
ಮೈಸೂರು(ಜೂ. 20) ಗಂಡ ಹೆಂಡತಿ ಜಗಳದಿಂದ ಸಾವು ನೋವು ಆಗೋದದನ್ನು ಕೇಳಿರುತ್ತೇವೆ. ಆದ್ರೆ ಮೈಸೂರಿನಲ್ಲಿ ಅತ್ತೆ ಸೊಸೆ ಜಗಳ ಸೊಸೆಯ ಸಾವಿನಲ್ಲಿ ಅಂತ್ಯವಾಗಿದೆ. ಅತ್ತೆಯ ಕೊಂಕು ಮಾತಿಗೆ ತಲೆ ಕೆಡಿಸಿಕೊಂಡು ಸೊಸೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ನನ್ನ ಗಂಡನದ್ದು ಏನು ತಪ್ಪಿಲ್ಲ. ನಮ್ಮ ಮಾವನದು ತಪ್ಪಿಲ್ಲ. ಅವರು ದೇವರಂತಹ ಮನುಷ್ಯರು. ನನ್ನ ಅತ್ತೆಯಿಂದ ನಾನು ಈ ರೀತಿ ಮಾಡಿಕೊಂಡೇ...., ಈ ರೀತಿ ಹೇಳುತ್ತಲೇ ಪ್ರಾಣ ಪಕ್ಷಿ ಹಾರಿಹೋಗಿದೆ ಕಾವ್ಯ ವಯಸ್ಸು 21. ಈ ರೀತಿ ಮಾತನಾಡಿದ ಸ್ಬಲ್ಪ ಹೊತ್ತಲ್ಲೇ ಕಾವ್ಯಾಳ ಪ್ರಾಣ ಪಕ್ಷಿ ಹಾರಿ ಹೋಗಿದೆ.
ಆಂಬುಲೆನ್ಸ್ ನಿಂದ ಜಿಗಿದ ಕತ್ತು ಕೊಯ್ದುಕೊಂಡ ಮಾನಸಿಕ ಅಸ್ವಸ್ಥ
ಕಾವ್ಯ ಮೈಸೂರು ಜಿಲ್ಲೆ ಟಿ ನರಸೀಪುರ ತಾಲ್ಲೂಕಿನ ಯಾಕನೂರು ಗ್ರಾಮದವರು. ಒಂದೂವರೆ ವರ್ಷದ ಹಿಂದೆ ಇದೇ ಗ್ರಾಮದ ಚಂದ್ರಶೇಖರ್ ಜೊತೆ ಮದುವೆಯಾಗಿತ್ತು. ಕೂಲಿ ಮಾಡಿ ಜೀವನ ನಡೆಸುತ್ತಿದ್ದ ಚಂದ್ರಶೇಖರ್ ತನ್ನ ಪತ್ನಿಯನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದ. ಆದ್ರೆ ಕಾವ್ಯಾಳಿಗೆ ತನ್ನ ಅತ್ತೆ ಪುಟ್ಟಮಾದಮ್ಮದ್ದೇ ಸಮಸ್ಯೆಯಾಗಿತ್ತು. ಮದುವೆಯಾದ ದಿನದಿಂದ ಪುಟ್ಟಮಾದಮ್ಮ ಕಾವ್ಯಾಳಿಗೆ ಹಿಂಸೆ ಕೊಡುತ್ತಿದ್ದರಂತೆ.
ಹೌದು ನೀನು ಮದುವೆಯಾಗಿ ನನ್ನ ಮಗನನ್ನು ನನ್ನಿಂದ ದೂರ ಮಾಡಿದೆ ಅಂತಾ ಪ್ರತಿದಿನ ಜಗಳ ಮಾಡುತ್ತಿದ್ದರಂತೆ. ಅಷ್ಟೇ ಅಲ್ಲ ಕಾವ್ಯ ಅಡುಗೆ ಮಾಡಿದ ದಿನ ಪುಟ್ಟ ಮಾದಮ್ಮ ಊಟವನ್ನೇ ಮಾಡುತ್ತಿರಲಿಲ್ಲವಂತೆ. ಇವತ್ತು ಸರಿಯಾಗುತ್ತೇ ನಾಳೆ ಸರಿಯಾಗುತ್ತೇ ಅಂತಾ ಕಾವ್ಯ ಕಾಯುತ್ತಲೇ ಬಂದಿದ್ದಾಳೆ. ಆದರೆ ಪ್ರತಿ ದಿನ ಅದು ಹೆಚ್ಚಾಗುತ್ತಲೇ ಹೋಗಿದೆ. ಮೂರು ದಿನಗಳ ಹಿಂದೆ ಪತಿ ಪರಿಚಯದವರ ಮದುವೆ ಇತ್ತಂತೆ. ಇನ್ನು ಮದುವೆಗೆ ಜೊತೆಯಾಗಿ ಹೋದರೆ ಅತ್ತೆ ಬೇಜಾರು ಮಾಡಿಕೊಳ್ಳಬಹುದು ಅಂತಾ ಕಾವ್ಯ ಪತಿಯನ್ನು ಮಾತ್ರ ಮದುವೆಗೆ ಕಳುಹಿಸಿದ್ದಾಳೆ. ಪತಿ ಕಳುಹಿಸಿದ ನಂತರ ಕಾವ್ಯಾಗೆ ಏನಾಯ್ತೋ ಗೊತ್ತಿಲ್ಲ. ಸೀದಾ ಮನೆಯ ಹಿಂದೆ ಕೊಟ್ಟಿಗೆಗೆ ಹೋಗಿ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾಳೆ.
ಸುಟ್ಟ ಗಾಯಗಳಿಂದ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಕಾವ್ಯಾಳನ್ನು ಮೈಸೂರಿನ ಕೆ ಆರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂರು ದಿನ ಸಾವು ಬದುಕಿನ ನಡುವೆ ಹೋರಾಟ ನಡೆಸಿದ ಕಾವ್ಯ ಇಹಲೋಕ ತ್ಯಜಿಸಿದ್ದಾಳೆ. ಸಾಯುವ ಮುನ್ನ ನನ್ನ ಪತಿ ಮಾವನದು ಏನು ತಪ್ಪಿಲ್ಲ ಅವರು ದೇವರಂತವರು ಅಂತಾ ಹೇಳಿಕೆ ಕೊಟ್ಟಿದ್ದಾಳೆ. ಈ ಸಂಬಂಧ ಟಿ ನರಸೀಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಒಟ್ಟಾರೆ ಏನೇ ಸಮಸ್ಯೆಯಿದ್ದರು ಪತಿ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಬೇಕಾದ ಕಾವ್ಯ ಈ ರೀತಿ ನಿರ್ಧಾರ ಮಾಡಿದ್ದು ದುರಂತವೇ ಸರಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ