New Year And Drugs: ಬೆಂಗ್ಳೂರಲ್ಲಿ ಡ್ರಗ್ಸ್ ಹಾವಳಿ,  ಕೋಟಿ ಮೊತ್ತದ ಆಶಿಸ್ ಆಯಿಲ್ ವಶ!

By Suvarna News  |  First Published Dec 22, 2021, 6:07 PM IST

* ಹೊಸ ವರ್ಷ ಬರ್ತಿದ್ದಂತೆ ಪುಲ್ ಅಲರ್ಟ್ ಆದ ಸಿಲಿಕಾನ್ ಸಿಟಿ ಪೊಲೀಸ್ರು

* ಬೆಂಗಳೂರಿನಲ್ಲಿ ಮತ್ತೊಂದು ಮಾದಕ ಜಾಲ ಪತ್ತೆ

* ಎಚ್ ಎ ಎಲ್ ಪೊಲೀಸರಿಂದ ಮೂವರು ಗಾಂಜಾ ಮಾರಾಟಗಾರರ ಬಂಧನ

* ಮುಬಾರಕ್, ಅಪ್ರೋಜ್, ಹಾಗೂ ಇಮ್ರಾನ್ ಬಂಧಿತ ಆರೋಪಿಗಳು


ಬೆಂಗಳೂರು(ಡಿ. 22)  ಹೊಸ ವರ್ಷಕ್ಕೂ(New Year) ಮುನ್ನ ನಗರದಲ್ಲಿ ಗಾಂಜಾ (Ganja) ಘಾಟು ಜೋರಾಗಿದ್ದು ಪೊಲೀಸರು ಹಲವು ಕಡೆ ಕಾರ್ಯಾಚರಣೆ ನಡೆಸಿ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.  ಎಚ್ಎಎಲ್ ಪೊಲೀಸರು (Bengaluru Police) ಕಾರ್ಯಾಚರಣೆ ನಡೆಸಿ ಮೂವರು ಗಾಂಜಾ ಮಾರಾಟಗಾರರನ್ನು ಬಂಧಿಸಿದ್ದಾರೆ  ಮುಬಾರಕ್, ಅಪ್ರೋಜ್, ಹಾಗೂ ಇಮ್ರಾನ್ ಬಂಧೊತ ಆರೋಪಿಗಳು. 

ವಿಭೂತಿ ಪುರದ ತೋಪಿನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳು ಸೆರೆಸಿಕ್ಕಿದ್ದಾರೆ. ಖಚಿತ ಮಾಹಿತಿ ಮೇರೆಗೆ ಎಚ್ ಎ ಎಲ್ ಪೊಲೀಸರ ದಾಳಿ ನಡೆಸಿದ್ದರು. ದಾಳಿ ವೇಳೆ 9 ಕೆಜಿ ಗಾಂಜಾ , ಒಂದು ಬೈಕ್ ಹಾಗೂ ತೂಕದ ಮಷಿನ್ ವಶಕ್ಕೆ ಪಡೆಯಲಾಗಿದೆ. 

Tap to resize

Latest Videos

undefined

ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಜೋಷಿ  ವಿವರ ನೀಡಿದ್ದಾರೆ. ಹೊಸ ವರ್ಷಕ್ಕೆ ಮಾದಕ ವಸ್ತು (Drugs) ಸರಬರಾಜು ಅಗುತ್ತಿದೆ ಅನ್ನೋ ಮಾಹಿತಿ ಇತ್ತು. ಈ ನಿಟ್ಟಿನಲ್ಲಿ ನಮ್ಮ ವಿಭಾಗದ ಎಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಮೈಕೋ‌ ಲೇಔಟ್ ಪೊಲೀಸರು 1 ಕೋಟಿ ಮೌಲ್ಯದ ಆಶಿಸ್ ಆಯಿಲ್ ವಶಪಡಿಸಿಕೊಂಡಿದ್ದಾರೆ.. ಪ್ರಕಾಶ್ ಹಾಗೂ ಧಾಮರಾಜ್ ಬಂಧಿತ ಆರೋಪಿಗಳು. ನ್ಯೂ ಇಯರ್ ಗೆ ಮಾದಕ ವಸ್ತುಗಳನ್ನು ಸರಬರಾಜು ಮಾಡಲು ಮಾದಕ ವಸ್ತುಗಳನ್ನು ತರುತ್ತಿದ್ದ ಆರೋಪಿಗಳು ಸೆರೆ ಸಿಕ್ಕಿದ್ದು  ವೈಜಾಗ್ ನಿಂದ ಮಾದಕ ವಸ್ತು ತೆಗೆದುಕೊಂಡು ಬಂದಿದ್ದರು ಎನ್ನುವ ಮಾಹಿತಿ ಇದೆ ಎಂದು ತಿಳಿಸಿದ್ದಾರೆ.

Heroin Seized: ಮಾದಕ ವಸ್ತು ಕಳ್ಳಸಾಗಣೆಗೆ ಭಾರತವೇ ಹೆದ್ದಾರಿ: ಹೆರಾಯಿನ್‌ ಜಪ್ತಿ 4 ವರ್ಷದಲ್ಲಿ ಶೇ.37000 ಏರಿಕೆ!

ನಿರಂತರ ಕಾರ್ಯಾಚರಣೆ: ಬೆಂಗಳೂರು ದಕ್ಷಿಣ ವಿಭಾಗದಲ್ಲಿ ಒಂದೇ ದಿನ ಅಂತರ್ ರಾಜ್ಯ ಹಾಗೂ ವಿದೇಶಿ ಪ್ರಜೆ ಸೇರಿ 6 ಮಂದಿ ಡ್ರಗ್ ಪೆಡ್ಲರ್ಸ್ ಅರೆಸ್ಟ್ ಮಾಡಲಾಗಿತ್ತು. ನ್ಯೂ ಇಯರ್ ಗೆ ನಶೆಯ ಮತ್ತೆರಿಸಲು ಸಜ್ಜಾಗಿದ್ದ ಗ್ಯಾಂಗ್ ಅಂದರ್ ನ್ನು ಡಿಸಿಪಿ ಹರೀಶ್ ಪಾಂಡೆ ನೇತೃತ್ವದ ತಂಡ ಬಂಧಿಸಿತ್ತು.

ಕೋಣನಕುಂಟೆ ಕೆ.ಎಸ್.ಲೇಔಟ್ ಹಾಗೂ ಗಿರಿನಗರ ಪೊಲೀಸರನ್ನೊಳಂಡ ಸ್ಪೆಷಲ್ ಟೀಂ  ಮಾದಕ ವಸ್ತು ದಂಧೆಕೋರರ ಮೇಲೆ ದಾಳಿ ಮಾಡಿದೆ. ದಕ್ಷಿಣ ವಿಭಾಗದಲ್ಲಿ ಡ್ರಗ್ ಪೆಡ್ಲಿಂಗ್ ಮಾಡಲು ಯತ್ನಿಸಿದ್ದ ಮೂವರು ಅಂತರಾಜ್ಯ ಪೆಡ್ಲರ್ ಹಾಗೂ ಮೂವರು ವಿದೇಶಿ ಪ್ರಜೆಗಳ ಬಂಧನ ಮಾಡಲಾಗಿದೆ. ನ್ಯೂ ಇಯರ್ ಹಿನ್ನಲೆ ಬೆಂಗಳೂರಲ್ಲಿ ಮಾದಕವಸ್ತುಗಳಿಗೆ ಹೆಚ್ಚಿನ ಬೇಡಿಕೆ ಇರೋದು ವಿಚಾರಣೆ ವೇಳೆ ಬೆಳಕಿಗೆ ಬಂದಿತ್ತು.

ಕೋಣನಕುಂಟೆ ಪೊಲೀಸರಿಂದ ನಗರದಲ್ಲಿ ಡ್ರಗ್ ಸರಬರಾಜು ಮಾಡುತ್ತಿದ್ದ ಮಣಿಪುರಿ ಗ್ಯಾಂಗ್  ಬಂಧನವಾಗಿದೆ. ಹೆರಾಯಿನ್ ಮಾರಾಟ ಮಾಡಲು ಯತ್ನಿಸ್ತಿದ್ದ ಮೂವರು ಸೆರೆ ಸಿಕ್ಕಿದ್ದರು.. ಮೊಯಿನ್ ಅಲಾಂ, ಮೊಹದ್ ಸಯಿದುರ್, ವಾಕೀಮ್ ಯೂನಸ್ ಎಂಬುವರನ್ನು ಬಂಧಿಸಲಾಗಿತ್ತು.

ಬಂಧಿತರಿಂದ 20 ಲಕ್ಷಕ್ಕೂ ಅಧಿಕ ಮೌಲ್ಯದ 111 ಗ್ರಾಂ ಹೆರಾಯಿನ್ ವಶಕ್ಕೆ ಪಡೆದುಕೊಳ್ಳಲಾಗಿತ್ತು. ಒಂದು ಗ್ರಾಂ ಹೆರಾಯಿನ್ ನನ್ನ ಇಪ್ಪತ್ತರಿಂದ ಇಪ್ಪತೈದು ಸಾವಿರಕ್ಕೆ ಮಾರಾಟ ಮಾಡುತ್ತಿದ್ದರು.

ಬನಶಂಕರಿ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ನೈಜೀರಿಯಾ ಮೂಲದ ಇಬ್ಬರು ಡ್ರಗ್ ಪೆಡ್ಲರ್ ಗಳ ಬಂಧಿಸಿದ್ದರು.  ಆಪರೇಷನ್ ಮಾಡಿಸಿಕೊಳ್ಳಲು ಬಂದವ ಡ್ರಗ್ ಪೆಡ್ಲರ್ ಆಗಿ ಬದಲಾಗಿದ್ದ. ಗಂಟಲ ಶಸ್ತ್ರಚಿಕಿತ್ಸೆಗೆಂದು ಬಂದು ಡ್ರಗ್ ಪೆಡ್ಲಿಂಗ್ ಗೆ ಇಳಿದಿದ್ದ. ನೈಜೀರಿಯಾ ಮೂಲದ ಪ್ರಿನ್ಸ್ ಅನಿ ಚಿಡೋಜಿಯನ್ನು ಬಂಧಿನವಾಗಿದ್ದು ವೀಸಾ ಅವಧಿ ಮುಗಿದರೂ ಇಲ್ಲಿಯೇ ಇದ್ದ.

ಅನ್ನಪೂರ್ಣೇಶ್ವರಿ ನಗರ ಪೊಲೀಸರಿಂದ ಇಬ್ಬರು ಗಾಂಜಾ ಪೆಡ್ಲರ್ ಗಳ ಬಂಧಸಿದ್ದರು.  ಶಬ್ಬಿರ್ ಮತ್ತು ಅನಿಲ್ ಬಂಧಿಸಲಾಗಿತ್ತು.  ಒಡಿಶಾ ದಿಂದ ತಮಿಳುನಾಡಿನ ಮೂಲಕ  ಬೆಂಗಳೂರಿಗೆ ತಂದಿದ್ದ ಗಾಂಜಾ ಮಾರಾಟ ಮಾಡಲು ಯತ್ನಿಸಿದ್ದರು. ಆರೋಪಿಗಳಿಂದ ಎಂಟು ಕೆ ಜಿ ಹದಿನಾರು ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿತ್ತು.

ಎಲ್ಲಿಂದ ಶುರು: ಮುಂಬೈನಲ್ಲಿ ಬಾಲಿವುಡ್ ನಾಯಕ ಸುಶಾಂತ್ ಸಿಂಗ್ ನಿಗೂಢ ಸಾವಿನ ನಂತರ ಡ್ರಗ್ಸ್ ಸುಳಿ ತಲೆ ಎತ್ತಿತ್ತು. ಬಾಲಿವುಟ್ ನಟಿ ರಿಯಾ ಚಕ್ರವರ್ತಿ ಸೇರಿ ಅನೇಕ ನಟಿ ಮಣಿಗಳ ವಿಚಾರಣೆ ನಡೆಯಿತು. ಸ್ಯಾಂಡಲ್ ವುಡ್ ನಲ್ಲಿ ರಾಗಿಣಿ ಮತ್ತು ಸಂಜನಾ ಗರ್ಲಾನಿ ಜೈಲು ವಾಸ ಅನುಭವಿಸಬೇಕಾಗಿ ಬಂದಿತ್ತು.

ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ ಸಹ ವಿಚಾರಣೆಯ ಹಂತದಲ್ಲಿಯೇ ಇದೆ. ನಟಿಯರ ತಲೆಕೂದಲು ಪರೀಕ್ಷೆ ವರದಿಯಲ್ಲಿ ಡ್ರಗ್ಸ್ ಸೇವಿಸಿದ್ದರ ಬಗ್ಗೆ ಸಾಕ್ಷ್ಯ ಸಿಕ್ಕಿದೆ. ಒಟ್ಟಿನಲ್ಲಿ ಎಲ್ಲಿಂದಲೋ ಹುಟ್ಟಿಕೊಂಡ ಡ್ರಗ್ಸ್ ಜಾಲಕ್ಕೆ  ಹೊಸ ಹೊಸ ಹೆಸರುಗಳು ಸೇರ್ಪಡೆಯಾಗುತ್ತಲೇ ಇವೆ.

click me!