ಜಿಲ್ಲೆಯ ಹೊನ್ನಾಳಿ ಪೊಲೀಸ್ ಠಾಣೆ ವ್ಯಾಪ್ತಿಯ ತಿಮ್ಲಾಪುರ ಗ್ರಾಮದಲ್ಲಿ ನಡೆದ ರೇಪ್ ಅಂಡ್ ಮರ್ಡರ್ ಕೇಸನ್ನು ಹೊನ್ನಾಳಿ ಪೊಲೀಸರು ಪತ್ತೆಹಚ್ಚಿದ್ದಾರೆ. ಈ ಕೇಸ್‌ನಲ್ಲಿ ಆರೋಪಿ ಪತ್ತೆ ಹಚ್ಚಿದ್ದು ಬೇರೆ ಯಾರು ಅಲ್ಲ. ಆರೋಪಿಗಳ ಪಾಲಿಗೆ ಸಿಂಹ ಸ್ವಪ್ನವಾಗಿರುವ ದಾವಣಗೆರೆ ಶ್ವಾನದಳ ತುಂಗಾ 777 ಚಾರ್ಲಿ.
ವರದಿ: ವರದರಾಜ್, ದಾವಣಗೆರೆ
ದಾವಣಗೆರೆ (ಜೂ.26): ಜಿಲ್ಲೆಯ ಹೊನ್ನಾಳಿ ಪೊಲೀಸ್ ಠಾಣೆ ವ್ಯಾಪ್ತಿಯ ತಿಮ್ಲಾಪುರ ಗ್ರಾಮದಲ್ಲಿ ನಡೆದ ರೇಪ್ ಅಂಡ್ ಮರ್ಡರ್ ಕೇಸನ್ನು ಹೊನ್ನಾಳಿ ಪೊಲೀಸರು ಪತ್ತೆಹಚ್ಚಿದ್ದಾರೆ. ಈ ಕೇಸ್‌ನಲ್ಲಿ ಆರೋಪಿ ಪತ್ತೆ ಹಚ್ಚಿದ್ದು ಬೇರೆ ಯಾರು ಅಲ್ಲ. ಆರೋಪಿಗಳ ಪಾಲಿಗೆ ಸಿಂಹ ಸ್ವಪ್ನವಾಗಿರುವ ದಾವಣಗೆರೆ ಶ್ವಾನದಳ ತುಂಗಾ 777 ಚಾರ್ಲಿ. ತಿಮ್ಲಾಪುರದ ಗೀತಮ್ಮ 35 ವರ್ಷ ಜೂನ್ 22 ರಂದು ರೇಪ್ ಅಂಡ್ ಮರ್ಡರ್ ಆಗಿ ಕೊಲೆಯಾಗಿದ್ದರು. ಗೀತಮ್ಮಳ ಪತಿ ಚಿನ್ನಪ್ಪ ಈ ಬಗ್ಗೆ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ದಿನಾಂಕ-22/04/2022 ರಂದು ಸಂಜೆ 07.00 ಗಂಟೆಯಿಂದ ರಾತ್ರಿ 09.00 ಗಂಟೆ ಮಧ್ಯದ ಅವಧಿಯಲ್ಲಿ ಅತ್ಯಾಚಾರವೆಸಗಿ ಉಸುರುಗಟ್ಟಿಸಿ ಕೊಲೆ ಮಾಡಿರುತ್ತಾರೆ ಅಂತ ದೂರು ನೀಡಿದ್ದರು.
ಈ ಬಗ್ಗೆ ಹೊನ್ನಾಳಿ ಪೊಲೀಸ್ ಠಾಣೆ ಗುನ್ನೆ ನಂ:-119/2022 ಕಲಂ: 354(ಎ), 376(ಎ), 302 ಐ.ಪಿ.ಸಿ. ರೀತ್ಯಾ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಪ್ರಕರಣದ ಆರೋಪಿಯ ಪತ್ತೆಗಾಗಿ ಸಂತೋಷ್ ಕೆ.ಎಂ., ಪೊಲೀಸ್ ಉಪಾಧೀಕ್ಷಕರು, ಚನ್ನಗಿರಿ ಉಪ ವಿಭಾಗ, ಚನ್ನಗಿರಿ ರವರ ಮಾರ್ಗದರ್ಶನದಲ್ಲಿ ಹೊನ್ನಾಳಿ ಪೊಲೀಸ್ ವೃತ್ತ ನಿರೀಕ್ಷಕರ ನೇತೃತ್ವದಲ್ಲಿ ಹೊನ್ನಾಳಿ ಪೊಲೀಸ್ ಠಾಣೆ ಪಿ.ಎಸ್.ಐ.ಹಾಗೂ ಸಿಬ್ಬಂದಿಯವರನ್ನೊಳಗೊಂಡ ತಂಡವನ್ನು ರಚಿಸಿದ್ದರು. ಈ ತಂಡ ಜೂನ್ 25 ರಂದು ಅತ್ಯಾಚಾರವೆಸಗಿ ಉಸುರುಗಟ್ಟಿಸಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿ ಹರೀಶ್ (32) ನನ್ನು ಬಂಧಿಸಿದ್ದಾರೆ. ಪೇಂಟಿಂಗ್ ಕೆಲಸ ಮಾಡುತ್ತಿದ್ದ ಹರೀಶ್ ತಿಮ್ಲಾಪುರ ಗ್ರಾಮದವನಾಗಿದ್ದು, ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತಾರೆ.
ಹೊಟ್ಟೆ ಕೊಯ್ದು ಹಾಗೆ ಬಿಟ್ಟ ವೈದ್ಯ, ದಾವಣಗೆರೆ ಡಾಕ್ಟರ್ ಯಡವಟ್ಟಿಗೆ ವೃದ್ಧೆ ನರಳಾಟ
ಪ್ರಕರಣದಲ್ಲಿ ಆರೋಪಿ ಪತ್ತೆ ಹಚ್ಚಿದ್ದು ಶ್ವಾನ ತುಂಗಾ ಚಾರ್ಲಿ 777: ಆರೋಪಿತನ ಪತ್ತೆ ಕಾರ್ಯದಲ್ಲಿ ಜಿಲ್ಲಾ ಪೊಲೀಸ್ ಶ್ವಾನ ದಳದ ತುಂಗಾ ಶ್ವಾನ ಹಾಗೂ ಶ್ವಾನ ನಿರ್ವಾಹಕರಾದ ಕೆ.ಎಂ.ಪ್ರಕಾಶ ಹಾಗೂ ಎಂ.ಡಿ, ಷಫಿ ರವರು ಭಾಗವಹಿಸಿದ್ದರು. ರೇಪ್ ಅಂಡ್ ಮರ್ಡರ್ ಆದ ಸ್ಥಳಕ್ಕೆ ಹೋಗಿದ್ದ ತುಂಗಾ ರೇಪ್ ಆದ ಮರ್ಮಾಂಗದ ವಾಸನೆ ಹಿಡಿದು ಹೊರಟ ತುಂಗಾ ಶ್ವಾನ ಸೀದಾ ಆರೋಪಿ ಹರೀಶ್‌ನ ಮನೆ ಬಳಿ ನಿಂತಿತ್ತು. ಕೊಲೆ ಮಾಡಿದ ಹರೀಶ್ ಬಚ್ಚಲು ಮನೆಯಲ್ಲಿ ಸ್ನಾನ ಮಾಡಿ ಬಟ್ಟೆ ಬದಲಾಯಿಸಿದ್ದ. ಆರೋಪಿ ಬಚ್ಚಲು ಮನೆ ಪ್ರವೇಶಿಸಿದ್ದ ತುಂಗಾ ಶ್ವಾನ ಆರೋಪಿ ಇವನೇ ಎಂದು ಮೇಲ್ನೋಟಕ್ಕೆ ಹೇಳಿತ್ತು. ಅವನ ಬಟ್ಟೆ ಸ್ಮೆಲ್ ಮಾಡಿದ ಶ್ವಾನ ನಂತರ ಆಗಲೇ ಅನುಮಾನದಿಂದ ಬಂಧಿತನಾಗಿದ್ದ ಹರೀಶ್‌ನ ಬಳಿ ನಿಂತಿತ್ತು. ಹರೀಶ್‌ನ ಒಳಉಡುಪಿನ ವಾಸನೆ ಹಿಡಿದ ನಾಯಿ ಇವನೇ ಆರೋಪಿ ಎಂದು ಸಾರಿ ಸಾರಿ ಹೇಳಿತ್ತು.
ಕಾಮ ಪಿಪಾಸು ಆಗಿದ್ದ ಹತ್ಯೆ ಆರೋಪಿ: ಹೊನ್ನಾಳಿ ತಿಮ್ಲಾಪುರದಲ್ಲಿ ನಡೆದ ಗೃಹಿಣಿ ರೇಪ್ ಅಂಡ್ ಮರ್ಡರ್ ನಲ್ಲಿ ಹರೀಶ್ ಆರೋಪಿಯಾಗಿದ್ದು ಈ ಹಿಂದೆ ಗೃಹಿಣಿ ಗೀತಮ್ಮಳನ್ನು ಇಷ್ಟಪಟ್ಟಿದ್ದ. ಗೀತಮ್ಮ ಜೊತೆ ಈ ಹಿಂದೆಯು ಹಲವು ಬಾರಿ ಸಲಿಗೆಯಿಂದ ಇದ್ದು ಅವಳನ್ನು ಬಳಸಿಕೊಂಡಿದ್ದ. ಆದ್ರೆ ಇತ್ತಿಚೆಗೆ ಅವಳು ಇವನನ್ನು ನಿರಾಕರಿಸಿದ್ದಳು. ಗೀತಮ್ಮನಿಗೆ ಸ್ವಲ್ಪ ಕುಡಿತದ ಚಟವಿತ್ತು. ಆಗಾಗಿ ಮದ್ಯ ತೆಗೆದುಕೊಂಡು ಅವಳನ್ನು ಕುಡಿಸಿ ಅವಳನ್ನು ಇಂಟರಕೋರ್ಸ್‌ಗೆ ಕರೆದಿದ್ದ.ಆದ್ರೆ ಅವಳು ಅದನ್ನು ನಿರಾಕರಿಸಿದ್ದಳು.
ಕಾಮ ಪಿಪಾಸು ಆಗಿದ್ದ ಹರೀಶ್ ರೇಪ್‌ಗೂ ಮುನ್ನ ಪೋರ್ನ್ ವಿಡಿಯೋ ನೋಡಿದ್ದ. ಆ ವಿಡಿಯೋ ನೋಡಿ ಮದವೇರಿದ್ದ ಹರೀಶ್ ಗೀತಮ್ಮನ ಮನೆ ಕಡೆ ಒಡಾಡಿ ಅವಳ ಗಂಡ ಇಲ್ಲದ್ದನ್ನು ಕನ್ಪರ್ಮ್ ಮಾಡಿಕೊಂಡು ಗೀತಮ್ಮನ ಬಳಿ ಹೋಗಿ ಸೆಕ್ಸ್‌ಗೆ ಪೀಡಿಸಿದ್ದ. ಸೆಕ್ಸ್ ಬೇಡ ಎಂದು ಹಠ ಹಿಡಿದಾಗ ಅವಳನ್ನು ಬಾಗಿಲ ಮೇಲೆ ಬೀಳಿಸಿ ತೆಲೆಗೆ ಪೆಟ್ಟು ಬಿದ್ದು ಪ್ರಜ್ಞೆ ತಪ್ಪುವಂತೆ ಮಾಡಿದ್ದ. ಅವನ ಲೈಂಗಿಕ ಕ್ರೌರ್ಯದಲ್ಲಿ ಅವಳು ಪ್ರಜ್ಞೆ ತಪ್ಪಿದ್ದರೂ ಕುತ್ತಿಗೆ ಭಾಗ ಹಿಡಿದು ಅಮುಕಿದ್ದರಿಂದ ಇವನಿಗೆ ಅರಿವಿಲ್ಲದೇ ಅವಳು ಸಾವನ್ನಪ್ಪಿದ್ದಳು.
ರೇಪ್ ಅಂಡ್ ಮರ್ಡರ್‌ನಲ್ಲಿ ಸಾಕ್ಷ್ಯಗಳಾಗಿದ್ದು ಏನು: ರೇಪ್ ಅಂಡ್ ಮರ್ಡರೇ ಕೇಸ್‌ನಲ್ಲಿ ಹೊನ್ನಾಳಿ ಪೊಲೀಸರು ಮಹತ್ವದ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಸಾವನ್ನಪ್ಪಿದ ಗೀತ್ಮಮ್ಮ ಮೃತದೇಹದಲ್ಲಿ ಸ್ಪರ್ಮ್, ಹಾಗು ಆರೋಪಿ ಹರೀಶ್ ಸ್ಪರ್ಮ್‌ನ್ನು ಡಿಎನ್‌ಎ ಟೆಸ್ಟ್‌ಗೆ ಕಳಿಸಿದ್ದಾರೆ. ಅಷ್ಟೇ ಅಲ್ಲದೇ ಮರ್ಡರ್ ಆದ ಗೀತಮ್ಮ ಕೈ ಉಗುರಿನಲ್ಲಿದ್ದ ಕೂದಲನ್ನು ಲ್ಯಾಬ್‌ನಲ್ಲಿ ಚೆಕ್ ಮಾಡಿಸಿ ಹರೀಶಶ್‌ನ ಕೂದಲನ್ನು ಸಂಗ್ರಹಿಸಿ ಲ್ಯಾಬ್‌ಗೆ ಕಳಿಸಲಾಗಿದೆ.
ದಾವಣಗೆರೆಗೆ ಬೀಗರಂತೆ ಬಂದು ಹೋಗೋ ಉಸ್ತುವಾರಿ ಸಚಿವರು, ಸೊರಗಿದ ಬಿಜೆಪಿ ಶಾಸಕರು!
ರೇಪ್ ಆರೋಪಿಗೆ ಶಿಕ್ಷೆ ಖಚಿತ: ಹೊನ್ನಾಳಿಗೆ ಸಿಕ್ಕಿರುವ ಸಾಂದರ್ಭಿಕ ಸಾಕ್ಷ್ಯಗಳ ಪ್ರಕಾರ ಆರೋಪಿಗೆ ಶಿಕ್ಷೆಯಾಗುವುದು ಖಚಿತ ಎನ್ನುತ್ತವೆ ಪೊಲೀಸ್ ಮೂಲಗಳು. ಆರೋಪಿ ಹರೀಶ್‌ನ ಸ್ಪರ್ಮ್, ಕೂದಲು, ಮರಣೋತ್ತರ ಪರೀಕ್ಷೆಯಲ್ಲಿ ಕುತ್ತಿಗೆ ಎದೆ ಮೇಲೆ ಮೂಡಿ ಬಂದಿರುವ ಕಲೆಗಳು, ಹರೀಶ್ ದೇಹದ ಮೇಲೆ ಮೂಡಿರುವ ಗುರುತುಗಳು ಈತನಿಗೆ ಶಿಕ್ಷೆ ಖಚಿತ ಎನ್ನುತ್ತಿವೆ.