
ಹುಬ್ಬಳ್ಳಿ (ಫೆ.5) : ಹೆಂಡತಿಯಿದ್ದು, ಮೂವರು ಮಕ್ಕಳ ತಂದೆಯಾಗಿರುವ ವ್ಯಕ್ತಿಯೊಬ್ಬ ಅಪ್ರಾಪ್ತ ಬಾಲಕಿಯೊಬ್ಬಳನ್ನು ಮದುವೆಯಾದ ಘಟನೆ ಮಾಧವನಗರದಲ್ಲಿ ನಡೆದಿದೆ. ಮದುವೆಯಾಗಿರುವ ಬಾಲಕಿಯನ್ನು ಬಾಲಮಂದಿರದಲ್ಲಿಡಲಾಗಿದೆ. ಈ ಕುರಿತು ಅಶೋಕ ನಗರ ಠಾಣೆಯಲ್ಲಿ ಮಕ್ಕಳ ಮತ್ತು ಕಲ್ಯಾಣ ಇಲಾಖೆಯು ದೂರು ದಾಖಲಿಸಿದೆ. ಇದೀಗ ಮದುವೆಯಾದ ವ್ಯಕ್ತಿ ನಾಪತ್ತೆಯಾಗಿದ್ದು, ಪೊಲೀಸರು ಹುಡುಕಾಟದಲ್ಲಿ ತೊಡಗಿದ್ದಾರೆ.
ಇಲ್ಲಿನ ಮಾಧವನಗರದ ನಿವಾಸಿ ಹನುಮಂತ ಉಪ್ಪಾರ ಎಂಬಾತನೇ ಮದುವೆಯಾದವನು ಎಂದು ಹೇಳಲಾಗಿದೆ. ಈತನಿಗೆ ಹಾಗೂ 16 ವರ್ಷ 11 ತಿಂಗಳ ಬಾಲಕಿಗೆ ರಾಮದುರ್ಗ ತಾಲೂಕಿನ ಇಡಕಲ್ ದೇವಸ್ಥಾನವೊಂದರಲ್ಲಿ ಜನವರಿಯಲ್ಲಿ ಮದುವೆಯಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಕುರಿತು ಧಾರವಾಡ ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿಗೆ ದೂರವಾಣಿ ಕರೆ ಬಂದಿದೆ. ಅದರನ್ವಯ ವಿಚಾರಣೆ ನಡೆಸಿದಾಗ ಮದುವೆಯಾಗಿರುವುದು ಮೇಲ್ನೋಟಕ್ಕೆ ಖಚಿತವಾಗಿದೆ.
Pocso case: 13 ವರ್ಷದ ಬಾಲೆ ಗರ್ಭಿಣಿ, ಸ್ವತಃ ತಂದೆಯಿಂದಲೇ ನಡೆದಿದೆ ಪಾಪ ಕೃತ್ಯ!
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಯ ಹುಡುಕಾಟದಲ್ಲಿ ತೊಡಗಿದ್ದಾರೆ. ಈ ವರೆಗೂ ಪತ್ತೆಯಾಗಿಲ್ಲ. ಈ ನಡುವೆ ಬಾಲಕಿಗೆ ಬಾಲಮಂದಿರದಲ್ಲಿ ಆಶ್ರಯ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೊದಲ ಪತ್ನಿ ಕೂಡ ಮಹಿಳಾ ಠಾಣೆಯಲ್ಲಿ ದೂರು ಸಲ್ಲಿಸಿದ್ದಾಳೆ. ಅದರ ವಿಚಾರಣೆಯೂ ಇದೀಗ ನಡೆಯುತ್ತಿದೆ.
ಕೆವೈಸಿ ಸಂದೇಶ ಕಳಿಸಿ ಖಾತೆಯಿಂದ ಲಕ್ಷಾಂತರ ರು. ವಂಚನೆ
ಉಡುಪಿ: ಇಲ್ಲಿನ ಅಲೆವೂರಿನ ಸ್ಟ್ಯಾನ್ಲಿ ಪಿ. ಕುಂದರ್ (79) ಎಂಬವರ ಖಾತೆಯ ಕೆವೈಸಿ ಮಾಡಿಸುವುದಾಗಿ ಹೇಳಿ ಲಕ್ಷಾಂತರ ರು. ವಂಚಿಸಿದ ಘಟನೆ ನಡೆದಿದೆ. ಅವರ ಮೊಬೈಲಿಗೆ ನಿಮ್ಮ ಕೆನರಾ ಬ್ಯಾಂಕ್‌ನ ಹೆಸರಿನಲ್ಲಿ ಖಾತೆಗೆ ಕೆವೈಸಿ ಮಾಡಿಸುವಂತೆ ಸಂದೇಶ ಬಂದಿತ್ತು. ಅದನ್ನು ನಂಬಿ ಕುಂದರ್ ಅವರು ಸಂದೇಶ ಬಂದ ನಂಬರಿಗೆ ಕರೆ ಮಾಡಿದ್ದು, ಅಲ್ಲಿನ ಅಪರಿಚಿತ ವ್ಯಕ್ತಿಗೆ ಬ್ಯಾಂಕ್ ಖಾತೆಯ ವಿವರ, ಒಟಿಪಿ ನೀಡಿದ್ದರು. ನಂತರ ಅವರ ಖಾತೆಯಿಂದ ಒಟ್ಟು 1,06,826 ಹಣವನ್ನು ವರ್ಗಾವಣೆ ಮಾಡಿಕೊಂಡು ವಂಚಿಸಿದ್ದಾರೆ. ಉಡುಪಿ ಸೆನ್ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ