ಅಪ್ತಾಪ್ತೆ ಮೇಲೆ ರೇಪ್, ಮಗುವಿಗೆ ಜನ್ಮ ನೀಡಿದ ಬೆನ್ನಲ್ಲೇ ಮತ್ತೆ ಸಮೂಹಿಕ ಅತ್ಯಾಚಾರ!

Published : Aug 08, 2023, 06:04 PM ISTUpdated : Aug 08, 2023, 06:05 PM IST
ಅಪ್ತಾಪ್ತೆ ಮೇಲೆ ರೇಪ್,  ಮಗುವಿಗೆ ಜನ್ಮ ನೀಡಿದ ಬೆನ್ನಲ್ಲೇ ಮತ್ತೆ ಸಮೂಹಿಕ ಅತ್ಯಾಚಾರ!

ಸಾರಾಂಶ

ಅಪ್ರಾಪ್ತೆ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಬೆದರಿಸಿದ್ದಾರೆ. ಮನೆಯಲ್ಲೂ ಹೇಳದ ಬಾಲಕಿ ಗರ್ಭಿಣಿಯಾಗಿದ್ದಾಳೆ. ಪೋಷಕರು ಬಾಲಕಿಯನ್ನು ಆಸ್ಪತ್ರೆ ದಾಖಲಿಸಿದ್ದಾರೆ. ಮಗುವಿಗೆ ಜನ್ಮ ನೀಡಿದ ಬೆನ್ನಲ್ಲೇ ಬಾಲಕಿ ಮೇಲೆ ಮತ್ತೆ ಸಾಮಾಹಿಕ ಅತ್ಯಾಚಾರವಾಗಿದೆ. ಗನಘೋರ ಘಟನೆ ವಿವರ ಇಲ್ಲಿದೆ.

ಜೈಪುರ(ಆ.08) ಅಪ್ರಾಪ್ತ ಬಾಲಕಿಯರ ಮೇಲಿನ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿದೆ. ಅತ್ಯಾಚಾರ ಹಾಗೂ ಕೊಲೆ ಪ್ರಕರಣಗಳಿಗೆ ಕಡಿವಾಣ ಬೀಳುತ್ತಿಲ್ಲ. ಇದೀಗ ಮತ್ತೊಂದು ಘನಘೋರ ಘಟನೆ ವರದಿಯಾಗಿದೆ. ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಕಾಮುಕರು ವಿಚಾರ ಬಾಯ್ಬಿಟ್ಟರೆ ಇಡೀ ಕುಟುಂಬವನ್ನೇ ಹತ್ಯೆ ಮಾಡೋದಾಗಿ ಬೆದರಿಸಿದ್ದಾರೆ. ಹೀಗಾಗಿ ರೇಪ್ ವಿಚಾರ ರಹಸ್ಯವಾಗಿಟ್ಟ ಬಾಲಕಿ ಗರ್ಭಿಣಿಯಾಗಿದ್ದಾಳೆ. ತೀವ್ರ ಹೊಟ್ಟೆ ನೋವಿನ ಕಾರಣ ಪೋಷಕರು ಆಸ್ಪತ್ರೆ ದಾಖಲಿಸಿದ ಬೆನ್ನಲ್ಲೇ ಮಗುವಿಗೆ ಜನ್ಮ ನೀಡಿದ್ದಾಳೆ. ದುರಂತ ಅಂದರೆ, ಮಗುವಿಗೆ ಜನ್ಮ ನೀಡಿದ ಮರುದಿನ ಮತ್ತೆ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

ಸರ್ಕಾರಿ ಆಸ್ಪತ್ರೆಗೆ ಬಾಲಕಿಯನ್ನು ಹೊಟ್ಟೆ ನೋವಿನ ಕಾರಣ ದಾಖಲಿಸಲಾಗಿತ್ತು. ತಪಾಸಣೆ ನಡೆಸಿದ ವೈದ್ಯರಿಗೆ ಅಚ್ಚರಿ ಕಾದಿತ್ತು. ಬಾಲಕಿ ಗರ್ಭಿಣಿಯಾಗಿದ್ದಳು. ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇನ್ನೂ ಮದುವೆಯಾಗದ ಅಪ್ರಾಪ್ತ ಬಾಲಕಿಯಾದ ಕಾರಣ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಆದರೆ ಬಾಲಕಿ ಪೋಷಕರು ದೂರು ನೀಡಲು ನಿರಾಕರಿಸಿದ್ದಾರೆ. ಇತ್ತ ಬಾಲಕಿ ಕೂಡ ಆರೋಪಿಗಳ ಹೆಸರು ಹೇಳಲು ಹಿಂದೇಟು ಹಾಕಿದ್ದಾಳೆ. ಪೊಲೀಸರು ಪರಿ ಪರಿಯಾಗಿ ಮನವಿ ಮಾಡಿದರೂ ಸಾಮಾಜ ಹಾಗೂ ಗೌರವಕ್ಕೆ ಅಂಜಿ ಪೋಷಕರು ದೂರು ನೀಡಲಿಲ್ಲ. 

ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿ ಜೀವಂತವಾಗಿ ಉರಿಯುತ್ತಿದ್ದ ಕಲ್ಲಿದಲ್ಲು ಕುಂಡಕ್ಕೆ ಎಸೆದ ಕಾಮಕರು!

ಆಸ್ಪತ್ರೆ ದಾಖಲಾದ ಕೆಲ ದಿನಗಳಲ್ಲಿ ಬಾಲಕಿ ಮಗುವಿಗೆ ಜನ್ಮ ನೀಡಿದ್ದಾಳೆ. ಎರಡು ದಿನಗಳ ಬಳಿಕ ಬಾಲಕಿ ತಾಯಿ ದಾಖಲೆ ನೋಂದಣಿ, ಔಷದಿ ಸೇರಿದಂತೆ ಇತರ ಕಾರ್ಯಕ್ಕಾಗಿ ಆಸ್ಪತ್ರೆ ಕಚೇರಿಗೆ ತೆರಳಿದ್ದಾರೆ. ಇದೇ ವೇಳೆ ಅಪ್ರಾಪ್ತ ಬಾಲಕಿಯನ್ನು ನೋಡಲು ಬಂದಿರುವ ಆಪ್ತರಂತೆ ನಟಿದೆ ಅದೇ ಕಾಮುಕರು ಮತ್ತೆ ಬಾಲಕಿ ಕೋಣೆ ಪ್ರವೇಶಿಸಿದ್ದಾರೆ. ಬಳಿಕ ಮತ್ತೆ ಸಾಮೂಹಿಕ ಅತ್ಯಾಚಾರ ಎಸಗಿ ಪರಾರಿಯಾಗಿದ್ದಾರೆ.

ಜನ್ಮ ನೀಡಿದ ಬೆನ್ನಲ್ಲೇ ಸಾಮಾಹಿಕ ಅತ್ಯಾಚಾರವಾಗಿರುವ ಘಟನೆ ಕುಟುಂಬವನ್ನು ಮತ್ತಷ್ಟು ನೋವಿಗೆ ತಳ್ಳಿದೆ. ಘಟ್ಟಿ ಮನಸ್ಸು ಮಾಡಿದ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಇತ್ತ ಕೋರ್ಟ್ ಮುಂದೆ ಹಾಜರುಪಡಿಸಿ ಬಾಲಕಿ ಹೇಳಿಕೆಯನ್ನು ದಾಖಲಿಸಲಾಗಿದೆ. ಆಸ್ಪತ್ರೆಯ ಪಾರ್ಕಿಂಗ್ ವಲಯದಲ್ಲಿ ಕೆಲಸ ಮಾಡುತ್ತಿದ್ದ ಮೂವರು ಕಾರ್ಮಿಕರು, ಬಾಲಕಿ ಮನೆ ಅನತಿ ದೂರದ ನಿವಾಸಿಗಳಾಗಿದ್ದರು. ಇದೇ ಕಿರಾತಕರು ಬಾಲಕಿ ಮೇಲೆ ಹಲುವು ಬಾರಿ ಅತ್ಯಾಚಾರ ಎಸಗಿರುವುದು ತನಿಖೆಯಲ್ಲಿ ಬಯಲಾಗಿದೆ.

91 ಬಾಲಕಿಯರ ಮೇಲೆ ಅತ್ಯಾಚಾರ, 15 ವರ್ಷಗಳಿಂದ ರೇಪ್ ಮಾಡುತ್ತಿದ್ದ ಮಕ್ಕಳ ಕಲ್ಯಾಣ ಸಿಬ್ಬಂದಿ ಅರೆಸ್ಟ್!

ಇತ್ತ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.ಈ ಘಟನೆ ಬಳಿಕ ರಾಜಸ್ಥಾನದಲ್ಲಿ ಮಹಿಳೆಯರು, ಬಾಲಕಿಯರು ಸುರಕ್ಷಿತರಲ್ಲ ಅನ್ನೋ ಆರೋಪಕ್ಕೆ ಮತ್ತಷ್ಟು ಪುಷ್ಠಿ ಸಿಕ್ಕಿದೆ. ಇತ್ತ ಬಿಜೆಪಿ ಇದೇ ಪ್ರಕರಣ ಮುಂದಿಟ್ಟು ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ. ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಸಾಮೂಹಿಕ ಅತ್ಯಾಚಾರವಾಗಿದೆ. ಮಹಿಳೆರಿಗೆ ರಾಜಸ್ಥಾನದಲ್ಲಿ ಭದ್ರತೆ ಇಲ್ಲ. ಇದಕ್ಕೂ ಮೊದಲು ಅತ್ಯಾಚಾರವಾಗಿದ್ದರೂ ಪೊಲೀಸರು ಆರೋಪಿಗಳನ್ನು ಬಂಧಿಸಿಲ್ಲ ಯಾಕೆ? ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವಾಗಿದೆ ಎಂದರೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ಮಾಡಬೇಕಿತ್ತು ಎಂದು ಬಿಜೆಪಿ ಆರೋಪಿಸಿದೆ.

ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ ಅನ್ನೋ ಕಾರಣಕ್ಕೆ ರಾಜಸ್ಥಾನ ಕಾಂಗ್ರೆಸ್ ಸರ್ಕಾರ, ಪ್ರಕರಣಗಳನ್ನು ಮುಚ್ಚಿಹಾಕುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!
ಬೆಂಗಳೂರು ವಿಜಯ್ ಗುರೂಜಿ ಗ್ಯಾಂಗ್ ಸಮೇತ ಅರೆಸ್ಟ್; ಟೆಕ್ಕಿಗೆ ಲೈಂಗಿಕ ಶಕ್ತಿ ಹೆಚ್ಚಿಸೋದಾಗಿ ₹40 ಲಕ್ಷ ವಂಚನೆ!