ಅಪ್ರಾಪ್ತ ಸೇರಿ ಆರು ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಮುದ್ದೇಬಿಹಾಳ ತಾಲೂಕಿನ ನಾಲತವಾಡದ ಸಂಗಮೇಶ ಜುಂಜವಾರ, ಚಿದಾನಂದ ಕಟ್ಟಿಮನಿ ಮತ್ತು ಮತ್ತೊಬ್ಬ ಮೂವರು ನಾಪತ್ತೆ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
ನಾಲತವಾಡ(ಡಿ.04): ಪೋಕ್ಸೋ ಪ್ರಕರಣ ದಾಖಲಿಸಿದಳೆಂಬ ಕಾರಣಕ್ಕೆ ಆರೋಪಿಗಳು ಜೀವ ಬೆದರಿಕೆ ಹಾಕಿದ್ದರಿಂದ ಮನನೊಂದ ಬಾಲಕಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಅಪ್ರಾಪ್ತ ಸೇರಿ ಆರು ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಮುದ್ದೇಬಿಹಾಳ ತಾಲೂಕಿನ ನಾಲತವಾಡದ ಸಂಗಮೇಶ ಜುಂಜವಾರ, ಚಿದಾನಂದ ಕಟ್ಟಿಮನಿ ಮತ್ತು ಮತ್ತೊಬ್ಬ ಮೂವರು ನಾಪತ್ತೆ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
Mangaluru: ಲವ್, ಸೆಕ್ಸ್, ದೋಖಾ ಕೇಸ್; ಅಪ್ರಾಪ್ತ ಯುವತಿ ಸಾವು
ಇನ್ನೂ ಮೂವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ಬಾಲಕಿ ನಾಲತವಾಡದ ಶಾಲೆಯೊಂದರಲ್ಲಿ 10ನೇ ತರಗತಿ ಓದುತ್ತಿದ್ದಳು.
ಆರೋಪಿ ಸಂಗಮೇಶ ಜುಂಜವಾರ ಶಾಲೆಗೆ ಹೋಗಿ ಬರುವಾಗ ಲೈಂಗಿಕ ಕಿರುಕುಳ ಕೊಡುತ್ತಿದ್ದ. ಬಾಲಕಿ, ಪೋಕೋ ಪ್ರಕರಣ ದಾಖಲಿಸಿದ್ದಳು. ಇದರಿಂದ ಕೋಪಗೊಂಡು ಸಂಗಮೇಶ ಬಾಲಕಿಗೆ ಜೀವ ಬೆದರಿಕೆ ಹಾಕಿದ್ದ. ಇದೇ ಪ್ರಕರಣದ ಆರೋಪಿಗಳಾದ ಸಂಗಮೇಶ, ಮೌನೇಶ ವಿರುದ್ಧ ಬಾಲಕಿಗೆ ಬಲವಂ ತವಾಗಿ ತಾಳಿ ಕಟ್ಟಿದ ಮತ್ತೊಂದು ಫೋಟ್ರೊ ಪ್ರಕರಣ ಕೂಡ ದಾಖಲಾಗಿತ್ತು.
15 ಲಕ್ಷ ಮೋಸ ಮಾಡಿದ ಕಾಲೇಜು ಸಹಪಾಠಿ, ನೇಣಿಗೆ ಕೊರಳುಕೊಟ್ಟ 19 ವರ್ಷದ ಯುವತಿ!
ಬೆಂಗಳೂರು: ಕಾಲೇಜಿನಲ್ಲಿ ಜೊತೆಯಾಗಿಯೇ ಓದುತ್ತಿದ್ದ ಸಹಪಾಠಿಯೊಬ್ಬ 15 ಲಕ್ಷ ರೂಪಾಯಿ ಮೋಸ ಮಾಡಿದ್ದರಿಂದ 19 ವರ್ಷದ ಯುವತಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ಡಿ. 3 ರಂದು ನಡೆದಿತ್ತು.
ರಾಜಾಜಿನಗರದಲ್ಲಿರುವ ತಮ್ಮ ಮನೆಯಲ್ಲಿಯೇ ಆಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಡೆಕ್ಕನ್ ಹೆರಾಲ್ಡ್ ವರದಿ ಮಾಡಿರುವಂತೆ ನವೆಂಬರ್ 29 ರಂದು ಪ್ರಿಯಾಂಕಾ ತನ್ನ ಮನೆಯ ಬಾಲ್ಕನಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಸಾವಿಗೂ ಮುನ್ನ ಡೆತ್ ನೋಟ್‌ಅನ್ನು ಆಕೆ ಬರೆದಿಟ್ಟಿದ್ದು, ತನ್ನ ಕಾಲೇಜು ಸಹಪಾಠಿ ದಿಗಂತ್ ತನಗೆ ₹ 15 ಲಕ್ಷ ಮೌಲ್ಯದ ಚಿನ್ನಾಭರಣವನ್ನು ವಂಚಿಸಿದ್ದಾನೆ ಎಂದು ಆರೋಪಿಸಿದ್ದಾರೆ. ಹೂಡಿಕೆ ನೆಪದಲ್ಲಿ ಹಣದ ವಂಚನೆ ಮಾಡಿದ್ದಾನೆ ಎಂದು ತಿಳಿಸಿದ್ದಳು ಎಂದು ಪೊಲೀಸರು ತಿಳಿಸಿದ್ದರು.
ತನ್ನಲ್ಲಿದ್ದ ಅಪಾರ ಮೌಲ್ಯದ ಚಿನ್ನಾಭರಣಗಳನ್ನು ತೆಗೆದುಕೊಂಡು ಕ್ಯಾಸಿನೋಗಳಲ್ಲಿ ಆತ ಹೂಡಿಕೆ ಮಾಡಿದ್ದ ಎಂದು ದಿಗಂತ್ ಬಗ್ಗೆ ಪ್ರಿಯಾಂಕಾ ತಿಳಿಸಿದ್ದಾಳೆ ಎಂದು ಎಫ್‌ಐಆರ್‌ನಲ್ಲಿ ದಾಖಲಾಗಿದೆ. ಆಕೆ ಪದೇ ಪದೇ ಚಿನ್ನಾಭರಣವನ್ನು ವಾಪಾಸ್ ನೀಡುವಂತೆ ಕೇಳಿದರೂ, ದಿಗಂತ್ ಹಿಂದಿರುಗಿಸಲು ವಿಫಲನಾಗಿದ್ದ. ಭರತ್ ಕುಮಾರ್ ನೀಡಿದ ದೂರಿನ ಮೇರೆಗೆ ರಾಜಾಜಿನಗರ ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 108 (ಆತ್ಮಹತ್ಯೆಗೆ ಪ್ರಚೋದನೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
25ರ ಹರೆಯದ ಏರ್ ಇಂಡಿಯಾ ಮಹಿಳಾ ಪೈಲಟ್ ನಿಗೂಢ ಸಾವು: ಗೆಳೆಯನ ವಿರುದ್ಧ ಕೊಲೆ ಆರೋಪ
ದೆಹಲಿಯಿಂದ ಸ್ಪಾ ಕೆಲಸಕ್ಕೆ ಬೆಂಗಳೂರಿಗೆ ಬಂದು ನೇಣಿಗೆ ಶರಣಾದ ಯುವತಿ; ಅಂಥದ್ದೇನಾಯ್ತು?
ಬೆಂಗಳೂರು: ಭಾರತದ ರಾಜಧಾನಿ ದೆಹಲಿಯಿಂದ ದೇಶದಲ್ಲಿಯೇ ಅತ್ಯಂತ ಹೆಚ್ಚು ಉದ್ಯೋಗಾವಕಾಶಗಳನ್ನು ಒದಗಿಸುತ್ತಿರುವ ನಗರವಾಗಿರುವ ಬೆಂಗಳೂರಿಗೆ ಕಳೆದ ಒಂದೂವರೆ ತಿಂಗಳ ಹಿಂದಷ್ಟೇ ಬಂದು ನೆಲೆಸಿದ್ದ ಸುಂದರ ಯುವತಿಯೊಬ್ಬಳು ಕಳೆದ ಮೂರು ದಿನಗಳ ಹಿಂದೆ ಮನೆಯಲ್ಲಿ ನೇಣಿಗೆ ಶರಣಾಗಿದ್ದು, ತಡವಾಗಿ ಪ್ರಕರಣ ಬೆಳಕಿಗೆ ಬಂದಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೊಬ್ಬ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ಯುವತಿಯನ್ನು ಸೋನಿಯಾ (24) ಎಂದು ಗುರುತಿಸಲಾಗಿದೆ. ಸೋಮವಾರ ರಾತ್ರಿ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ದೆಹಲಿ ಮೂಲದ ಸೋನಿಯಾ ಕಳೆದ ಒಂದೂವರೆ ತಿಂಗಳ ಹಿಂದಷ್ಟೇ ಬೆಂಗಳೂರಿಗೆ ಬಂದು ಇಲ್ಲಿಕ ಖಾಸಗಿ ಸ್ಪಾ ಒಂದರಲ್ಲಿ ಕೆಲಸ ಮಾಡುತ್ತಿದ್ದಳು. ಆದರೆ, ಸೋಮವಾರ ರಾತ್ರಿ ತನ್ನ ತಾಯಿಯೊಂದಿಗೆ ಒಂದು ಗಂಟೆಗೂ ಹೆಚ್ಚು ಕಾಲ ಮಾತನಾಡಿದ್ದಾಳೆ. ಆಗ ಕೆಲಸದ ಸ್ಥಳದಲ್ಲಿನ ಕಷ್ಟವನ್ನೂ ಹಾಗೂ ಕುಟುಂಬದಿಂದ ದೂರ ಇರುವುದರಿಂದ ಆಗುತ್ತಿರುವ ಕಷ್ಟವನ್ನೂ ಹೇಳಿಕೊಂಡಿದ್ದಾಳೆ. ಇದಾದ ಬಳಿಕ ತಾನಿದ್ದ ಕೋಣೆಯಲ್ಲಿ ನೇಣು ಬಿಗಿದುಕೊಂಡಿರಬಹುದು ಎಂದು ಶಂಕಿಸಲಾಗಿದೆ.