ ಲಾಗಿನ್‌ ಆಗಿ ಅಶ್ಲೀಲ ವಿಡಿಯೋ ಲಿಂಕ್‌ ಮಾಡಿದ ದುಷ್ಕರ್ಮಿ ವಿರುದ್ಧ ಇಲ್ಲಿನ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಆದಿ ಜಾರಿ ಎಂಬಾತ ಆರೋಪಿ. ಧಾರವಾಡದ ಮಹ್ಮದ್‌ ಇಬ್ರಾಹಿಂ ಶೇಖ್‌ ಎಂಬುವವರು ತಮ್ಮ ಹೋಟೆಲ್‌ ಉದ್ಯಮಕ್ಕಾಗಿ ಖಾತೆಗಳನ್ನು ತೆರೆದಿದ್ದರು. ಆದರೆ, ಆರೋಪಿ ಖಾತೆಗೆ ಲಾಗಿನ್‌ ಆಗಿ ಅಶ್ಲೀಲ ವಿಡಿಯೋ ಲಿಂಕ್‌ ಮಾಡಿದ್ದಾನೆ. ಅಲ್ಲದೆ, ಫೇಸ್‌ಬುಕ್‌ ಪಾಲೋವರ್ಸ್‌ಗಳಿಗೆ ಅಶ್ಲೀಲ ಮೆಸೇಜ್‌ಗಳನ್ನು ಕಳಿಸಿದ್ದಾನೆ. 

ಹಾವೇರಿ ಜಿಲ್ಲಾಧಿಕಾರಿ ಫೇಸ್‌ಬುಕ್‌ ಹ್ಯಾಕ್‌: ಹಣಕ್ಕೆ ಬೇಡಿಕೆ ಇಟ್ಟ ಖದೀಮರು..!

ಅಷ್ಟೇ ಅಲ್ಲದೆ, ಇ-ಮೇಲ್‌ ಐಡಿಗೂ ಲಾಗಿನ್‌ ಆಗಿ ಅಲ್ಲಿದ್ದ ಹೋಟೆಲ್‌ ವ್ಯವಹಾರಕ್ಕೆ ಸಂಬಂಧಿಸಿದ ಡಾಟಾಗಳನ್ನು ಡಿಲೀಟ್‌ ಮಾಡಿ ವ್ಯಾಪಾರದಲ್ಲಿ ನಷ್ಟವಾಗುವಂತೆ ಮಾಡಿದ್ದಾನೆ ಎಂದು ಇಬ್ರಾಹಿಂ ದೂರಿನಲ್ಲಿ ತಿಳಿಸಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಫೇಸ್‌ಬುಕ್‌ ಗೆಳತಿಗಾಗಿ ಮಡಿಕೇರಿಗೆ ಬಂದು ನರಕ ನೋಡಿದ ಮಂಡ್ಯದ ಹೈದ! ಬೆತ್ತಲೆಯಾಗಿ ಓಡೋಡಿ ಬಂದ!
ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?