ಉಪ್ಪಿನಂಗಡಿ; ಇಲಿ ಪಾಷಾಣ ತಿಂದು ಮೃತಪಟ್ಟ ಮಗು, ಪೋಷಕರೇ ಎಚ್ಚರ

By Suvarna News  |  First Published Jun 20, 2021, 6:11 PM IST

* ಇಲಿ ಪಾಷಾಣ ತಿಂದು ಮಗು ಸಾವು
* ಎರಡುವರೆ ವರ್ಷದ ಶ್ರೇಯಾ ಮೃತಪಟ್ಟ ಮಗು
* ಉಪ್ಪಿನಂಗಡಿ ಸಮೀಪದ ಬಜತ್ತೂರು ಗ್ರಾಮದ ಕೆಮ್ಮಾರ ಎಂಬಲ್ಲಿ ಘಟನೆ
* ಆಟವಾಡುತ್ತಿದ್ದಾಗ ಮನೆಯಲ್ಲಿದ್ದ ಇಲಿ ಪಾಷಾಣ ತಿಂದ ಮಗು


ಮಂಗಳೂರು(ಜೂ. 21)  ಇಲಿ ಪಾಷಾಣ ತಿಂದು ಮಗು ಸಾವನ್ನಪ್ಪಿದೆ. ಎರಡುವರೆ ವರ್ಷದ ಶ್ರೇಯಾ  ಆಟವಾಡುತ್ತಾ ಮನೆಯಲ್ಲಿದ್ದ ಇಲಿಪಾಷಾಣ ತಿಂದಿದೆ. ತಕ್ಷಣ ಆಸ್ಪತ್ರೆಗೆ ದಾಖಲಿಸಲು ಪ್ರಯತ್ನ ಮಾಡಿದರೂ ಫಲಕಾರಿಯಾಗಲಿಲ್ಲ.

ನಿವೃತ್ತ ಸೈನಿಕ ಸೈಜು ಹಾಗೂ ದೀಪ್ತಿ ದಂಪತಿಗಳ ಪುತ್ರಿ ಶ್ರೇಯಾ ಮನೆಯಲ್ಲಿ ಆಡವಾಡುತ್ತಿದ್ದಳು. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ಏನೂ ಅರಿಯದ ಪುಟ್ಟ ಕಂದ ದಾರುಣ ಸಾವಿಗೆ ಗುರಿಯಾಗಿದೆ.

Tap to resize

Latest Videos

undefined

ಲಾಕ್ ಡೌನ್ ನಲ್ಲೂ ಮೂರು ಮದುವೆ ಮಾಡಿಕೊಂಡ ಮೈಸೂರಿನ ರಂಗಿಲಾಲ

ಎಚ್ಚರ; ಲಾಕ್ ಡೌನ್ ಕಾರಣಕ್ಕೆ ಶಾಲೆಗಳು ಬಂದ್  ಇದ್ದು ನಿಧಾನಕ್ಕೆ ತೆರೆದುಕೊಳ್ಳುತ್ತಿವೆ. ಮಕ್ಕಳು ಆಟವಾಡುತ್ತ  ಎಲ್ಲಿಂದಲೋ ಎಲ್ಲಿಗೆ ತೆರಳುವುದು, ವಸ್ತುಗಳನ್ನು ಹುಡುಕುವುದನ್ನು ಮಾಡುತ್ತಿರುತ್ತವೆ. ಈ ಸಂದರ್ಭದಲ್ಲಿ ಪಾಲಕರು ಹೆಚ್ಚಿನ ನಿಗಾ ವಹಿಸುವುದು ಅನಿವಾರ್ಯವಾಗಿರುತ್ತದೆ. 

click me!