ಯುನಿಫಾರ್ಮ್ ಇಲ್ಲದ ಹೆಣ್ಮಕ್ಕಳಿಗೆ ಬಟ್ಟೆ ಬಿಚ್ಚಿ ಎಂದ ಪ್ರಾಚಾರ್ಯ!

By Suvarna NewsFirst Published Sep 5, 2021, 10:51 PM IST
Highlights

* ಮಧ್ಯಪ್ರದೇಶದ  ಶಾಲೆಯಲ್ಲಿ ಪ್ರಾಚಾರ್ಯರಿಂದ ವಿಪರೀತ ವರ್ತನೆ
* ಸಮವಸ್ತ್ರ ಇಲ್ಲದ ಮಕ್ಕಳಿಗೆ ಬಟ್ಟೆ ಬಿಚ್ಚು ಎಂದು ಹೇಳಿದ!
* ಶಾಲೆ ಮುಂದೆ ಸ್ಥಳೀಯರ ಪ್ರತಿಭಟನೆ 
* ಪ್ರಕರಣ ದಾಖಲಿಸಿಕೊಂಡ ಪೊಲೀಸರು

ರಾಜಗಢ(ಸೆ. 05) ಮಧ್ಯಪ್ರದೇಶದ ಶಾಲಾ ಪ್ರಾಂಶುಪಾಲರೊಬ್ಬರು  ವಿಪರೀತ ವರ್ತನೆ  ತೋರಿದ್ದಾರೆ. ಇದೇ ಕಾರಣಕ್ಕೆ ಅವರ ಮೇಲೆ ಪ್ರಕರಣ ದಾಖಲಾಗಿದೆ.  ಸಮವಸ್ತ್ರದಲ್ಲಿರದ ವಿದ್ಯಾರ್ಥಿನಿಯರು ತಮ್ಮ ಉಡುಪನ್ನು ಕಳಚಲು ಪ್ರಾಂಶುಪಾಲರು ಸೂಚಿಸಿದ್ದರು ಎಂಬ ಆರೋಪ ಕೇಳಿ ಬಂದಿದೆ.

ಅನುಚಿತ ವರ್ತನೆ ಆರೋಪದ ಮೇಲೆ ಮಧ್ಯಪ್ರದೇಶದ ರಾಜಗಢ ಜಿಲ್ಲೆಯ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

Latest Videos

ಸ್ನೇಹಿತನಿಂದಲೇ ಮಹಿಳಾ ಟೆಕ್ಕಿ ಮೇಲೆ ಅತ್ಯಾಚಾರ

ಮಾಚಲಪುರ ಪೊಲೀಸ್ ಠಾಣೆಗೆ ಮೂವರು ಬಾಲಕಿಯರು ನೀಡಿದ ದೂರಿನ ಪ್ರಕಾರ, ಪ್ರಾಂಶುಪಾಲ ರಾಧೇಶ್ಯಾಮ್ ಮಾಳವೀಯ(50) ಅವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. 

ದೂರಿನ ಪ್ರಕಾರ, ಶಾಲೆ ಈಗಷ್ಟೇ ಆರಂಭವಾಗಿದ್ದರಿಂದ ಹುಡುಗಿಯರು ತಮ್ಮ ಸಮವಸ್ತ್ರ ಇನ್ನೂ ಹೊಲಿಸಿರಲಿಲ್ಲ. ಹೀಗಾಗಿ ಸೋಮವಾರದೊಳಗೆ ಸಮವಸ್ತ್ರ ಹೊಲಿಸುವುದಾಗಿ ಪ್ರಾಂಶುಪಾಲರಿಗೆ ವಿದ್ಯಾರ್ಥಿನಿಯರು ಕೇಳಿಕೊಂಡರು. ಆದರೆ ಇದಕ್ಕೆ ಒಪ್ಪದ ಪ್ರಾಚಾರ್ಯ ಗದರಿಸಿದರು.

ಪ್ರಕರಣದ ವಿಡಿಯೋ ವೈರಲ್ ಆದ ನಂತರ ಶಾಲೆ ಎದುರು ಪ್ರತಿಭಟನೆ ನಡೆದಿದೆ.  ನಂತರ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕೇಸು ದಾಖಲಿಸಿಕೊಂಡಿದ್ದಾರೆ. ಪೋಕ್ಸೊ ಕಾಯ್ದೆ ಮತ್ತು ಇತರೆ ಐಪಿಸಿ ಸೆಕ್ಷನ್ ಗಳಡಿ ಕೇಸ್ ದಾಖಲಿಸಿದ್ದೇವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 

 

click me!