ತೀರ್ಥಹಳ್ಳಿ: ಅಪ್ರಾಪ್ತೆ ಮೇಲೆ ರೇಪ್‌, ಕಾಮುಕನ ಬಂಧನ

By Suvarna News  |  First Published Jun 20, 2021, 1:23 PM IST

* ಅಪ್ರಾಪ್ತೆಯನ್ನು ಪುಸಲಾಯಿಸಿ ಒತ್ತಾಯಪೂರ್ವಕವಾಗಿ ಮದುವೆಯಾಗಿದ್ದ ಆರೋಪಿ
* ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಪಟ್ಟಣದಲ್ಲಿ ನಡೆದಿದ್ದ ಘಟನೆ
* ಈ ಸಂಬಂಧ ತೀರ್ಥಹಳ್ಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು


ಶಿವಮೊಗ್ಗ(ಜೂ.20): ಅಪ್ರಾಪ್ತೆಯನ್ನು ಒತ್ತಾಯಪೂರ್ವಕವಾಗಿ ಮದುವೆಯಾಗಿ ಅತ್ಯಾಚಾರವೆಸಗಿದ ಆರೋಪದಡಿ ಯುವಕನನ್ನ ಪೊಲೀಸರು ಘಟನೆ ಜಿಲ್ಲೆಯ ತೀರ್ಥಹಳ್ಳಿ ಪಟ್ಟಣದಲ್ಲಿ ಇಂದು(ಭಾನುವಾರ) ನಡೆದಿದೆ. ತೀರ್ಥಹಳ್ಳಿ ಪಟ್ಟಣದ ಕಮಲ್ ಬಂಧಿತ ಆರೋಪಿಯಾಗಿದ್ದಾನೆ. 

ಬಂಧಿತ ಕಮಲ್ ಜೂ .11 ರಂದು ಅಪ್ರಾಪ್ತೆಯನ್ನು ಪುಸಲಾಯಿಸಿ ಒತ್ತಾಯಪೂರ್ವಕವಾಗಿ ಕರೆದುಕೊಂಡು ಹೋಗಿ ಪಟ್ಟಣದ ಸಮೀಪದ ದೇವಸ್ಥಾನವೊಂದರಲ್ಲಿ ಬಲಾತ್ಕಾರವಾಗಿ ತಾಳಿ ಕಟ್ಟಿದ್ದ ಎಂದು ಆರೋಪಿಸಲಾಗಿದೆ. 

Tap to resize

Latest Videos

ಆಧಾರ್‌  ಕಾರ್ಡ್‌ನಲ್ಲಿ ಮುರ್ತಜಾ, ಹೊರ ಲೋಕಕ್ಕೆ ಮೃತ್ಯುಂಜಯ!

17 ವರ್ಷದ ಬಾಲಕಿಯನ್ನು ಪ್ರೀತಿಸುವ ನೆಪದಲ್ಲಿ ಕಮಲ್ ಮದುವೆಯಾಗಿ ಬಳಿಕ ಅತ್ಯಾಚಾರವೆಸಗಿದ್ದ ಎಂದು ಯುವತಿಯ ಪಾಲಕರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಯುವಕ ಕಮಲ್‌ನನ್ನು ಪೋಕ್ಸೋ ಕಾಯ್ದೆಯಡಿ ಪೋಲಿಸರು ಬಂಧಿಸಿದ್ದಾರೆ.  ಈ ಸಂಬಂಧ ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 

click me!