Latest Videos

ಪುರುಷತ್ವ, ಮರ್ಮಾಂಗ ಸೇರಿದಂತೆ ಅತ್ಯಾಚಾರಿಗಳಿಗೆ ನಡೆಸುವ ವೈದ್ಯಕೀಯ ಪರೀಕ್ಷೆಗೆ ಪ್ರಜ್ವಲ್ ರೇವಣ್ಣ

By Mahmad RafikFirst Published Jun 15, 2024, 12:42 PM IST
Highlights

ಈ ವಿಡಿಯೋದಲ್ಲಿ ಪುರುಷನೊಬ್ಬನ ಧ್ವನಿ ಮತ್ತು  ಸೊಂಟದ ಕೆಳಗಿನ ಭಾಗ ಕಾಣಿಸುತ್ತಿತ್ತು. ಈ ಹಿನ್ನೆಲೆ ವಿಡಿಯೋದಲ್ಲಿ ನಗ್ನವಾಗಿ ಕಾಣಿಸಿದ ವ್ಯಕ್ತಿಯ ಪತ್ತೆಗೆ ಪೊಲೀಸರು ಮುಂದಾಗಿದೆ. 

ಬೆಂಗಳೂರು: ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಇಂದು ನಗರದ ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಯಲಿದೆ. ಈಗಾಗಲೇ ಆರೋಪಿಯನ್ನು ಎಸ್‌ಐಟಿ ಪೊಲೀಸರು ಆಸ್ಪತ್ರೆಗೆ ಕರೆತಂದಿದ್ದಾರೆ. ಇಂದು ಪುರುಷತ್ವ ಸೇರಿದಂತೆ ಅತ್ಯಾಚಾರ ಆರೋಪಿಗಳಿಗೆ ನಡೆಸುವ ಎಲ್ಲಾ ವೈದ್ಯಕೀಯ ಪರೀಕ್ಷೆಯನ್ನು ಪ್ರಜ್ವಲ್ ರೇವಣ್ಣಗೆ ನಡೆಸಲಾಗುತ್ತದೆ. ಈಗಾಗಲೇ‌ ಮೊದಲ ಪ್ರಕರಣದಲ್ಲಿಯೂ ಪ್ರಜ್ವಲ್ ರೇವಣ್ಣ ವೈದ್ಯಕೀಯ ಪರೀಕ್ಷೆ ನಡೆದಿತ್ತು. ಈಗ ಎರಡನೇ ಅತ್ಯಾಚಾರ ಪ್ರಕರಣದಲ್ಲಿ ವೈದ್ಯಕೀಯ ಪರೀಕ್ಷೆ ನಡೆಯಲಿದೆ.

ಪ್ರಜ್ವಲ್‌ ರೇವಣ್ಣದ್ದು ಎನ್ನಲಾದ ವಿಡಿಯೋಗಳು ಹಾಸನ ಸೇರಿದಂತೆ ರಾಜ್ಯಾದ್ಯಂತ ಹರಿದಾಡಿದ್ದವು.  ಹಾಸನ ಲೋಕಸಭಾ ಕ್ಷೇತ್ರದಲ್ಲಿ ಪೆನ್‌ಡ್ರೈವ್ ಮೂಲಕ ವಿಡಿಯೋಗಳು ಹಂಚಿಕೆ ಮಾಡಲಾಗಿತ್ತು ಎಂಬ ಆರೋಪ ಕೇಳಿ ಬಂದಿತ್ತು. ಈ ವಿಡಿಯೋದಲ್ಲಿ ಪುರುಷನೊಬ್ಬನ ಧ್ವನಿ ಮತ್ತು  ಸೊಂಟದ ಕೆಳಗಿನ ಭಾಗ ಕಾಣಿಸುತ್ತಿತ್ತು. ಈ ಹಿನ್ನೆಲೆ ವಿಡಿಯೋದಲ್ಲಿ ನಗ್ನವಾಗಿ ಕಾಣಿಸಿದ ವ್ಯಕ್ತಿಯ ಪತ್ತೆಗೆ ಪೊಲೀಸರು ಮುಂದಾಗಿದೆ. 

ವಿದೇಶದಲ್ಲಿದ್ದಾಗ ಪ್ರಜ್ವಲ್‌ ರೇವಣ್ಣಗೆ ಹಣ ಕಳಿಸಿದ್ದ ಗೆಳತಿಗೆ ಸಂಕಷ್ಟ: ಎಸ್‌ಐಟಿ ನೋಟಿಸ್

ಪ್ರಜ್ವಲ್ ರೇವಣ್ಣಗೆ ಅಂಗಾಂಗ ಪರೀಕ್ಷೆ?

ವಿಡಿಯೋದಲ್ಲಿ ಕಾಣಿಸಿದ ಪುರುಷನ ಅಂಗಾಂಗಳೊಂದಿಗೆ ಪ್ರಜ್ವಲ್ ರೇವಣ್ಣ ಅಂಗಗಳನ್ನು ಹೋಲಿಕೆ ಮಾಡಲು ಅಧಿಕಾರಿಗಳ ತಂಡ ಚಿಂತನೆ ನಡೆಸಿದೆ. ಈ ಪರೀಕ್ಷೆಗೆ ಗುಜರಾತ್ ರಾಜ್ಯದ ಅಹಮದಾಬಾದ್‌ನ ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್ ಎಸ್ಎಲ್) ಹಾಗೂ ವಿದೇಶಿ ತಜ್ಞರ ನೆರವು ಪಡೆದುಕೊಳ್ಳಲು ಎಸ್‌ಐಟಿ ತಂಡ ಮುಂದಾಗಿದೆ ಎಂದು ವರದಿಯಾಗಿದೆ. ಈಗಾಗಲೇ ಎಸ್‌ಐಟಿ ಅಧಿಕಾರಿಗಳು ಆರೋಪಿಯ ಧ್ವನಿ ಮಾದರಿಯನ್ನು ಸಂಗ್ರಹಿಸಿದ್ದಾರೆ. ಅಶ್ಲೀಲ ವಿಡಿಯೋಗಳಲ್ಲಿನ ಮುಖ ಮಾಚಿಕೊಂಡಿರುವ ವ್ಯಕ್ತಿ ಪತ್ತೆಗೆ ಎಸ್‌ಐಟಿ ಅಂಗಾಂಗ ಪರೀಕ್ಷೆಗೆ ಎಸ್‌ಐಟಿ ಮುಂದಾಗಿದೆ.

ಭವಾನಿ ರೇವಣ್ಣ ಬಂಧನಕ್ಕೆ ಅನುಮತಿ ಕೇಳಿದ ಎಸ್‌ಐಟಿ 

ಕೆಆರ್ ನಗರ ಮಹಿಳೆಯ ಅಪಹರಣ ಪ್ರಕರಣದಲ್ಲಿ ಆರೋಪಿಯಾಗಿರುವ ಭವಾನಿ ರೇವಣ್ಣ ಬಂಧನಕ್ಕೆ ಅನುಮತಿ ಕೇಳಿ ಎಸ್‌ಐಟಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಭವಾನಿ ರೇವಣ್ಣ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದಿ ನ್ಯಾಯಾಲಯ  ಅರ್ಜಿಯ ತೀರ್ಪು ಪ್ರಕಟಿಸುವವರೆಗೂ ಭವಾನಿ ರೇವಣ್ಣ ಅವರನ್ನು ಬಂಧಿಸಬಾರದು ಎಂದು ಸೂಚಿಸಿ ಜೂ.7ರಂದು ಹೊರಡಿಸಿದ ಮಧ್ಯಂತರ ಅದೇಶವನ್ನು ವಿಸ್ತರಿಸಿ ಆದೇಶಿಸಿತು.

ಪ್ರಜ್ವಲ್ ರೇವಣ್ಣ ಎಸ್‌ಐಟಿ ತನಿಖೆಯಲ್ಲಿ ಮಧ್ಯಪ್ರವೇಶ ಬೇಕಿಲ್ಲ: ಹೈಕೋರ್ಟ್‌

click me!