ಮೆಟ್ರೋ ಪಿಲ್ಲರ್‌ ಬಿದ್ದು ತಾಯಿ -ಮಗು ಸಾವು: ಇಂಜಿನಿಯರ್‌ಗಳ ಅಮಾನತಿಗೆ ಸಿಎಂ ಆದೇಶ

By Sathish Kumar KH  |  First Published Jan 10, 2023, 9:15 PM IST

ಹೆಣ್ಣೂರು ಬಳಿ ನಿರ್ಮಾಣ ಹಂತದ ಪಿಲ್ಲರ್ ಕುಸಿತ ತಾಯಿ-ಮಗು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಬಿಎಂಆರ್‌ಸಿಎಲ್‌ ಸಂಸ್ಥೆಯ ಇಬ್ಬರು ಇಂಜಿನಿಯರ್‌ಗಳ ಅಮಾನತು. ಕಾಮಗಾರಿ ಗುತ್ತಿಗೆ ಪಡೆದುಕೊಂಡು ಕಾರ್ಯ ನಿರ್ವಹಿಸುತ್ತಿದ್ದ ನಾಗಾರ್ಜುನ ಕಂಪನಿಯ ಮುಖ್ಯಸ್ಥರ ಮೇಲೆ ಕ್ರಿಮಿನಲ್‌ ಕೇಸ್‌ ದಾಖಲು ಮಾಡುವಂತೆ ಸಿಎಂ ಬೊಮ್ಮಾಯಿ ಆದೇಶಿಸಿದ್ದಾರೆ.


ಬೆಂಗಳೂರು (ಜ.10): ಹೆಣ್ಣೂರು ಬಳಿ ನಿರ್ಮಾಣ ಹಂತದ ಪಿಲ್ಲರ್ ಕುಸಿತ ತಾಯಿ-ಮಗು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಬಿಎಂಆರ್‌ಸಿಎಲ್‌ ಸಂಸ್ಥೆಯ ಇಬ್ಬರು ಇಂಜಿನಿಯರ್‌ಗಳ ಅಮಾನತು. ಜೊತೆಗೆ, ಇಂಜಿನಿಯರ್‌ಗಳ ಮೇಲೆ ಕ್ರಿಮಿನಲ್‌ ಕೇಸ್‌ ಕೂಡ ದಾಖಲಿಸಲಾಗಿದೆ. ಇನ್ನು ಕಾಮಗಾರಿ ಗುತ್ತಿಗೆ ಪಡೆದುಕೊಂಡು ಕಾರ್ಯ ನಿರ್ವಹಿಸುತ್ತಿದ್ದ ನಾಗಾರ್ಜುನ ಕಂಪನಿಯ ಮುಖ್ಯಸ್ಥರ ಮೇಲೆ ಕ್ರಿಮಿನಲ್‌ ಕೇಸ್‌ ದಾಖಲು ಮಾಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದೇಶಿಸಿದ್ದಾರೆ.

ಬೆಂಗಳೂರಿನಲ್ಲಿ ಮೆಟ್ರೋ ಪಿಲ್ಲರ್ ಬಿದ್ದು ಸಾವು ಸಂಭವಿಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಸಿದರು. ಈ ವೇಳೆ ಮೆಟ್ರೊ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್‌, ಬೆಂಗಳೂರು ನಗರ ಪೊಲಿಸ್ ಆಯುಕ್ತ ಪ್ರತಾಪ್‌ ರೆಡ್ಡಿ ಹಾಗೂ ಡಿಸಿಪಿಗಳೊಂದಿಗೆ ಮುಖ್ಯಮಂತ್ರಿ ಬೊಮ್ಮಾಯಿ ಸಭೆ ನಡೆಸಿದರು. ಘಟನೆಯ ಬಗ್ಗೆ ಅಧಿಕಾರಿಗಳಿಂದ ಘಟನೆ ಬಗ್ಗೆ ಮಾಹಿತಿ ಪಡದುಕೊಂಡು ಅವೈಜ್ಞಾನಿಕವಾಗಿ ಹಾಗೂ ನಿರ್ಲಕ್ಷ್ಯದಿಂದ ಕಾಮಗಾರಿ ನಡೆಸಲು ಕಾರಣವಾಗಿದ್ದ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಮೇಲೆ ಕ್ರಮ ಕೈಗೊಳ್ಳಲು ಖಡಕ್‌ ಸೂಚನೆ ನೀಡಿದ್ದಾರೆ. ಇನ್ನು ಟೆಂಡರ್‌ ಪಡೆದ ಕಂಪನಿಯನ್ನು ಬ್ಲಾಕ್‌ ಲಿಸ್ಟ್‌ಗೆ ಸೇರಿಸಬೇಕು ಎಂದು ಸೂಚನೆ ನೀಡಿದ್ದಾರೆ.  ನಾಗಾರ್ಜುನ ಕಂಪನಿಯನ್ನು ಇನ್ನುಮುಂದೆ ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಸಿಎಂ ತಿಳಿಸಿದ್ದಾರೆ.

Tap to resize

Latest Videos

ಮೆಟ್ರೋ ಪಿಲ್ಲರ್‌ ಬಿದ್ದು ಇಬ್ಬರ ಸಾವು, ಬಿಎಂಆರ್‌ಸಿಎಲ್‌, ಗುತ್ತಿಗೆದಾರರ ವಿರುದ್ಧ ಪ್ರಕರಣ!

20 ಲಕ್ಷ ಪರಿಹಾರ: 
ಹೆಣ್ಣೂರು ಬಳಿ ನಿರ್ಮಾಣ ಹಂತದ ಪಿಲ್ಲರ್ ಕುಸಿತ ಪ್ರಕರಣ ಫಿಲ್ಲರ್ ಬಿದ್ದು ಸಾವನ್ನಪ್ಪಿದ್ದ ಕುಟುಂಬಕ್ಕೆ ಬಿಎಂಆರ್‌ಸಿಎಲ್‌ 20 ಲಕ್ಷ ಪರಿಹಾರ ಘೋಷಿಸಿದೆ. ಇನ್ನು ಸರ್ಕಾರದಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಲಾ 10 ಲಕ್ಷ ರೂ.ಕೊಡುವುದಾಗಿ ಹೇಳಿದ್ದಾರೆ. ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನೂ ಮೆಟ್ರೋ ಸಂಸ್ಥೆ ಭರಿಸಲಿದೆ. ಜೊತೆಗೆ ಸಂಬಂಧಪಟ್ಟ ಗುತ್ತಿಗೆದಾರರು ಹಾಗೂ ಅಧಿಕಾರಿಗಳಿಗೆ ನೋಟೀಸ್ ನೀಡಿತ್ತು. ಈ ವಿಚಾರವಾಗಿ ತನಿಖೆ ನಡೆಸಿ ವರದಿ ನೀಡುವಂತೆ ಐಐಎಸ್ಇ ಗೆ ಮನವಿ ಮಾಡಲಾಗುವುದೆಂದು ತಿಳಿಸಿತ್ತು. 

ಮೃತ ತೇಜಸ್ವಿನಿ ತಂದೆ ಮದನ್ ಹೇಳಿಕೆ: ಅಷ್ಟು ದೊಡ್ಡ ಪಿಲ್ಲರ್ ಹಾಕಬೇಕು ಅಂದ್ರೆ ಯೋಚನೆ ಬೇಡ್ವಾ. ಟೆಂಡರ್ ಯಾರು ಕೊಟ್ಟೋರು, ಅಧಿಕಾರಿಗಳು ಯಾರು ಬರಬೇಕು. ಟೆಂಡರ್ ಕೊಟ್ಟೋನ ಮನೆಯವರು ಸತ್ತಿದ್ರೆ ಹೀಗೆ ಆಗ್ತಾ ಇತ್ತ. ಬೆಂಗಳೂರಿನಲ್ಲಿ ಓಡಾಡೋಕೆ ಕಷ್ಟ ಆಗ್ತಾ ಇದೆ. ಟೆಂಡರ್ ನ ಬ್ಲಾಕ್ ಲೀಸ್ಟ್ ಮಾಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. 

ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್‌ ಉರುಳಿ ತಾಯಿ,ಮಗ ಸಾವು!

ಆರು ಜನರ ಮೇಲೆ ಎಫ್‌ಐಆರ್‌ ದಾಖಲು: ಮೆಟ್ರೋ ಪಿಲ್ಲರ್‌ ಕುಸಿತದ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿದೆ. ಸೈಟ್ ಇಂಜನಿಯರ್, ಮೆಟ್ರೋ ಕಾಂಟ್ರಾಕ್ಟರ್, ಸೈಟ್ ಇಂಚಾರ್ಜ್ ಆಫೀಸರ್, ಬಿಎಂಆರ್ಸಿಎಲ್ ಆಫೀಸರ್ಸ್ ಹಾಗೂ ಹಲವರು ಅಂತ ಎಫ್ಐಆರ್ ನಲ್ಲಿ ಉಲ್ಲೇಖ ಮಾಡಲಾಗಿದೆ. ತೇಜಸ್ವಿನಿ ಪತಿ ಲೋಹಿತ್ ಕುಮಾರ್ ಕೊಟ್ಟ ದೂರಿನನ್ವಯ ಎಫ್ಐಆರ್ ದಾಖಲಿಸಲಾಗಿದೆ. ಬೈಕಲ್ಲಿ ಮಾನ್ಯತಾ ಟೆಕ್ ಪಾರ್ಕ್‌ ಕಡೆಯಿಂದ ಬರ್ತಾ ಇದ್ದ ಕುಟುಂಬವು ಹೆಚ್ ಬಿ ಆರ್ ಲೇ ಔಟ್ ನ ಆಕ್ಸಿಸ್ ಬ್ಯಾಂಕ್ ಬಳಿ ಬಂದಾಗ ಪಿಲ್ಲರ್ ಬಿದ್ದಿದೆ. ಈ ವೇಳೆ ಹೆಂಡತಿ ಹಾಗೂ ಮಗುವಿನ ಮೇಲೆ ಬಿದ್ದಿದ್ದು ಎಲ್ಲರೂ ಕೆಳಗೆ ಬಿದ್ದಿದ್ದೇವೆ. ಆದ್ರೆ ಮಗ ಹಾಗೂ ಹೆಂಡತಿ ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾರೆ ಅಂತ ಎಫ್ಐಆರ್ ನಲ್ಲಿ ಉಲ್ಲೇಖ ಮಾಡಲಾಗಿದೆ.

ಸಿಎಂ‌ ಬಸವರಾಜ್ ಬೊಮ್ಮಯಿ ಹೇಳಿದ್ದೇನು? 
ಬೆಂಗಳೂರಿನಲ್ಲಿ ಮೆಟ್ರೋ ಪಿಲ್ಲರ್ ಬಿದ್ದು ಸಾವು ಸಂಭವಿಸಿದ ಹಿನ್ನೆಲೆಯಲ್ಲಿ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಕಾನೂನಾತ್ಮಕವಾಗಿ ಕ್ರಮ ತೆಗೆದುಕೊಳ್ಳವಂತೆ ಹೇಳಿದ್ದೇನೆ. ಹಿರಿಯ ಅಧಿಕಾರಿಗಳು ಮುಖ್ಯಸ್ಥರು ಕೂಡಲೇ ಕ್ರಮ ತೆಗೆದುಕೊಳ್ಳಬೇಕು. ಜೊತೆಗೆ ಸಸ್ಪೆಂಡ್ ಮಾಡುವುದಕ್ಕೆ ಹೇಳಿದ್ದೀನಿ. ಕಾಂಟ್ರಾಕ್ಟ್ ರ್  ಕಂಪನಿಯವರ ಮೇಲೆ ಕೇಸ್ ದಾಖಾಲಿಸುವುದಕ್ಕೆ ಹೇಳಿದ್ದೇನೆ. ತನಿಖೆಯನ್ನ ಯಾವ ರೀತಿಯಾಗಿ ಮಾಡ್ಬೇಕು ಎನ್ನುವುದನ್ನ ನಾಳೆ ತೀರ್ಮಾನ ಮಾಡ್ತೀವಿ. ಸಧ್ಯ ಮೆಟ್ರೋ ಕಡೆಯಿಂದ 20 ಲಕ್ಷ ಪರಿಹಾರ ಕೊಡುತ್ತಿದ್ದಾರೆ. ನನ್ನ ಕಡೆಯಿಂದ 10 ಲಕ್ಷ ಪರಿಹಾರ ಘೋಷಿಸಿದ್ದೇನೆ. ಆದ್ರೆ ಇಲ್ಲಿ ಪರಿಹಾರ ಮುಖ್ಯವಾಗುವುದಿಲ್ಲ. ಈ ಘಟನೆಗೆ ಕಾರಣ ಯಾರು? ಸಮಸ್ಯೆ ಏನಾಗಿತ್ತು ಎನ್ನುವುದನ್ನ ಪತ್ತೆ ಹಚ್ಚಿ ಕ್ರಮ ತೆಗೆದುಕೊಳ್ಳಬೇಕು. ಕೂಡಲೆ ತನಿಖೆಗೆ ಸೂಚಿಸಿದ್ದು ಈ ರೀತಿಯ ಘಟನೆಗಳು ಮತ್ತೆ  ನಡೆಯದಂತೆ ಸೂಚಿಸಿದ್ದೇನೆ. 

click me!