Mangaluru: ವಿಶೇಷ ಚೇತನ ಮಹಿಳೆ ಮನೆಗೆ ನುಗ್ಗಿ ಅತ್ಯಾಚಾರವೆಸಗಿದ 65ರ ಮುದುಕಪ್ಪ!

Published : Apr 04, 2023, 08:46 PM ISTUpdated : Apr 04, 2023, 10:04 PM IST
Mangaluru: ವಿಶೇಷ ಚೇತನ  ಮಹಿಳೆ ಮನೆಗೆ ನುಗ್ಗಿ ಅತ್ಯಾಚಾರವೆಸಗಿದ 65ರ ಮುದುಕಪ್ಪ!

ಸಾರಾಂಶ

ಮಂಗಳೂರು ನಗರದಲ್ಲಿ 65 ವರ್ಷದ ವೃದ್ಧನೋರ್ವ ವಿಶೇಷ ಚೇತನ  ಮಹಿಳೆಯೊಬ್ಬರನ್ನು ಅತ್ಯಾಚಾರವೆಸಗಿರುವ ಘಟನೆ  ಮಂಗಳವಾರ ನಡೆದಿದೆ. ಘಟನೆ ಬಳಿಕ ವೃದ್ಧ ನಾಪತ್ತೆಯಾಗಿದ್ದು, ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.

ಮಂಗಳೂರು (ಏ.4): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭೀಕರ ಘಟನೆಯೊಂದು ನಡೆದಿದೆ. ಮಂಗಳೂರು ನಗರದಲ್ಲಿ 65 ವರ್ಷದ ವೃದ್ಧನೋರ್ವ ವಿಶೇಷ ಚೇತನ ಮಹಿಳೆಯೊಬ್ಬರನ್ನು ಅತ್ಯಾಚಾರವೆಸಗಿರುವ ಘಟನೆ  ಮಂಗಳವಾರ ನಡೆದಿದೆ. ಘಟನೆ ಬಳಿಕ ವೃದ್ಧ ನಾಪತ್ತೆಯಾಗಿದ್ದು,   ಅತ್ಯಾಚಾರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ವೃದ್ಧ ಆರೋಪಿಯನ್ನು ಸೂರಿಂಜೆ ನಿವಾಸಿ ರಾಜಾ ಭಟ್ ಎಂದು ಗುರುತಿಸಲಾಗಿದೆ. ಈ ಸಂಬಂಧ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಸಂತ್ರಸ್ತೆ ತನ್ನ ಸಹೋದರನ ಕುಟುಂಬದೊಂದಿಗೆ ವಾಸಿಸುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಸಂತ್ರಸ್ತೆಯ ಸಹೋದರ ಮತ್ತು ಆಕೆಯ ಅತ್ತಿಗೆ ಕೆಲಸದ ನಿಮಿತ್ತ ಹೊರಗೆ ಹೋಗಿದ್ದ ವೇಳೆ ಆರೋಪಿಗಳು ಮನೆಗೆ ನುಗ್ಗಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. 

ಏನೋ ಅನಾಹುತ ನಡೆದಿದೆ ಎಂದು ಗಮನಿಸಿದ ನೆರೆಹೊರೆಯ ಮನೆಯವರು ಸಂತ್ರಸ್ತೆಯ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದ್ದಾರೆ. ಆರೋಪಿ ಸಂತ್ರಸ್ತೆಯ ಮೇಲೆ ಅತ್ಯಾಚಾರವೆಸಗಿರುವುದು ತಿಳಿದ ಬಳಿಕ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ನಂತರ ಪ್ರಕರಣವನ್ನು ಮಹಿಳಾ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ. 

ಆರೋಪಿ ರಾಜಾ ಭಟ್ ಬಾಡಿಗೆ ಮನೆಯಲ್ಲಿ ಒಂಟಿಯಾಗಿ ವಾಸವಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಶೇಷ ಸಾಮರ್ಥ್ಯವುಳ್ಳ ಮಹಿಳೆ ಹಗಲಿನಲ್ಲಿ ಮನೆಯಲ್ಲಿ ಒಬ್ಬಂಟಿಯಾಗಿರುವುದನ್ನು ಗಮನಿಸಿದ ನಂತರ, ಯೋಜನೆ ಹಾಕಿಕೊಂಡೇ ಈ ಅಪರಾಧ ಎಸಗಿದ್ದಾನೆ. ಈತನ ವಿರುದ್ಧ ದೂರು ದಾಖಲಾಗಿದ್ದು, ತಲೆಮರೆಸಿಕೊಂಡಿದ್ದಾನೆ. ಪ್ರಕರಣದ ತನಿಖೆ ನಡೆಯುತ್ತಿದೆ.

ಚಿನ್ನ ಕಳ್ಳತನ ಮಾಡುತ್ತಿದ್ದ ಸೋಷಿಯಲ್ ಮೀಡಿಯಾ ಸ್ಟಾರ್ ಬೆಂಗಳೂರಿನಲ್ಲಿ ಬಂಧನ!

ಪಾರ್ಕ್‌ನಲ್ಲಿ ಸ್ನೇಹಿತನ ಜೊತೆ ಇದ್ದವಳ ಮೇಲೆ ಅತ್ಯಾಚಾರ
ಬೆಂಗಳೂರು: ಪಾರ್ಕ್‌ನಲ್ಲಿ ಸ್ನೇಹಿತನ ಜತೆ ಕುಳಿತ್ತಿದ್ದ ಯುವತಿಯನ್ನು ಎಳೆದೊಯ್ದು ಚಲಿಸುವ ಕಾರಿನಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪದಡಿ ನಾಲ್ವರು ಆರೋಪಿಗಳನ್ನು ಬೆಂಗಳೂರಿನ ಕೋರಮಂಗಲ ಠಾಣೆ ಪೊಲೀಸರು ಬಂಧಿಸಿದ್ದಾರೆ.

ವಿವಾಹಿತೆಯ ಜೊತೆ ತಮ್ಮನ ಲವ್ವಿ ಡವ್ವಿ, ಅಣ್ಣನನ್ನು ಕಾರ್‌ನಲ್ಲಿ ಸಜೀವವಾಗಿ ಸುಟ್ಟ ದುರುಳರು!

ಈಜೀಪುರ ನಿವಾಸಿಗಳಾದ ಸತೀಶ್‌, ವಿಜಯ್, ಶ್ರೀಧರ್‌ ಮತ್ತು ಕಿರಣ್‌ ಬಂಧಿತರು. 19 ವರ್ಷದ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಈ ನಾಲ್ವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ಮಾ.25ರಂದು ರಾತ್ರಿ 9ರ ಸುಮಾರಿಗೆ ಕೋರಮಂಗಲದ ನ್ಯಾಷನಲ್‌ ಗೇಮ್ಸ್‌ ಪಾರ್ಕ್ನಲ್ಲಿ ಸ್ನೇಹಿತನ ಜತೆ ಯುವತಿ ಮಾತನಾಡುತ್ತಾ ಕುಳಿತ್ತಿದ್ದಳು. ಆಗ ಈ ನಾಲ್ವರು ಯುವತಿಯನ್ನು ಎಳೆದೊಯ್ದು ಕಾರಿನಲ್ಲಿ ಕೂರಿಸಿಕೊಂಡು ಬಳಿಕ ಸಾಮೂಹಿಕ ಅತ್ಯಾಚಾರ ನಡೆಸಿ ಮುಂಜಾನೆ ಮನೆ ಬಳಿ ಯುವತಿಯನ್ನು ಬಿಟ್ಟು ಪರಾರಿಯಾಗಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಬಂಧಿತ ಆರೋಪಿಗಳು ಹಾಗೂ ಸಂತ್ರಸ್ತೆ ಈಜೀಪುರ ಮೂಲದವರಾಗಿದ್ದು, ಪರಸ್ಪರ ಮುಖ ಪರಿಚಯವಿತ್ತು. ಆದರೆ, ಪರಸ್ಪರ ಮಾತುಕತೆ ಇರಲಿಲ್ಲ ಎಂದು ತಿಳಿದು ಬಂದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು
ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ