ಕಳೆದ ಹಲವು ದಿನಗಳ ಹಿಂದಷ್ಟೇ ತವರು ಮನೆಗೆ ಬಂದಿದ್ದ ಮೃತ ಜ್ಯೋತಿ| ಮದುವೆ ಆದಾಗಿನಿಂದ ಜ್ಯೋತಿ ತನ್ನ ತಂದೆ ಮುಂದೆ ಒಂದಿಲ್ಲೊಂದು ಬೇಡಿಕೆ ಇಡುತ್ತಿದ್ದ ವಿವಾಹಿತ ಮಹಿಳೆ| ಸೋಫಾಸೆಟ್ ಬೇಕು ಎಂದು ಹಠ ಹಿಡಿದಿದ್ದ ಜ್ಯೋತಿ|
ಬೆಳಗಾವಿ(ಅ.22): ಪ್ರೀತಿಸಿ ಮದುವೆಯಾದ ಗಂಡನ ಮನೆಗೆ ಒಯ್ಯಲು ಸೋಫಾಸೆಟ್ ಕೊಡಿಸಲಿಲ್ಲ ಎಂದು ವಿವಾಹಿತೆಯೊಬ್ಬಳು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ತಾಲೂಕಿನ ಸುಳಗಾ ಗ್ರಾಮದಲ್ಲಿ ಬುಧವಾರ ಸಂಭವಿಸಿದೆ. ಸುಳಗಾ ಗ್ರಾಮದ ಲಕ್ಷ್ಮೀ ಗಲ್ಲಿಯ ಜ್ಯೋತಿ ನಿಖಿಲ್ ಚೋಪಡೆ (19) ಆತ್ಮಹತ್ಯೆ ಮಾಡಿಕೊಂಡವಳು.
ಏನಾಯ್ತು?:
ಬೆಳಗಾವಿ ತಾಲೂಕಿನ ಉಚಗಾಂವ ಗ್ರಾಮದ ನಿಖಿಲ್ ಎಂಬಾತನನ್ನು ಪ್ರೀತಿಸಿದ್ದ ಜ್ಯೋತಿಗೆ ಕಳೆದ ಐದು ತಿಂಗಳ ಹಿಂದಷ್ಟೇ ಮದುವೆಯಾಗಿತ್ತು. ಜ್ಯೋತಿ ಕಳೆದ ಹಲವು ದಿನಗಳ ಹಿಂದಷ್ಟೇ ತವರು ಮನೆಗೆ ಬಂದಿದ್ದಳು. ಮದುವೆ ಆದಾಗಿನಿಂದ ಜ್ಯೋತಿ ತನ್ನ ತಂದೆ ಮುಂದೆ ಒಂದಿಲ್ಲೊಂದು ಬೇಡಿಕೆ ಇಡುತ್ತಿದ್ದಳು. ಇತ್ತೀಚಿಗಷ್ಟೇ ತಂದೆಯಿಂದ ಕಾಡಿ ಬೇಡಿ ಫ್ರಿಡ್ಜ್ ಒಯ್ದಿದ್ದಳು. ಈಗ ಮತ್ತೆ ನನಗೆ ಸೋಫಾಸೆಟ್ ಬೇಕು ಎಂದು ಹಠ ಹಿಡಿದಿದ್ದಳು. ಇದಕ್ಕೆ ಆಕೆಯ ತಂದೆ ಹಣ ಬಂದ ಮೇಲೆ ಕೊಡಿಸುವುದಾಗಿ ಹೇಳಿದ್ದರಂತೆ. ಆದರೆ ತಾಳ್ಮೆ ಕಳೆದುಕೊಂಡ ಜ್ಯೋತಿ ಮನೆಯಲ್ಲಿ ಯಾರೂ ಇಲ್ಲದಾಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಮುಖ್ಯಮಂತ್ರಿ ಆಗುವ ಆಸೆ ಈಡೇರದ್ದಕ್ಕೆ ಯುವಕ ನೇಣಿಗೆ ಶರಣು
ಘಟನಾ ಸ್ಥಳಕ್ಕೆ ಪೊಲೀಸ್ ಇನ್ಸಸ್ಪೆಕ್ಟರ್ ರಾಘವೇಂದ್ರ ಹಳ್ಳೂರ, ಪಿಎಸ್‌ಐ ಅವಿನಾಶ ಯರಗೊಪ್ಪ, ಅಪರಾಧ ವಿಭಾಗದ ಪಿಎಸ್‌ಐ ಆರ್.ಟಿ. ಲಕ್ಕನಗೌಡರ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಈ ಕುರಿತು ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.