ಹೂವಿನಹಡಗಲಿ: ಯುವತಿ ಮೇಲೆ ಕಾಮುಕನಿಂದ ಅತ್ಯಾಚಾರ

By Kannadaprabha News  |  First Published Oct 22, 2020, 3:30 PM IST

23 ವರ್ಷದ ಯುವತಿ ಮೇಲೆ 17 ವರ್ಷದ ಯುವಕನಿಂದ ರೇಪ್‌| ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ವಡ್ಡನಹಳ್ಳಿ ತಾಂಡಾದಲ್ಲಿ ನಡೆದ ಘಟನೆ| ಈ ಸಂಬಂಧ ಹೂವಿನಹಡಗಲಿ ಪೊಲೀಸ್‌ ಠಾಣೆಯಲ್ಲಿ ಅತ್ಯಾಚಾರ ಹಾಗೂ ಜಾತಿನಿಂದನೆ ದೂರು ದಾಖಲು| 


ಹೂವಿನಹಡಗಲಿ(ಅ.22): ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ವಡ್ಡನಹಳ್ಳಿ ತಾಂಡಾದ 23 ವರ್ಷದ ಯುವತಿ ಮೇಲೆ ಅತ್ಯಾಚಾರ ನಡೆದಿರುವ ಕುರಿತು ಹೂವಿನಹಡಗಲಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಪಟ್ಟಣದ ಹಂಸಾಗರ ರಸ್ತೆಯ ಪಕ್ಕದಲ್ಲಿರುವ ಕುಲದೇವ ಆಟೋಮೋಬೈಲ್‌ ಅಂಗಡಿ ಮಾಲೀಕ ಕಮಲೇಶ (17) ಎಂಬುವನೇ ಯುವತಿ ಮೇಲೆ ಕಾಮತೃಷೆ ತೀರಿಸಿಕೊಂಡ ಆರೋಪಿಯಾಗಿದ್ದಾನೆ. 

Tap to resize

Latest Videos

ಟ್ಯೂಷನ್ ಕ್ಲಾಸ್; 14  ವರ್ಷವಿದ್ದಾಗ ನಡೆದ ದೌರ್ಜನ್ಯಕ್ಕೆ  36 ಆದಾಗ ದೂರು ಕೊಟ್ಟಳು!

ಕಳೆದೊಂದು ವರ್ಷದಿಂದ ಈತ ಯುವತಿಯನ್ನು ಪ್ರೀತಿಸುತ್ತಿದ್ದ ಎಂದು ತಿಳಿದುಬಂದಿದೆ. ಸೋಮವಾರ ತನ್ನ ಮೇಲೆ ಅತ್ಯಾಚಾರ ನಡೆದಿದೆ. ಅಲ್ಲದೆ ಯುವಕ ತನ್ನನ್ನು ಮದುವೆಯಾಗಲು ನಿರಾಕರಿಸಿದ್ದಾನೆ ಎಂದು ಯುವತಿ ಹೇಳಿದ್ದಾಳೆ. ಈ ಸಂಬಂಧ ಹೂವಿನಹಡಗಲಿ ಪೊಲೀಸ್‌ ಠಾಣೆಯಲ್ಲಿ ಅತ್ಯಾಚಾರ ಹಾಗೂ ಜಾತಿನಿಂದನೆ ದೂರು ದಾಖಲಾಗಿದೆ.
 

click me!