Woman Found Dead: ಬಾಣಂತನಕ್ಕೆ ತವರಿಗೆ ಹೋಗಿ ಬಂದವಳ ಶವ ಫ್ಯಾನ್ ನಲ್ಲಿ

Published : Dec 22, 2021, 06:46 PM ISTUpdated : Dec 22, 2021, 06:50 PM IST
Woman Found Dead: ಬಾಣಂತನಕ್ಕೆ ತವರಿಗೆ ಹೋಗಿ ಬಂದವಳ ಶವ ಫ್ಯಾನ್ ನಲ್ಲಿ

ಸಾರಾಂಶ

* ಬೆಂಗಳೂರಿನಲ್ಲಿ ಗೃಹಿಣಿ ಅನುಮಾನಸ್ಪದ ಸಾವು * ರಂಜಿತಾ 26, ಸಾವಿಗೀಡಾದ ದುರ್ದೈವಿ * ನಗರದ ಉಲ್ಲಾಳ ಉಪನಗರದ ಬಸ್ತಿ ಗ್ರಾಮದಲ್ಲಿ ಘಟನೆ * ಮನೆಯ ಫ್ಯಾನ್ ಗೆ ನೇಣು ಬಿಗಿದ ಸ್ಥಿತಿಯಲ್ಲಿ ರಂಜಿತಾ ಶವ ಪತ್ತೆ

ಬೆಂಗಳೂರು(ಡಿ. 22)   ಬೆಂಗಳೂರಿನಲ್ಲಿ (Bengaluru) ಗೃಹಿಣಿ ರಂಜಿತಾ (26) ಅನುಮಾನಸ್ಪದ ರೀತಿ ಸಾವು ಕಂಡಿದ್ದಾರೆ. ನಗರದ ಉಲ್ಲಾಳ ಉಪನಗರದ ಬಸ್ತಿ ಗ್ರಾಮದಲ್ಲಿ ಘಟನೆ ನಡೆದಿದೆ. ಮನೆಯ ಫ್ಯಾನ್ ಗೆ ನೇಣು (Hang) ಬಿಗಿದ ಸ್ಥಿತಿಯಲ್ಲಿ ರಂಜಿತಾ ಶವ (Dead Body)ಪತ್ತೆಯಾಗಿದೆ.

ಮಂಜುನಾಥ್ ಎಂಬಾತನನ್ನ ಪ್ರೀತಿಸಿ  ರಂಜಿತಾ ಮದುವೆಯಾಗಿದ್ದರು. 2017 ರಲ್ಲಿ ಮದುವೆಯಾಗಿದ್ದ ರಂಜಿತಾ ಮಂಜುನಾಥ್  ಎರಡನೇ ಮಗುವಿನ ಬಾಣಂತನಕ್ಕೆ ತವರಿಗೆ ಹೋಗಿದ್ದರು.

ವಾಪಸ್ ಮನೆಗೆ ಬಂದಾಗ ಗಂಡ ಅಕ್ರಮ ಸಂಬಂಧ ಹೊಂದಿದ್ದ ಶಂಕೆ ವ್ಯಕ್ತವಾಗಿದೆ. ಇದೇ ವಿಚಾರಕ್ಕೆ ಪತಿ ಪತ್ನಿ ನಡುವೆ ಜಗಳವಾಗುತ್ತಿತ್ತು. ಡಿಸೆಂಬರ್ 19 ರಂದು ಮನೆಯಲ್ಲಿ ಪ್ಯಾನ್ ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ರಂಜಿತಾ ಶವ ಪತ್ತೆಯಾಗಿದೆ. ರಂಜಿತಾ ಪೋಷಕರು ಪತಿಯ ಕುಟುಂಬದ ಮೇಲೆ ಕೊಲೆ ಆರೋಪ ಮಾಡಿದ್ದಾರೆ. ರಂಜಿತಾ ಮೇಲೆ ಹಲ್ಲೆ ನಡೆಸಿ ನೇಣು ಹಾಕಿದ್ದಾರೆ ಎಂದು  ದೂರು ನೀಡಿದ್ದಾರೆ.

Child Marriage: ಮಗುವಿಗೆ ಜನ್ಮ ನೀಡಿದ 15 ವರ್ಷದ ಬಾಲೆ ... ಗಂಡನ ಬಂಧನ, ವಿವಾಹ ಮಾಡಿದ ಧರ್ಮಗುರುವಿಗೆ ಖಾಕಿ ಹುಡುಕಾಟ

ಜ್ಞಾನ ಭಾರತಿ ಪೊಲೀಸ್ ಠಾಣೆಗೆ ದೂರು ನೀಡಿದ್ದು ವರದಕ್ಷಿಣೆ ಕಿರುಕುಳದ ಆರೋಪ ಮಾಡಿದ್ದಾರೆ. ಪತಿ  ಮಂಜುನಾಥ್ ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. 

ಪತ್ನಿ ಹತ್ಯೆ ಮಾಡಿದ್ದ:   ಪತ್ನಿಯನ್ನು(Wife) ನಂಬಿಸಿ ಪ್ರವಾಸಕ್ಕೆ ಕರೆದುಕೊಂಡು ಬಂದು ಕೊಲೆ (Murder) ಮಾಡಿದ್ದವ ಸಿಕ್ಕಿಬಿದ್ದಿದ್ದ. ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ಶಂಕೆಯಿಂದ 29 ವರ್ಷದ ಪತ್ನಿಯನ್ನು ಕೊಲೆ ಮಾಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಗೋವಾ ಪಣಜಿ ಮಾರ್ಗೋವ್ ಪೊಲೀಸರು ಬಂಧಿಸಿದ್ದರು. ಬಂಧಿತನನ್ನು ಸಾಗರ್ ತಿಂಬಾಡಿಯಾ ಎಂದು ಗುರುತಿಸಲಾಗಿದ್ದು,  ಗೋವಾದ (Goa) ರಾವನ್‌ಫೊಂಡ್ ಪ್ರದೇಶದಲ್ಲಿ ನೆಲೆಸಿದ್ದ.

ಗುಜರಾತ್ ಮೂಲದ ಸಾಗರ್ ವೃತ್ತಿಯಲ್ಲಿ ಸೆರಾಮಿಕ್ ಟೈಲ್ಸ್ ಡೀಲರ್. ಈತನ ಪತ್ನಿ ಸಾವನ್ನಪ್ಪಿದ ನಂತರ, ಪೊಲೀಸರು ಅಸಹಜ ಸಾವಿನ ಪ್ರಕರಣವನ್ನು ದಾಖಲಿಸಿಕೊಂಡಿದ್ದರು.  ಆದರೆ ಮರಣೋತ್ತರ ಪರೀಕ್ಷೆಯ ಸಂದರ್ಭ ಮೃತ ಮಹಿಳೆಯ ದೇಹದ ಮೇಲೆ ಗಾಯದ ಗುರುತುಗಳು ಪತ್ತೆಯಾಗಿದ್ದವು.  ಮದುವೆಯಾಗಿ ಸರಿಯಾಗಿ ಎರಡು ವರ್ಷದ  ನಂತರ ಆಕೆ ಸಾವನ್ನಪ್ಪಿದ್ದಳು.

ಅನುಮಾನಗೊಂಡ ಪೊಲೀಸರು ತನಿಖೆ ಆರಂಭಿಸಿದಾಗ ಒಂದೊಂದೆ ಅಂಶಗಳು ಬಹಿರಂಗವಾಗಿವೆ. ತನ್ನ ಪತ್ನಿ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ಶಂಕೆಯಿಂದ ಆಕೆಯನ್ನು  ಗಂಡನೇ ಕೊಲೆ ಮಾಡಿದ್ದು ಗೊತ್ತಾಗಿದೆ.  

ಹಾವಿನಿಂದ ಕಚ್ಚಿಸಿ ಪತ್ನಿ ಕೊಲೆ:    ಸರ್ಪದಿಂದ(Cobra) ಕಚ್ಚಿಸಿ ಹೆಂಡತಿಯನ್ನು(Wife) ಭೀಕರವಾಗಿ ಕೊಲೆ (Murder)ಮಾಡಿದ  ಪ್ರಕರಣದ  ತೀರ್ಪು ಹೊರಬಿದ್ದಿತ್ತು  ಪತ್ನಿಯನ್ನು ಕೊಂದಿದ್ದ ಗಂಡ ಅಪರಾಧಿ (found guilty)ಎಂದು ಸಾಬೀತಾಗಿದ್ದು ಕೋಲಂ ಅಡಿಶನಲ್ ಸೆಶನ್ಸ್ ಕೋರ್ಟ್ ಶಿಕ್ಷೆ ಪ್ರಕಟ ಮಾಡಿತ್ತು.

ಸರ್ಕಾರಿ ಕೆಲಸದಲ್ಲಿದ್ದ ಸೂರಜ್  ಎಂಬಾತನನ್ನು ಹೆಂಡತಿ ಉತ್ರಾಳನ್ನು ಕೊಲೆ ಮಾಡಿದ್ದ. ವಿಷ ಸರ್ಪದಿಂದ ಹೆಂಡತಿಯನ್ನು ಎರಡು ಸಾರಿ ಕೊಚ್ಚಿಸಿ ಕೊಲೆ ಮಾಡಿದ್ದ. ಹಾವನ್ನು ತೆಗೆದುಕೊಂಡ ಬಂದ್ ಜಾರ್ ಪತ್ತೆ ಮಾಡಲಾಗಿದ್ದು ಪೋರೆನ್ಸಿಕ್ ಲ್ಯಾಬ್ ಗೆ ಕಳುಹಿಸಿಕೊಡಲಾಗಿತ್ತು.  ಹಾವು ಕಚ್ಚಿ ಮೇ 7 ರಂದು ಉತ್ರಾ ಸಾವನ್ನಪ್ಪಿದ್ದರು. ಇದಾದ ಮೇಲೆ ಪೊಲೀಸರು ವಿಚಾರಣೆ ನಡೆಸಿದಾಗ ಹೆಂಡತಿಯನ್ನು ಕೊಲೆ ಮಾಡಿದ್ದಾಗಿ ಸೂರಜ್  ಒಪ್ಪಿಕೊಂಡಿದ್ದ. 10 ಸಾವಿರ ರೂ. ಕೊಟ್ಟು ಎರಡು ಹಾವು ತಂದಿದ್ದಾಗಿಯೂ ಹೇಳಿದ್ದ. ಮೇ 2 ರಂದೇ ಕೊಲೆ ಮಾಡಲು ಯತ್ನ ಮಾಡಿದ್ದ ಆದರೆ ಹಾವು ಕೈಕೊಟ್ಟಿತ್ತು. ಹಾವಿನಿಂದ ಕಚ್ಚಿಸಿ ಸಾಯಿಸಿದರೆ ಯಾರಿಗೂ ಅನುಮಾನ ಬರುವುದಿಲ್ಲ ಎಂದು ಸೂರಜ್ ಭಾವಿಸಿದ್ದ,

ಸುಸೈಡ್ ಎಂದು ಬಿಂಬಿಸಿದ್ದ: ಕುಮಟಾ ತಾಲೂಕಿನ ಉಪ್ಪಿನಪಟ್ಟಣದಲ್ಲಿ ವ್ಯಕ್ತಿಯೊಬ್ಬ ಪತ್ನಿಯ ಕತ್ತು ಹಿಸುಕಿ ಹತ್ಯೆ ಮಾಡಿ, ಆತ್ಮಹತ್ಯೆ ಎಂದು ಬಿಂಬಿಸುವ ನಾಟಕವಾಗಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದ. ಕತಗಾಲ ಸಮೀಪದ ಉಪ್ಪಿನಪಟ್ಟಣದ ಮಮತಾ ಮಂಜುನಾಥ ಶಾನಭಾಗ (38) ಹತ್ಯೆ ಮಾಡಿದ ಪತಿ ಮಂಜುನಾಥ ಶಾನಭಾಗನನ್ನು ಬಂಧಿಸಲಾಗಿತ್ತು. 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ
ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?