Mangaluru Crime ಕರಾವಳಿಯಲ್ಲಿ ಮತ್ತೊಂದು ರಕ್ತಪಾತಕ್ಕೆ ಸಂಚು, ತನಿಖೆ ವೇಳೆ ಸ್ಫೋಟಕ ಮಾಹಿತಿ ಬಹಿರಂಗ

Published : Jan 14, 2022, 06:02 PM IST
Mangaluru Crime  ಕರಾವಳಿಯಲ್ಲಿ ಮತ್ತೊಂದು ರಕ್ತಪಾತಕ್ಕೆ ಸಂಚು, ತನಿಖೆ ವೇಳೆ ಸ್ಫೋಟಕ ಮಾಹಿತಿ ಬಹಿರಂಗ

ಸಾರಾಂಶ

* ಮಂಗಳೂರಿನಲ್ಲಿ ‌ಮತ್ತೆ ಅರಂಭವಾಯ್ತಾ ಭೂಗತ ಪಾತಕಿಗಳ ಚಟುವಟಿಕೆ? * ಭೂಗತ ಪಾತಕಿ ವಿಕ್ಕಿ ಶೆಟ್ಟಿ ಸಹಚರರಿಂದ ನಡುರಾತ್ರಿ ಸುಲಿಗೆ ಕೃತ್ಯ * ವಿಚಾರಣೆ ವೇಳೆ ಮಂಗಳೂರಿನಲ್ಲಿ ಮತ್ತೊಂದು ಹತ್ಯೆ ಸಂಚು ಬಹಿರಂಗ

ಮಂಗಳೂರು, (ಜ.14): ಕೊಂಚದಿನ ಶಾಂತವಾಗಿದ್ದ ಕಡಲ ನಗರಿ ಮಂಗಳೂರಿನಲ್ಲಿ (Mangaluru) ಮತ್ತೆ  ಭೂಗತ ಪಾತಕಿಗಳ ಚಟುವಟಿಕೆಗಳು(underworld Element) ಶುರುವಾಗಿದೆ.

ಹೌದು...ಭೂಗತ ಪಾತಕಿ ವಿಕ್ಕಿ ಶೆಟ್ಟಿ (Vicky Shetty) ಸಹಚರರು ಮತ್ತೆ ಬಾಲಬಿಚ್ಚಿದ್ದು, ನಡುರಾತ್ರಿ ಸುಲಿಗೆ ಮಾಡುತ್ತಿದ್ದವರನ್ನು ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಶರಣ್ ಆಕಾಶಭವನ(38), ಅನಿಲ್ ಕುಮಾರ್ ಸಾಲ್ಯಾನ್(40), ಸೈನಾಲ್ ಡಿ ಸೋಜಾ, (22),ಪ್ರಸಾದ್(39), ಚೇತನ್ ಕೊಟ್ಟಾರಿ, (35) ಬಂಧಿತರು.

ವಿಕ್ಕಿ ಶೆಟ್ಟಿಯ ಸಹಚರನ ಹತ್ಯೆಗೆ ಹಣ ನೀಡಿದ್ದಕ್ಕೆ ಮನೀಶ್‌ ಕೊಲೆ

ವಿಕ್ಕಿ ಶೆಟ್ಟಿ ಸಹಚರ ಆಕಾಶಭವನ ಶರಣ್ ಆಲಿಯಾಸ್ ರೋಹಿದಾಸ್ ಸೇರಿ ನಾಲ್ವರ ಬಂಧಿಸಲಾಗಿದ್ದು, ವಿಚಾರಣೆ ವೇಳೆ ಮಂಗಳೂರಿನಲ್ಲಿ ಮತ್ತೊಂದು ಹತ್ಯೆ ಸಂಚು ಬಹಿರಂಗವಾಗಿದೆ. 

ಸುರತ್ಕಲ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಸುಲಿಗೆ ಪ್ರಕರಣದಲ್ಲಿ ಸಿಸಿಬಿ ಪೊಲೀಸರ ಕಾರ್ಯಾಚರಣೆ ನಡೆಸಿದ್ದರು. 2021ರ ಡಿಸೆಂಬರ್ 8ರ ರಾತ್ರಿ ಚೇಳಾರು ಬ್ರಿಡ್ಜ್ ಬಳಿ ವ್ಯಕ್ತಿಯೊಬ್ಬರ ಸುಲಿಗೆ ಮಾಡಲಾಗಿತ್ತು.

ಈ ಆರೋಪಿಗಳ ತಂಡ  ನಗದು, ಮೊಬೈಲ್ ಫೋನ್ ಹಾಗೂ ವಾಹನ ದೋಚಿತ್ತು. ಈ ಪ್ರಕರಣದ ವಿಚಾರಣೆ ವೇಳೆ ಕರಾವಳಿಯಲ್ಲಿ ಮತ್ತೊಂದು ರಕ್ತಪಾತಕ್ಕೆ ಸಂಚು ರೂಪಿಸಿರುವುದು ವಿಚಾರಣೆ ವೇಳೆ ಬಯಲಲಾಗಿದೆ.

ಆಕಾಶ್ ಭವನ ಶರಣ್ ಇತ್ತೀಚೆಗೆ ಜೈಲ್ ನಿಂದ ಜಾಮೀನು ಪಡೆದು ಬಿಡುಗಡೆಗೊಂಡಿದ್ದ. ಆಕಾಶ್ ಭವನ ಶರಣ್ ವಿರುದ್ದ ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ ಜಿಲ್ಲೆಯಲ್ಲಿ ಒಟ್ಟು 22 ಪ್ರಕರಣಗಳು ದಾಖಲಾಗಿವೆ.

6 ಕೊಲೆ, 2 ಅತ್ಯಾಚಾರ, 2 ಕೊಲೆ ಯತ್ನ, 2 ದರೋಡೆಗೆ ಯತ್ನ, 4 ಹಲ್ಲೆ, 2 ಅತ್ಯಾಚಾರ, 1 ದರೋಡೆ ಮತ್ತು ಎನ್ ಡಿ ಪಿ ಎಸ್ ಕಾಯ್ದೆ, ಕಳವು, ಹಫ್ತಾ ವಸೂಲಿ ಪ್ರಕರಣಗಳು ಆಕಾಶ್ ಭವನ ಶರಣ್ ಮೇಲಿವೆ. ಅಲ್ಲದೇ ಈತನ ಮೇಲೆ ಕಾವೂರು ಪೊಲೀಸ್ ಠಾಣೆಯಲ್ಲಿ ರೌಡಿ ಶೀಟ್ ದಾಖಲಾಗಿದೆ.

ಕಿಶೋರ್‌ ಶೆಟ್ಟಿ ಹತ್ಯೆತಿಂದೆ ವಿಕ್ಕಿ ಶೆಟ್ಟಿ ಕೈವಾಡ 
ಉಡುಪಿ ಜಿಲ್ಲೆಯ ಹಿರಿಯಡ್ಕ ಸಮೀಪ ನಡೆದಿದ್ದ ರೌಡಿ ಕಿಶೋರ್‌ ಶೆಟ್ಟಿ ಕೊಲೆ ಪ್ರತೀಕಾರಕ್ಕೆ ಲೇಡಿಸ್‌ ಬಾರ್‌ ಮಾಲೀಕ ಮನೀಶ್‌ ಶೆಟ್ಟಿಯನ್ನು ಆರೋಪಿಗಳು ಹತ್ಯೆ ಮಾಡಿದ್ದರು.

ಕಿಶೋರ್‌ ಶೆಟ್ಟಿ ಹತ್ಯೆಗೆ ಈತ ಹಣಕಾಸಿನ ನೆರವು ನೀಡಿದ್ದ ಕಾರಣಕ್ಕೆ ಆರೋಪಿಗಳು ಕೃತ್ಯ ಎಸಗಿರುವುದು ಒಪ್ಪಿಕೊಂಡಿದ್ದಾರೆ. ಇದಲ್ಲದೆ, ಈ ಕೊಲೆ ಹಿಂದೆ ಭೂಗತ ಪಾತಕಿ ವಿಕ್ಕಿ ಶೆಟ್ಟಿ ಕೈವಾಡ ಇರುವುದು ಸಹ ಗೊತ್ತಾಗಿದೆ. ಸಾಕ್ಷ್ಯಗಳನ್ನು ಕಲೆ ಹಾಕಲಾಗುತ್ತದೆ. ಈ ಕೇಸಿನಲ್ಲಿ ಮತ್ತಷ್ಟು ಮಂದಿ ಕೈವಾಡ ಇರುವುದು ಗೊತ್ತಾಗಿದೆ ಎಂದು ಪೊಲೀಸ್‌ ಅಧಿಕಾರಿ ಹೇಳಿದ್ದರು. 

ಇಬ್ಬರ ಹತ್ಯೆ ನಡೆದಿತ್ತು 
ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ 2015 ನವೆಂಬರ್ 2ರ ಸೋಮವಾರ ಬೆಳಗ್ಗೆ ನಡೆದ ಮಾರಾಮಾರಿಯಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಬಂಟ ಕುಖ್ಯಾತ ರೌಡಿ ಮಾಡೂರು ಯೂಸೂಬ್ (42) ಹಾಗೂ ವಿಚಾರಣಾಧೀನ ಕೈದಿ ಗಣೇಶ್ ಶೆಟ್ಟಿ (47)ಯನ್ನು ಹತ್ಯೆ ಮಾಡಲಾಗಿತ್ತು.

ಮಂಗಳೂರು ಜೈಲಿನಲ್ಲಿ ನಡೆದ ಹತ್ಯೆಗೆ ನಾನೇ ಕಾರಣ. ನಮ್ಮ ತಂಟೆಗೆ ಬಂದರೆ ಯಾರನ್ನೂ ಬಿಡುವುದಿಲ್ಲ. ಯೂಸುಫ್ ಕೊಲೆಗೆ ನಾನು ಹೊಣೆ. ನನ್ನ ಸಹಚರರು ಆತನನ್ನು ಮುಗಿಸಿದ್ದಾರೆ' ಎಂದು ಭೂಗತ ವಿಕ್ಕಿ ಶೆಟ್ಟಿ ಹೇಳಿಕೊಂಡಿದ್ದನು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ
ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು