Chitradurga: ಅಪ್ರಾಪ್ತೆ ಮೇಲೆ ಪತಿ, ಮೂವರು ಸ್ನೇಹಿತರಿಂದ ಸಾಮೂಹಿಕ ರೇಪ್‌

By Govindaraj S  |  First Published Jun 27, 2022, 5:00 AM IST

ಅಪ್ರಾಪ್ತ ವಯಸ್ಸಿನ ಯುವತಿಯೊಬ್ಬಳ ಮೇಲೆ ಪತಿಯೇ ತನ್ನ ಮೂವರು ಸ್ನೇಹಿತರೊಂದಿಗೆ ಸೇರಿ ಸಾಮೂಹಿಕ ಅತ್ಯಾಚಾರವೆಸಗಲಾದ ಅಮಾನವೀಯ ಘಟನೆ ಚಿತ್ರದುರ್ಗದಲ್ಲಿ ನಡೆದಿದ್ದು ತಡವಾಗಿ ಪೊಲೀಸರಿಗೆ ದೂರು ನೀಡಲಾಗಿದೆ.


ಚಿತ್ರದುರ್ಗ (ಜೂ.27): ಅಪ್ರಾಪ್ತ ವಯಸ್ಸಿನ ಯುವತಿಯೊಬ್ಬಳ ಮೇಲೆ ಪತಿಯೇ ತನ್ನ ಮೂವರು ಸ್ನೇಹಿತರೊಂದಿಗೆ ಸೇರಿ ಸಾಮೂಹಿಕ ಅತ್ಯಾಚಾರವೆಸಗಲಾದ ಅಮಾನವೀಯ ಘಟನೆ ಚಿತ್ರದುರ್ಗದಲ್ಲಿ ನಡೆದಿದ್ದು ತಡವಾಗಿ ಪೊಲೀಸರಿಗೆ ದೂರು ನೀಡಲಾಗಿದೆ. ಜೂನ್‌ 7ರಂದು ಘಟನೆ ನಡೆದಿದ್ದು ನಗರದ ಹೊರವಲಯದಲ್ಲಿರುವ ಗಾರ್ಮೆಂಟ್ಸ್‌ ಹಿಂಭಾಗದ ಮನೆಯೊಂದಕ್ಕೆ 17 ವರ್ಷದ ಅಪ್ರಾಪ್ತೆಯನ್ನು ಕರೆದೊಯ್ದು ಅತ್ಯಾಚಾರವೆಸಗಲಾಗಿದೆ ಎಂದು ಮಹಿಳಾ ಠಾಣೆಗೆ ನೀಡಲಾದ ದೂರಿನಲ್ಲಿ ಉಲ್ಲೇಖಿಸಲಾಗಿದೆ. 

ಒಂದು ವರ್ಷದ ಹಿಂದೆ ಬಾಲಕಿಯೋರ್ವಳನ್ನು ಬೆದರಿಸಿ ಮದುವೆಯಾಗಿದ್ದ ವ್ಯಕ್ತಿಯೇ ತನ್ನ ಸ್ನೇಹಿತರ ಜೊತೆ ಸೇರಿ ಈ ಕೃತ್ಯವೆಗಿದ್ದಾನೆಂದು ಆರೋಪಿಸಲಾಗಿದೆ. ಮದುವೆಯಾದ ನಂತರ ಅಪ್ರಾಪ್ತಳ ಶೀಲದ ಬಗ್ಗೆ ಶಂಕೆ ವ್ಯಕ್ತಪಡಿಸುತ್ತಿದ್ದ ಪತಿ ನಿತ್ಯವೂ ಗಲಾಟೆ ಮಾಡುತ್ತಿದ್ದ ಎನ್ನಲಾಗಿದೆ. ಜೂನ್‌ 7 ರಂದು ತನ್ನ ಮೂರು ಮಂದಿ ಸ್ನೇಹಿತರೊಂದಿಗೆ ಆಕೆಯ ಕರೆದೊಯ್ದು ಹಲ್ಲೆ ನಡೆಸಿದ್ದಾನೆ. ಬಳಿಕ ನಾಲ್ವರು ಸೇರಿ ಸಾಮೂಹಿಕವಾಗಿ ಅತ್ಯಾಚಾರವೆಸಗಿದ್ದಾರೆ. ದೂರು ನೀಡಿದರೆ ಕೊಲೆ ಮಾಡುವುದಾಗಿ ಪತಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಇದೀಗ ನಗರದ ಮಹಿಳಾ ಠಾಣೆಯಲ್ಲಿ ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

Tap to resize

Latest Videos

ಸಹೋದ್ಯೋಗಿ ಪತ್ನಿ ಮೇಲೆ ಅತ್ಯಾಚಾರ ಆರೋಪ: CISF ಕಾನ್ಸ್‌ಟೇಬಲ್ಸ್ ವಜಾ ಎತ್ತಿ ಹಿಡಿದ ಕರ್ನಾಟಕ ಹೈಕೋರ್ಟ್

ಮಾವಿನ ಹಣ್ಣಿನ ಆಸೆ ತೋರಿಸಿ 3 ವರ್ಷದ ಮಗುವಿನ ಮೇಲೆ ಅತ್ಯಾಚಾರ: ದೇಶದಲ್ಲಿ ಮತ್ತೆ ಮತ್ತೆ ಅತ್ಯಾಚಾರ ಪ್ರಕರಣಗಳು ದಾಖಲಾಗುತ್ತಿದೆ. ಒಂದಕ್ಕಿಂತ ಮತ್ತೊಂದು ಭಯಾನಕ ಘಟನೆಗಳಾಗಿವೆ. ಇದೀಗ ದೆಹಲಿಯಲ್ಲಿ 3 ವರ್ಷದ ಮಗುವಿನ ಮೇಲೆ ಅತ್ಯಾಚಾರ ನಡೆದಿದೆ. ಮಗುವಿನ ಮಾವಿನ ಹಣ್ಣು ಕೊಡಿಸುವುದಾಗಿ ಹೇಳಿ ಅತ್ಯಾಚಾರ ಎಸಗಲಾಗಿದೆ. ಈ ಘಟನೆ ದೆಹಲಿ ತುಘಲಕ್‌ಬಾದ್‌ನಲ್ಲಿ ನಡೆದಿದೆ. ಮಗುವಿನ ಪೋಷಕರು ದೂರು ದಾಖಲಿಸಿದ ಬೆನ್ನಲ್ಲೇ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ.ಇತ್ತ ತುಘಲಕ್‌ಬಾದ್‌ನಲ್ಲಿ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ. ಆರೋಪಿಗೆ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿದ್ದಾರೆ.

ಆರೋಪಿ ಹಾಗೂ ಮಗುವಿನ ಕುಟುಂಬಸ್ಥರು ಪರಿಚಯಸ್ಥರಾಗಿದ್ದಾರೆ. ಅಕ್ಕ ಪಕ್ಕದಲ್ಲೇ ಮನೆಗಳಿವೆ. ಮನೆಯಿಂದ ಮಗು ಆಟವಾಡಲು ಹೊರಗೆ ಬಂದಾಗ ಆರೋಪಿ ಮಗುವನ್ನು ತನ್ನ ಮನೆಯೊಳಕ್ಕೆ ಕರೆದಿದ್ದಾನೆ. ಮಗುವಿನ ಮಾವಿನ ಹಣ್ಣು ತೋರಿಸಿ ಮನೆಗೆ ಕರೆದಿದ್ದಾನೆ. ಹಣ್ಣು ಕತ್ತರಿಸಿ ಕೊಡುವುದಾಗಿ ಹೇಳಿದ್ದಾನೆ. 3 ವರ್ಷದ ಪುಟ್ಟ ಮಗು ಈತನ ಕಪಟ ನಾಟಕ ಅರಿಯದೆ ಆತನ ಮನೆ ಪ್ರವೇಶಿಸಿದೆ. ಅಷ್ಟೇ ನೋಡಿ, ಕಾಮುಕ ಮಗುವಿನ ಮೇಲೆ ಏರಗಿದ್ದಾನೆ. ಮಗು ಕಿರುಚಾಡಲು ಆರಂಭಿಸಿದೆ. ಬಾಯಿ ಗಟ್ಟಿಯಾಗಿ ಹಿಡಿದು ಅತ್ಯಾಚಾರ ಎಸಗಿದ್ದಾನೆ. ಬಳಿಕ ಮಾವಿನ ಹಣ್ಣು ನೀಡಿ ಮನೆಗೆ ಕಳುಹಿಸಿದ್ದಾನೆ.

ಅಪ್ರಾಪ್ತೆ ಮೇಲೆ ಸೋದರ ಮಾವ ಅತ್ಯಾಚಾರ, ಬಾಲಕಿ 7 ತಿಂಗಳು ಗರ್ಭಿಣಿ

ಮನೆಗೆ ಬಂದ ಮಗು ಆಘಾತಕ್ಕೆ ಒಳಗಾಗಿದೆ. ಏನೂ ಅರಿಯದ ಮಗುವಿನ ಪೋಷಕರಲ್ಲಿ ಹೇಳಲು ತಿಳಿಯದಾಗಿದೆ. ಸಂಜೆ ವೇಳೆ ಮಗುವಿನ ಆರೋಗ್ಯ ಕ್ಷೀಣಿಸತೊಡಗಿದೆ. ಮಾತು ಆಡದೇ ಮಗುವನ್ನು ನೋಡಿ ಪೋಷಕರು ಭಯಭೀತಗೊಂಡಿದ್ದಾರೆ. ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಮಗುವನ್ನು ಪರಿಶೀಲಿಸದ ವೈದ್ಯರಿಗೆ ಆಘಾತ ಕಾದಿತ್ತು. ಮಗುವಿನ ಮೇಲೆ ಅತ್ಯಾಚಾರ ಆಗಿದೆ ಎಂದು ವೈದ್ಯರು ದೃಢಪಡಿಸಿದ್ದಾರೆ. ಸದ್ಯ  ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇತ್ತ ಆರೋಪಿಯನ್ನು ಬಂಧಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. 

click me!