* ಕತ್ತು ಕೊಯ್ದುಕೊಂಡು ಮಾನಸಿಕ ಅಸ್ವಸ್ಥ ಆತ್ಮಹತ್ಯೆ
* ಮೈಸೂರು ಜಿಲ್ಲೆ ಟಿ. ನರಸೀಪುರ ತಾಲ್ಲೂಕಿನ ಕನ್ನಳ್ಳಿ ಮೋಳೆ ಗ್ರಾಮದಲ್ಲಿ ಘಟನೆ
* ಮೈಸೂರಿನ ಆಸ್ಪತ್ರೆಗೆ ಕರೆದೋಯ್ಯುವ ವೇಳೆ ಆಂಬುಲೆನ್ಸ್ ನಿಂದ ಜಿಗಿದ ಶಿವಣ್ಣ
ಮೈಸೂರು(ಜೂ. 20) ಕತ್ತು ಕೊಯ್ದುಕೊಂಡು ಮಾನಸಿಕ ಅಸ್ವಸ್ಥ ಆತ್ಮಹತ್ಯೆಗೆ ಯತ್ತಿಸಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಮೈಸೂರು ಜಿಲ್ಲೆ ತಿ. ನರಸೀಪುರ ತಾಲ್ಲೂಕಿನ ಕನ್ನಳ್ಳಿ ಮೋಳೆ ಗ್ರಾಮದಲ್ಲಿ ಘಟನೆ ನಡೆದಿದೆ.
ಶಿವಣ್ಣ (42) ವರ್ಷ ಮೃತ ದುರ್ದೈವಿ. ಘಟನೆ ಬಳಿಕ ಕೆ ಆರ್ ಆಸ್ಪತ್ರೆಗೆ ಚಿಕಿತ್ಸೆಗೆ ತೆರಳಿದ್ದ ಶಿವಣ್ಣ. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೈಸೂರಿನ ಆಸ್ಪತ್ರೆಗೆ ಕರೆದೋಯ್ಯುವ ವೇಳೆ ಆಂಬುಲೆನ್ಸ್ ನಿಂದ ಜಿಗಿದು ಕುಳಿತಿದ್ದನ್ನು ಕಂಡು ಜನ ಗಾಬರಿಗೆ ಒಳಗಾದರು. ಟಿ. ನರಸೀಪುರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಯಾವ ಕಾರಣಕ್ಕೆ ಮಾನಸಿಕ ಅಸ್ವಸ್ಥ ಇಂಥ ನಿರ್ಧಾರ ತೆಗೆದುಕೊಂಡ ಎನ್ನುವುದು ಗೊತ್ತಾಗಿಲ್ಲ.
undefined
ಇಲಿ ಪಾಷಾಣ ತಿಂದು ಮೃತಪಟ್ಟ ಮಗು, ಪೋಷಕರೇ ಎಚ್ಚರ
ಆಘಾತದಿಂದ ತಂದೆ ಸಾವು; ಮಗಳ ಆತ್ಮಹತ್ಯೆ ನಂತರ ಮನನೊಂದ ತಂದೆಯೂ ಸಾವನ್ನಪ್ಪಿದ್ದಾರೆ. ಮಳವಳ್ಳಿ ತಾಲೂಕಿನ ತಳಗವಾದಿ ಗ್ರಾಮದಲ್ಲಿ ದಾರುಣ ಘಟನೆ ನಡೆದಿದೆ.
ಪುತ್ರಿ ಬಾಂಧವ್ಯ (17), ರಾಜು (65) ಸಾವಿಗೀಡಾದ ತಂದೆ ಮಗಳು. ಪ್ರತಿಭಾನ್ವಿತೆಯಾಗಿದ್ದ ಮಗಳ ಸಾವಿನಿಂದ ತಂದೆಗೆ ಆಘಾತವಾಗಿದೆ. ಕಳೆದ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. 92 ಅಂಕ ಪಡೆದಿದ್ದ ಮಗಳೂ ಬನ್ನೂರು ಸರ್ಕಾರಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು.
ರಾಜು ಅವರ ನಾಲ್ಕು ಮಂದಿ ಹೆಣ್ಣು ಮಕ್ಕಳ ಪೈಕಿ ಮೂರು ಹೆಣ್ಣು ಮಕ್ಕಳು ಈಗಾಗಲೇ ಪದವಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಬಾಂಧವ್ಯ ಈ ವರ್ಷ 10 ನೇ ತರಗತಿಯಲ್ಲಿ ಉತ್ತಿರ್ಣಳಾಗಿದ್ದಾಳೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಹಣಕಾಸಿನ ತೊಂದರೆ ಉಂಟಾದ ಪರಿಣಾಮ ಮಗಳನ್ನು ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ದಾಖಲು ಮಾಡಲು ಪೋಷಕರು ಮಾತುಕತೆ ನಡೆಸಿದ್ದಾರೆ.
ಆದರೆ ಕೊನೆ ಮಗಳು ಬಾಂಧವ್ಯ ಎಲ್ಲಾ ಅಕ್ಕಂದಿರನ್ನು ಖಾಸಗಿ ಪದವಿ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡಿಸುತ್ತಿದ್ದಿರಿ ನನ್ನನ್ನು ಮಾತ್ರ ಸರ್ಕಾರಿ ಕಾಲೇಜಿಗೆ ಸೇರಿಸುತ್ತಿದ್ದಿರಿ. ಎಂದು ಮನೆಯಲ್ಲಿ ಗಲಾಟೆ ಮಾಡಿಕೊಂಡಿದ್ದಳು ಎನ್ನಲಾಗಿದೆ.
ಈ ಘಟನೆಯಿಂದ ಬೇಸತ್ತು ಬಾಂಧವ್ಯ ನಿನ್ನೆ ರಾತ್ರಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಘಟನೆ ಬಗ್ಗೆ ಮಾಹಿತಿ ತಿಳಿದ ಅಪ್ಪ ರಾಜಣ್ಣ ಆಘಾತಗೊಂಡರು. ಅವರಿಗೂ ಲೋ ಬಿಪಿ ಆಗಿದೆ. ತಕ್ಷಣವೇ ಅವರನ್ನು ಮಳವಳ್ಳಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವುದರೊಳಗೆ ರಾಜಣ್ಣ ಕೂಡ ಸಾವನ್ನಪ್ಪಿದ್ದಾರೆ. ಭಾನುವಾರ ಬೆಳಗ್ಗೆ ತಂದೆ , ಮಗಳ ಅಂತ್ಯಕ್ರಿಯೆ ತಗಳವಾದಿ ಗ್ರಾಮದಲ್ಲಿ ನಡೆಯಿತು. ವಿಶ್ವ ತಂದೆಯರ ದಿನದಂದೆ ತಂದೆ-ಮಗಳು ಕೊನೆಯಾಗಿದ್ದಾರೆ.