ಮಹಿಳಾ ಪ್ರಯಾಣಿಕರೊಂದಿಗೆ ಅನುಚಿತ ವರ್ತನೆ ಆರೋಪ ಸಾರಿಗೆ ಬಸ್ ನಿರ್ವಾಹಕನ ಮೇಲೆ ಹಲ್ಲೆ ಮಾಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ಚಳ್ಳಕೆರೆ ನೆಹರು ವೃತ್ತದಲ್ಲಿ ನಡೆದಿದೆ.
ಚಿತ್ರದುರ್ಗ: (ಜೂ.22) : ಮಹಿಳಾ ಪ್ರಯಾಣಿಕರೊಂದಿಗೆ ಅನುಚಿತ ವರ್ತನೆ ಆರೋಪ ಸಾರಿಗೆ ಬಸ್ ನಿರ್ವಾಹಕನ ಮೇಲೆ ಹಲ್ಲೆ ಮಾಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ಚಳ್ಳಕೆರೆ ನೆಹರು ವೃತ್ತದಲ್ಲಿ ನಡೆದಿದೆ.
ರಾಯದುರ್ಗ - ಬೆಂಗಳೂರು ಬಸ್ ನಿರ್ವಾಹಕ ಚಂದ್ರೇಗೌಡ ಹಲ್ಲೆಗೊಳಗಾದವರು. ನಿನ್ನೆ ಚಳ್ಳಕೆರೆಯಿಂದ ಇದೇ ಬಸ್ ನಲ್ಲಿ ಪ್ರಯಾಣಿಸಿದ್ದ ಓರ್ವ ಮಹಿಳೆ ಚಳ್ಳಕೆರೆಯಿಂದ ದಾಬಸ್ ಪೇಟೆಗೆ ಪ್ರಯಾಣಿಸಿದ್ದಳು. ದಾಬಸಪೇಟೆ ಬಳಿ ಬಸ್ ನಿಲ್ಲಿಸಲು ಮಹಿಳೆ ಹೇಳಿದರೂ, ನಿರ್ವಾಹಕ ಚಂದ್ರೇಗೌಡ ನಕಾರ ಮಾಡಿದ್ದಾನೆ.. ಬೆಂಗಳೂರು ಮೆಜೆಸ್ಟಿಕ್ ಗೆ ಬಸ್ ಸ್ಟಾಪ್ ನೀಡಿದ್ದ ಚಂದ್ರೇಗೌಡ. ಬಸ್ ನಿಲ್ಲಿಸದೆ ಬಗ್ಗೆ ಪ್ರಶ್ನಿಸಿದ ಮಹಿಳೆ ಜತೆಗೆ ನಿರ್ವಾಹಕ ಅನುಚಿತ ವರ್ತಿಸಿದ್ದಾನೆ. ಹೀಗಾಗಿ ಕುಟುಂಬದವರಿಗೆ ತಿಳಿದು ಇಂದು ಮಹಿಳೆಯ ಸಂಬಂಧಿಕರು ಚಳ್ಳಕೆರೆ ಬಸ್ ನಿಲ್ದಾಣ ಬಳಿ ಕಾದು ಬಸ್ ನಿರ್ವಾಹಕನಿಗೆ ಮನಸೋಇಚ್ಛೆ ಥಳಿಸಲಾಗಿದೆ. ಹಲ್ಲೆಯಿಂದ ಗಂಭೀರ ಪೆಟ್ಟು ಬಿದ್ದು ಆಸ್ಪತ್ರೆಗೆ ದಾಖಲಾಗಿರುವ ಕಾರ್ಯನಿರ್ವಾಹಕ ಚಂದ್ರೇಗೌಡ.
ಉಚಿತ ಪ್ರಯಾಣಕ್ಕೆ ಒರಿಜಿನಲ್ ಆಧಾರ್ ತೋರಿಸದ ಮಹಿಳೆಯರನ್ನ ಬಸ್ಸಿಂದ ಇಳಿಸಿದ ಕಂಡಕ್ಟರ್
ಚಳ್ಳಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಪ್ರಕರಣ
ಮಂಗಳೂರಿನಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ :
ಮಂಗಳೂರು: ಮಂಗಳೂರು ಹೊರವಲಯದ ಪಾಲ್ದಾನೆ ಎಂಬಲ್ಲಿ ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿನಿಯೊಬ್ಬಳು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ತೇಜತ್ (15) ಮೃತಪಟ್ಟವಿದ್ಯಾರ್ಥಿನಿ.
ಎಸ್ಸೆಸ್ಸೆಲ್ಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಈಕೆ ಮಂಗಳವಾರ ಸಂಜೆ ಶಾಲೆಯಿಂದ ಬಂದ ಬಳಿಕ ಕ್ಷುಲ್ಲಕ ಕಾರಣಕ್ಕೆ ಮನೆಯವರ ಜತೆ ಜಗಳ ಮಾಡಿದ್ದಳು. ಇದೇ ಕೋಪದಿಂದ ರೂಮಿಗೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಂವಿಜೆ ಮೆಡಿಕಲ್ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ, ಹಿರಿಯ ವೈದ್ಯ ಅರೆಸ್ಟ್