ಮಹಿಳಾ ಪೊಲೀಸ್ ಪೇದೆಗೆ 2 ದಿನದಲ್ಲಿ 300 ಕಾಲ್, ಕಿರುಕುಳ ನೀಡಿದವನಿಗೆ ಜೈಲು ಶಿಕ್ಷೆ ವಿಧಿಸಿದ ಕೋರ್ಟ್!

Published : Aug 08, 2023, 05:19 PM IST
ಮಹಿಳಾ ಪೊಲೀಸ್ ಪೇದೆಗೆ 2 ದಿನದಲ್ಲಿ 300 ಕಾಲ್, ಕಿರುಕುಳ ನೀಡಿದವನಿಗೆ ಜೈಲು ಶಿಕ್ಷೆ ವಿಧಿಸಿದ ಕೋರ್ಟ್!

ಸಾರಾಂಶ

ಮಹಿಳಾ ಪೊಲೀಸ್ ಪೇದೆಗೆ 2 ದಿನದಲ್ಲಿ 300 ಫೋನ್ ಕಾಲ್ ಮಾಡಿದ್ದಾನೆ. ಲೈಂಗಿಕ ಕಿರುಕುಳ ನೀಡಿದ್ದಾನೆ. ಈ ಕುರಿತು ಪ್ರಕರಣ ಕೂಡ ದಾಖಲಾಗಿತ್ತು. ವಿಚಾರಣೆ ನಡೆಸಿದ ಕೋರ್ಟ್, ಇದೀಗ ಕಿರುಕುಳ ನೀಡಿದ  ವ್ಯಕ್ತಿಯನ್ನು ಜೈಲು ಶಿಕ್ಷೆ ವಿಧಿಸಿದೆ.  

ತಿರುವನಂತಪುರಂ(ಆ.08) ಮಹಿಳಾ ಪೊಲೀಸ್ ಠಾಣೆಗೆ ಕರೆ ಮಾಡಿ ಕಿರುಕುಳ ನೀಡಿದ ವ್ಯಕ್ತಿಗೆ ಕೋರ್ಟ್ 3 ವರ್ಷ ಜೈಲು ಶಿಕ್ಷ ವಿಧಿಸಿದೆ. 2 ದಿನದಲ್ಲಿ ಈತ 300 ಫೋನ್ ಕಾಲ್ ಮಾಡಿದ್ದಾನೆ. ಕರೆ ಸ್ವೀಕರಿಸುವಾಗ ಕಟ್ ಮಾಡಿ ವಿಕೃತ ಆನಂದ ಪಡೆದಿದ್ದಾನೆ. ಈ ಕುರಿತು ಪ್ರಕರಣ ದಾಖಲಿಸಿದ ಮಹಿಳಾ ಪೊಲೀಸ್ ಠಾಣೆ ಅಧಿಕಾರಿಗಳು ತನಿಖೆ ನಡೆಸಿದ್ದಾರೆ. ಬಳಿಕ ಫೋನ್ ಟ್ರೇಸ್ ಮಾಡಿ ವ್ಯಕ್ತಿಯನ್ನು ಪತ್ತೆ ಹಚ್ಚಿದ್ದಾರೆ. 2019ರಲ್ಲಿ ನಡೆದ ಪ್ರಕರಣ ವಿಚಾರಣೆ ನಡೆಸಿದ ಕೋರ್ಟ್, ಇದೀಗ ತೀರ್ಪು ನೀಡಿದೆ. ಕಿರುಕುಳ ನೀಡಿದ ವ್ಯಕ್ತಿಗೆ 3 ವರ್ಷ ಜೈಲು ಶಿಕ್ಷೆ ನೀಡಿದ ಘಟನೆ ಕೇರಳದಲ್ಲಿ ನಡೆದಿದೆ.

ಕೇರಳ ವನಿತಾ ಪೊಲೀಸ್ ಠಾಣೆಗೆ ಜುಲೈ 11, 2019ರಲ್ಲಿ ಜೋಸ್ ಅನ್ನೋ ವ್ಯಕ್ತಿ ಎರಡು ದಿನ ಸತತ ಕರೆ ಮಾಡಿದ್ದಾರೆ. ಫೋನ್ ಸ್ವೀಕರಿಸುವ ಮಹಿಳಾ ಪೊಲೀಸ್ ಪೇದೆಗಳ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ. ಲೈಂಗಿಕ ಕಿರುಕುಳ ನೀಡಿದ್ದಾರೆ. ಮಹಿಳಾ ಪೊಲೀಸ್ ಪೇದೆ ತಕ್ಕ ತಿರುಗೇಟು ನೀಡಿದ ಬಳಿಕ, ಜೋಸ್ ಪದೇ ಪದೇ ಕರೆ ಮಾಡಿ ಕಿರುಕುಳ ನೀಡಿದ್ದಾನೆ. ಇಷ್ಟೇ ಅಲ್ಲ ಮಹಿಳಾ ಪೊಲೀಸರ ಕರ್ತವ್ಯಕ್ಕೂ ಅಡ್ಡಿಪಡಿಸಿದ್ದಾನೆ.

ಖಾಲಿ ಇಂಜೆಕ್ಷನ್‌ ಚುಚ್ಚಿ ಆಸ್ಪತ್ರೆಯಲ್ಲೇ ಬಾಣಂತಿಯ ಸಾಯಿಸಲು ಯತ್ನಿಸಿದ ನಕಲಿ ನರ್ಸ್‌ ಬಂಧನ!

ಎರಡು ದಿನದಲ್ಲಿ 300 ಫೋನ್ ಕಾಲ್ ಮಾಡಿ ಮಹಿಳಾ ಪೊಲೀಸರಿಗೆ ತೀವ್ರ ತಲೆನೋವಾಗಿ ಪರಿಣಮಿಸಿದ್ದಾನೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮಹಿಳಾ ಪೊಲೀಸರು, ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ನಂಬರ್ ಪಡೆದು ಲೋಕೇಶ್ ಟ್ರೇಸ್ ಮಾಡಿದ್ದಾರೆ. ಈತನ ಕಾಲ್ ಹಿಸ್ಟರಿ ಪಡೆದಿದ್ದಾರೆ. ಸಮಗ್ರ ದಾಖಲೆಯೊಂದಿಗೆ ತನಿಖೆ ನಡೆಸಿದ ಪೊಲೀಸರು ಜೋಸ್‌ನನ್ನು ಬಂಧಿಸಿದ್ದಾರೆ.

ಕೇರಳ ಪೊಲೀಸರಿಂದ ಕರ್ನಾಟಕ ಪೊಲೀಸರ ಬಂಧನ ಪ್ರಕರಣಕ್ಕೆ ಟ್ವಿಸ್ಟ್!

ಜೋಸ್ ಆಪ್ತರು ಕೋರ್ಟ್ ಮೆಟ್ಟಿಲೇರಿದ್ದಾರೆ. 2019ರಲ್ಲಿ ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ಹಲವು ಸುತ್ತಿನ ವಿಚಾರಣೆ, ದಾಖಲೆ, ಸಾಕ್ಷಿಗಳ ಪರೀಶೀಲನೆ ನಡೆಸಿದ ಕೋರ್ಟ್ ಇದೀಗ ತೀರ್ಪು ನೀಡಿದೆ. ಮಹಿಳಾ ಪೊಲೀಸ್ ಠಾಣೆಗೆ ಕರೆ ಮಾಡಿ ಕಿರುಕುಳ ನೀಡಿರುವುದು ಲೈಂಗಿಕ ಪ್ರಕರಣಕ್ಕೆ ಸಮವಾಗಿದೆ. ಮಹಿಳಾ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಲಾಗಿದೆ. ಮಹಿಳಾ ಪೊಲೀಸರ ಸ್ವತಂತ್ರವಾಗಿ ಕೆಲಸ ಮಾಡಲು ಇಂತಹ ಕಿಡಿಗೇಡಿಗಳು ಅಡ್ಡಿಯಾಗಿದ್ದಾರೆ. ಈ ಕಿಡೇಗೇಡಿಗಳು ಮಹಿಳಾ ಪೊಲೀಸರಿಗೆ ಈ ರೀತಿ ಕಿರುಕುಳ ನೀಡಿದರೆ, ಇನ್ನು ಸಾಮಾನ್ಯ ಮಹಿಳೆಯರ ಪಾಡೇನು? ಎಂದು ಕೋರ್ಟ್ ಪ್ರಶ್ನಿಸಿದೆ. ಮಹಿಳಾ ಪೊಲೀಸರಿಗೆ ಕಿರುಕುಳ ನೀಡಿದ ಜೋಸ್‌ಗೆ 3 ವರ್ಷ ಜೈಲು ಶಿಕ್ಷೆ ಹಾಗೂ 10,000 ರೂಪಾಯಿ ದಂಡ ವಿಧಿಸಿದ್ದಾರೆ. 

ಮಹಿಳಾ ಪೊಲೀಸ್‌ ಸಿಬ್ಬಂದಿಗೆ ನಿವೃತ್ತ ಯೋಧನಿಂದ ಕಿರುಕುಳ : ಮಂಗಳೂರು ಸಮೀಪದ ಉಳ್ಳಾಲ ಮಹಿಳಾ ಪೊಲೀಸ್‌ ಸಿಬ್ಬಂದಿಗೆ ನಿವೃತ್ತ ಯೋಧನೊಬ್ಬ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕುಂಪಲದ ಬಗಂಬಿಲ ಎಂಬಲ್ಲಿ ವರದಿಯಾಗಿದೆ. ಕೊಲ್ಯ ಕನೀರುತೋಟ ನಿವಾಸಿ, ಸದ್ಯ ಕುಂಪಲ ಅಮೃತನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುವ ಪ್ರಶಾಂತ್‌ (45) ವಿರುದ್ಧ ಕಿರುಕುಳ ಆರೋಪ ಸಂಬಂಧ ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಠಾಣೆಯೊಂದರ ಮಹಿಳಾ ಸಿಬ್ಬಂದಿ ಸ್ಕೂಟಿಯಲ್ಲಿ ಕರ್ತವ್ಯಕ್ಕೆ ತೆರಳುತ್ತಿದ್ದ ಸಂದರ್ಭ ಅಡ್ಡಗಟ್ಟಿಲೈಂಗಿಕ ಕಿರುಕುಳ ನೀಡಿದ್ದಾರೆ ಎನ್ನಲಾಗಿದ್ದು, ಸಂತ್ರಸ್ತೆ ತಕ್ಷಣ ಕಿರುಚಾಡಿದಾಗ ಸ್ಥಳೀಯರು ಜಮಾಯಿಸಿ ನಿವೃತ್ತ ಯೋಧನನ್ನು ಹಿಡಿದು ಉಳ್ಳಾಲ ಪೊಲೀಸರಿಗೆ ಒಪ್ಪಿಸಿದ್ದಾರೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕ್ಯಾಸ್ಟ್ರೋಲ್ ಬ್ರಾಂಡ್‌ನ ನಕಲಿ ಎಂಜಿನ್ ಆಯಿಲ್ ಉತ್ಪಾದನೆ ಮಾಡುತ್ತಿದ್ದ ಘಟಕದ ಮೇಲೆ ದಾಳಿ
ಕೋಲಾರ: ಅಪ್ಪ- ಅಮ್ಮನ ವಿಚ್ಚೇದನಕ್ಕೆ ಮನನೊಂದು 26 ವರ್ಷದ ಪುತ್ರ ಆತ್ಮ*ಹತ್ಯೆ!