Crime News ಗಂಡನ ಮೇಲಿನ ಸಿಟ್ಟಿಗೆ ಡಾಬಾಗೆ ಬೆಂಕಿ ಹಚ್ಚಲು ಪತ್ನಿ ಸುಪಾರಿ, ಅಮಾಯಕ ಜೀವ ಬಲಿ

By Suvarna NewsFirst Published Jan 14, 2022, 5:26 PM IST
Highlights

* ಬೆಂಗಳೂರಿನ ಹೊರವಲಯದಲ್ಲಿರುವ ಡಾಬಾಗೆ ಬೆಂಕಿ ಪ್ರಕರಣ
* ಪ್ರಕರಣವನ್ನು  ಭೇದಿಸಿದ ಪೊಲೀಸರು
* ಗಂಡನ ಮೇಲಿನ ಕೋಪಕ್ಕೆ ಅಮಾಯಕನ ಜೀವ ಬಲಿಪಡೆದ ಪತ್ನಿ

ಬೆಂಗಳೂರು, (ಜ.14): ನಗರದ ಹೊರವಲಯದಲ್ಲಿರುವ ಸೋಲದೇವನಹಳ್ಳಿಯ ಡಾಬಾಗೆ ಬೆಂಕಿ ಪ್ರಕರಣಕ್ಕೆ (Fಇರ ಛಾಸೆ) ರೋಚಕ ಟ್ವಿಸ್ಟ್ ಸಿಕ್ಕಿದ್ದು,  ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ಹೌದು... ಗಂಡ ಅರ್ಪಿತ್ ಸಹ ಒಡೆತನದ ಡಾಬಾಗೆ ಬೆಂಕಿ ಹಚ್ಚಲು ಆತನ ಪತ್ನಿ ಶೀತಲ್ ಸುಪಾರಿ ನೀಡಿರುವ ವಿಷಯ ತನಿಖೆಯಲ್ಲಿ  ಬೆಳಕಿಗೆ ಬಂದಿದೆ.  ಈ ಬಗ್ಗೆ ಸ್ವತಃ ಉತ್ತರ ವಿಭಾಗದ  ಡಿಸಿಪಿ ವಿನಾಯಕ್ ಪಾಟೀಲ್‌ (DCP Vinayak Patil) ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

Daba Set on Fire: ಬಿಲ್‌ ಕೇಳಿದ್ದಕ್ಕೆ ಡಾಬಾಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ ಕಿಡಿಗೇಡಿಗಳು!

ಸದ್ಯ ಪೊಲೀಸರು ಮನು ಕುಮಾರ್, ಮಂಜುನಾಥ್ ಮತ್ತು ಹೇಮಂತ್ ಮೂವರನ್ನು ಬಂಧಿಸಿದ್ದಾರೆ, ಇತ್ತ ಶೀತಲ್ ನಾಪತ್ತೆಯಾಗಿದ್ದು, ಆಕೆಯ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಡಿಸೆಂಬರ್ 24, 2021ರಂದು ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಅರ್ಪಿತ್ ಎಂಬವರಿಗೆ ಸೇರಿದ ಯುಟರ್ನ್ ಹೆಸರಿನ ಡಾಬಾಗೆ (Daba) ಬೆಂಕಿ ಹಚ್ಚಲಾಗಿತ್ತು. ಈ ವೇಳೆ ಡಾಬಾದಲ್ಲಿದ್ದ ಕೆಲಸಗಾರನ ಮೇಲೆಯೂ ಪೆಟ್ರೋಲ್ (Petrol) ಸುರಿದು ಬೆಂಕಿ (Fire) ಹಚ್ಚಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಕೆಲಸಗಾರ ಸಹ ಸಾವನ್ನಪ್ಪಿದ್ದನು.  ಸೋಲದೇವನಹಳ್ಳಿಯಲ್ಲಿ ದೀಪಕ್, ಸಚಿನ್ ಹಾಗೂ ಅರ್ಪಿತ್ ಮೂವರು ಪಾಲುದಾರಿಕೆಯಲ್ಲಿ ಡಾಬಾ ನಡೆಸುತ್ತಿದ್ದರು.

Crime News ಸಾಲ ಕೊಡದಿದ್ದಕ್ಕೆ ಬ್ಯಾಂಕಿಗೆ ಬೆಂಕಿ ಹಚ್ಚಿದ ಭೂಪ!

ಅರ್ಪಿತ್ ಗೆ ಶೀತಲ್ ಮ್ಯಾಟ್ರಿಮೋನಿಯಲ್ಲಿ ಪರಿಚಯವಾಗಿದ್ದಳು. ಆದ್ರೆ ಮದುವೆಯಾದ ನಾಲ್ಕೇ ತಿಂಗಳಲ್ಲಿ ಇಬ್ಬರ ಸಂಸಾರ ಹಳಸಿತ್ತು. ಪ್ರತಿನಿತ್ಯ ಇಬ್ಬರ ಮಧ್ಯೆ ಸಣ್ಣ ಸಣ್ಣ ವಿಷಯಕ್ಕೂ ಜಗಳ ನಡೆಯುತ್ತಿತ್ತು. ಹೀಗಾಗಿ ಅರ್ಪಿತ್ ಪತ್ನಿಯನ್ನು ತವರಿಗೆ ಕಳುಹಿಸಿದ್ದನು. ಪತ್ನಿ ತವರಿಗೆ ಹೋದ ಬಳಿಕ ಅರ್ಪಿತ್ ಡಾಬಾ ಕೆಲಸದಲ್ಲಿ ಬ್ಯುಸಿಯಾಗಿದ್ದನು.

ಇದರಿಂದ ಕೋಪಗೊಂಡ ಶೀತಲ್ ಡಾಬಾಗೆ ಬೆಂಕಿ ಹಚ್ಚಲು ತನಗೆ ಪರಿಚಯನಿದ್ದ ರೌಡಿಶೀಟರ್ ಮನು ಕುಮಾರ್ ಎಂಬಾತನಿಗೆ 20 ಸಾವಿರ ರೂಪಾಯಿಗೆ ಸುಪಾರಿ ನೀಡಿದ್ದಳು. ಸುಪಾರಿ ಪಡೆದ ಮನುಕುಮಾರ್ ಡಿಸೆಂಬರ್ 24ರಂದು ತನ್ನಿಬ್ಬರ ಸಹಚರರಾದ ಮಂಜುನಾಥ್ ಮತ್ತು ಹೇಮಂತ್ ಜೊತೆ ಡಾಬಾಗೆ ಬೆಂಕಿ ಹಚ್ಚಿದ್ದನು. ಈ ಸಂಬಂಧ ಸೋಲದೇವನಹಳ್ಳಿ ಠಾಣೆಯಲ್ಲಿ 436, 307 ಪ್ರಕರಣ ದಾಖಲಾಗಿತ್ತು

 ಯುಟರ್ನ್ ಅನ್ನೋ ಡಾಬಾಗೆ ಬಂದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು. ಈ ಟೈಮಲ್ಲಿ ಸಪ್ಲೈಯರ್ ಬಂದು ಕೇಳಿದಾಗ  ಆತನ ಮೇಲೂ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು. ಈ ವೇಳೆ ಸಪ್ಲೈಯರ್  ಗಾಯಗೊಂಡು ಆಸ್ಪತ್ರೆ ಸೇರಿದ್ದ. ನಂತರ ಆತ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಈ ಸಂಬಂಧ ಸೋಲದೇವನಹಳ್ಳಿಯಲ್ಲಿ 302 ಪ್ರಕರಣ ದಾಖಲು ಮಾಡಲಾಗಿತ್ತು ಎಂದು  ಡಿಸಿಪಿ ವಿನಾಯಕ್ ಪಾಟೀಲ್‌ ಹೇಳಿದ್ದಾರೆ.

ಈಗ ಒಟ್ಟು ಮೂರು ಜನ ಆರೋಪಿಗಳನ್ನ ಬಂಧಿಸಲಾಗಿದೆ. ಮೂವರು ಆರೋಪಿಗಳಲ್ಲಿ ಒಬ್ಬ ಡಕಾಯತಿ, ಸುಲುಗೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಮೂವರಲ್ಲಿ ಒಬ್ಬ ಆರೋಪಿ ಪ್ಲಾನ್ ನಂತೆ ದಾಬಾ ಬಳಿ ಬೆಂಕಿ ಹಚ್ಚಿದ್ದಾರೆ. ಮುಖ್ಯ ಆರೋಪಿ ರಾಬರಿ, ಅಪಹರಣ, ಡಕಾಯಿತಿ ಯತ್ನ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಸದ್ಯ ಮೂವರನ್ನೂ ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ವಿನಾಯಕ್ ಪಾಟೀಲ್ ಮಾಹಿತಿ ನೀಡಿದರು.

click me!