ಮನೆಯಲ್ಲಿ ಅಪ್ಸರೆಯಂಥ ಮಡದಿ ಇದ್ದರೂ, ವಿವಾಹಿತೆಯೊಂದಿಗೆ ಅಕ್ರಮ ಸಂಬಂಧವನ್ನು ಬೆಳೆಸಿದ್ದ ಪತಿರಾಯನಿಗೆ ಪ್ರಶ್ನೆ ಮಾಡಿದ್ದಕ್ಕೆ ಹೆಂಡತಿಯ ಉಸಿರನ್ನೇ ನಿಲ್ಲಿಸಿದ್ದಾನೆ.
ವರದಿ : ಮಧು.ಎಂ.ಚಿನಕುರಳಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಮೈಸೂರು (ಆ.08): ಆರು ವರ್ಷಗಳ ಹಿಂದೆ ಸಾಲ ಸೋಲ ಮಾಡಿ ಮುದ್ದಾದ ಮಗಳನ್ನ ಅದ್ದೂರಿಯಾಗಿ ಮದುವೆ ಮಾಡಿಕೊಟ್ಟಿದ್ರು. ಆದ್ರೆ ಅಳಿಯ ಮಾತ್ರ ಮುದ್ದಾದ ಹೆಂಡತಿ ಬಿಟ್ಟು ಮತ್ತೊಬ್ಬಳ ಜೊತೆ ಲವ್ವಿ ಡವ್ವಿ ಶುರುಮಾಡಿಕೊಂಡಿದ್ದ. ಇದೀಗಾ ಗಂಡನ ಅನೈತಿಕ ಸಂಬಂಧ ಪ್ರಶ್ನೆ ಮಾಡಿದ ಆಕೆ ಮಸಣ ಸೇರಿದ್ದಾಳೆ.
ಗಂಡನ ಪರಸ್ತ್ರೀ ಲವ್ವಿಡವ್ವಿಗೆ ಬಲಿಯಾದವಳ ಹೆಸರು ಮನುರಾಣಿ. ಈಕೆ ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ಕುಳ್ಳನಕೊಪ್ಪಲು ನಿವಾಸಿ. ಕಳೆದ 6 ವರ್ಷಗಳ ಹಿಂದೆ ಪಕ್ಕದ ಹನುಮನಹಾಳು ಗ್ರಾಮದ ಮಂಜು ಎಂಬಾತನಿಗೆ ಮದುವೆ ಮಾಡಿಕೊಟ್ಟಿದ್ದರು. ಮಂಜು ಕೇಳಿದಷ್ಟು ವರದಕ್ಷಿಣೆ ಕೊಟ್ಟು ಅದ್ದೂರಿಯಾಗಿ ಮದುವೆ ಮಾಡಿದ್ದಾರೆ. ಊರಲ್ಲಿ ವ್ಯವಸಾಯ ಮಾಡಿಕೊಂಡು ಮಗಳನ್ನ ಸಾಕುತ್ತಾನೆ ಎಂದು ಕೊಂಡಿದ್ದ ಮನುರಾಣಿ ಕುಟುಂಬಕ್ಕೆ ಒಂದೆರಡು ವರ್ಷದಲ್ಲೆ ಮಂಜುವಿನ ನಿಜ ಬಣ್ಣ ಬಯಲಾಗಿದೆ.
ಮಂಗಳೂರಿನ ಜನರು ಪತ್ನಿಗೆ ಕಳ್ಳಿ ಅಂತಾರೆಂದು ಬೆಂಗಳೂರಿಗೆ ಕರೆತಂದು ಕೊಲೆ ಮಾಡಿದ ಪತಿ
ಅದ್ಧೂರಿಯಾಗಿ ಮದುವೆ ಮಾಡಿಕೊಟ್ಟ ಅಪ್ಪ: ಇನ್ನು ಮುದ್ದಾದ ಹುಡುಗಿಯನ್ನು ನೋಡಿಕೊಂಡು ಅದ್ಧೂರಿ ಮದುವೆ ಮಾಡಿಕೊಂಡಿದ್ದರೂ, ಪತಿ ಮಂಜು ಅದೇ ಗ್ರಾಮದ ವಿವಾಹಿತ ಮಹಿಳೆ ಜೊತೆ ಅಕ್ರಮ ಸಂಬಂಧ ಇಟ್ಟು ಕೊಂಡಿದ್ದನಂತೆ. ಈ ವಿಚಾರವಾಗಿ ಮನುರಾಣಿ ಮೊದಲಿಗೆ ಗಂಡನನ್ನ ಪ್ರಶ್ನೆ ಮಾಡಿದ್ದಾಳೆ. ಆದ್ರೆ ಅದರಿಂದ ಯಾವುದೇ ಪ್ರಯೋಜನವಾಗಿಲ್ಲ. ಈ ವಿಚಾರವನ್ನ ಕುಟುಂಬಸ್ಥರ ಮುಂದೆಯು ಹೇಳಿಕೊಂಡಿದ್ದಾಳೆ. ಗ್ರಾಮಸ್ಥರ ಜೊತೆ ಸೇರಿ ರಾಜೀ ಪಂಚಾಯತಿ ಮಾಡಿದ್ದರಂತೆ. ಆದ್ರೆ ಇಷ್ಟೆಲ್ಲ ಆದ್ರು ಮಂಜು ಮಾತ್ರ ತನ್ನ ಚಾಳಿ ಮುಂದುವರೆಸಿದ್ದಾನೆ.
ಗಂಡನೇ ವಿಷ ಕುಡಿಸಿ ಸಾಯಿಸಿದ್ದಾನೆಂದು ಆರೋಪ: ತನ್ನ ತವರು ಮನೆಯವರು ಮುದ್ದಾಗಿ ಸಾಕಿ ಸಲುಹಿ, ಸಾಲ-ಸೋಲ ಮಾಡಿ ಅದ್ಧೂರಿಯಾಗಿ ಮದುವೆ ಮಾಡಿಕೊಟ್ಟಿದ್ದರೂ ತನ್ನ ಗಂಡ ಮಾತ್ರ ನೆಟ್ಟಗೆ ಸಂಸಾರ ಮಾಡಿಕೊಂಡು ಹೋಗದೇ ಹಾದಿ ತಪ್ಪಿದ್ದರಿಂದ ಮನುರಾಣಿ ಭಾರಿ ನೊಂದುಕೊಂಡಿದ್ದಳು. ಪ್ರತಿನಿತ್ಯ ಇದೇ ಕೊರಗಿನಲ್ಲಿ ಇರುತ್ತಿದ್ದ ಮುನುರಾಣಿ, ಗಂಡನ ಅಕ್ರಮ ಸಂಬಂಧಕ್ಕೆ ಬೇಸತ್ತು ಆತ್ಮಹತ್ಯೆ ದಾರಿ ಹಿಡಿದ್ದಾಳೆ. ಆದರೆ, ಕುಟುಂಬಸ್ಥರು ಇದು ಆತ್ಮಹತ್ಯೆ ಅಲ್ಲ ಗಂಡನೆ ವಿಷ ಕುಡಿಸಿ ಸಾಯಿಸಿದ್ದಾನೆ ಅಂತ ಆರೋಪಿಸಿದ್ದಾರೆ.
ಬೆಂಗ್ಳೂರು-ಮಂಗ್ಳೂರು ಆಯ್ತು.. ಈಗ ಹುಬ್ಬಳ್ಳಿಯಲ್ಲಿದ್ದಾರೆ ಡ್ರಗ್ಸ್ ಪೆಡ್ಲರ್: ತಮಿಳುನಾಡು ಪೊಲೀಸರಿಂದ ಯುವಕನ ಬಂಧನ
ಅಕ್ರಮ ಸಂಬಂಧ ಪ್ರಶ್ನೆ ಮಾಡಿದ್ದಕ್ಕೆ ವರದಕ್ಷಿಣೆ ಕಿರುಕುಳ: ಇನ್ನು ಇದಷ್ಟೆ ಅಲ್ಲದೆ ಮಂಜು ವರದಕ್ಷಿಣೆ ಕಿರುಕುಳವನ್ನ ನೀಡೋಕೆ ಶುರುಮಾಡಿದ್ದನಂತೆ. ಪತ್ನಿ ಯಾವಾಗ ಅಕ್ರಮ ಸಂಬಂಧ ಪ್ರಶ್ನೆ ಮಾಡಿದ್ದಳೋ, ಆಗಿನಿಂದಲೂ ವರದಕ್ಷಿಣಿ ಕೇಳೋಕೆ ಶುರುಮಾಡಿದ್ದನು. ಹಸು ಸಾಕಬೇಕು, ವ್ಯವಸಾಯಕ್ಕೆ ಹಣ ಬೇಕು ಅಂತೆಲ್ಲ ಹೇಳಿ ಆಗಿಂದಾಗ್ಗೆ ತವರು ಮನೆಯಿಂದ ಹಣ ಕೇಳೋಕೆ ಶುರುಮಾಡಿದ್ದನು. ಇನ್ನು ಮಗಳು ಚೆನ್ನಾಗಿರಲಿ ಕುಟುಂಬಸ್ಥರು ಅಂತ ಸಾಲ ಸೋಲ ಮಾಡಿ ಹಣವನ್ನು ಕೊಟ್ಟಿದ್ದರು. ಆದರೆ, ಇದೀಗ ಪಾಪಿ ಅಳಿಮಯ್ಯ ಅಕ್ರಮ ಸಂಬಂಧಕ್ಕಾಗಿ ಮಗಳನ್ನೆ ಕೊಂದಿದ್ದಾನೆ ಅಂತ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ.
ಒಟ್ಟಾರೆ, ಗಿಣಿಯಂತೆ ಸಾಕಿದ್ದ ಮಗಳನ್ನ ಗಿಡುಗನ ಕೈಗೆ ಕೊಟ್ಟುಬಿಟ್ಟವಲ್ಲ ಎಂದು ಕೊರಗುವ ಕುಟುಂಬಸ್ಥರು, ಅದೇನೆ ಇರಲಿ ಇಂತಹ ಪಾಪಿಗಳಿಗೆ ತಕ್ಕ ಶಿಕ್ಷೆಯಾಗಲಿ ಎಂದು ಕೇಳಿಕೊಳ್ಳುತ್ತಿದ್ದಾರೆ.