ಮಂಡ್ಯದಲ್ಲಿ ದಾರುಣ ಘಟನೆ ವರದಿಯಾಗಿದ್ದು, ಗಂಡನ ಮನೆಯಲ್ಲಿಯೇ ಫ್ಯಾನ್‌ಗೆ ನೇಣು ಬಿಗಿದುಕೊಂಡು ಪತ್ನಿ ಸಾವು ಕಂಡಿದ್ದರೆ, ಗಂಡ ಕೆರೆಗೆ ಹಾರಿ ಪ್ರಾಣ ಬಿಟ್ಟಿದ್ದಾನೆ.
ಮಂಡ್ಯ (ಆ.21): ಸಕ್ಕರೆ ನಾಡು ಮಂಡ್ಯದಲ್ಲಿ ಬೆಳ್ಳಂಬೆಳಗ್ಗೆಯೇ ದಾರುಣ ಘಟನೆ ವರದಿಯಾಗಿದೆ. ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಮಹಿಳೆ ಸಾವು ಕಂಡಿದ್ದಾಳೆ. ಇದರ ಬೆನ್ನಲ್ಲಿಯೇ ಗಂಡನಿಂದಲೇ ಕೊಲೆ ಎಂದು ಮೃತ ಮಹಿಳೆಯ ಪೋಷಕರು ಅರೋಪ ಮಾಡಿದ್ದಾರೆ. ಈ ಘಟನೆಯ ಬಳಿಕ ಆಕೆಯ ಗಂಡ ಮೋಹನ್ ಕೂಡ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಪತ್ನಿ ನೇಣು ಬಿಗಿದುಕೊಂಡು ಸಾವು ಕಂಡಿದ್ದರೆ, ಮೋಹನ್ ಕೆರೆಗೆ ಹಾರಿ ಪ್ರಾಣ ಬಿಟ್ಟಿದ್ದಾರೆ. ಪ್ರಸ್ತುತ ಇಬ್ಬರ ಮರಣೋತ್ತರ ಪರೀಕ್ಷೆಗಳು ನಡೆಯುತ್ತಿದ್ದು, ಸಾವಿಗೆ ಕಾರಣಗಳು ಸಿಗಬಹುದು ಎನ್ನಲಾಗಿದೆ.ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಮಂದಗೆರೆ ಗ್ರಾಮದಲ್ಲಿ ಘಟನೆ ನಡೆದಿದೆ. ಆರಂಭದಲ್ಲಿ ಮಹಿಳೆಯ ಆತ್ಮಹತ್ಯೆ ವಿಚಾರ ಮಾತ್ರವೇ ತಿಳಿದ ಕಾರಣ, ಆತನ ಗಂಡ ಹಾಗೂ ಪೋಷಕರು ಪರಾರಿಯಾಗಿದ್ದಾರೆ ಎನ್ನಲಾಗಿತ್ತು. ಆಕ್ರೋಶಗೊಂಡ ಮೃತ ಮಹಿಳೆ ಸಂಬಂಧಿಕರು ಮನೆಯ ಪೀಠೋಪಕರಣ ಧ್ವಂಸ ಮಾಡಿ ಬಳಿಕ ಮನೆಗೆ ಬೆಂಕಿ ಹಾಕಿ ದಾಂದಲೆ ಎಬ್ಬಿಸಿದ್ದರು.
21 ವರ್ಷದ ಸ್ವಾತಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಮಹಿಳೆ. ಮಹಿಳೆ ಸಾವಿನ ಬಳಿಕ ಗಂಡ ಮೋಹನ್ ಹಾಗೂ ಆತನ ಪೋಷಕರು ಪರಾರಿಯಾಗಿದ್ದಾರೆ ಎಂದು ಮೊದಲಿಗೆ ಸ್ಥಳೀಯರು ಹೇಳಿದ್ದರು. ಕೊಲೆಗೈದು ಪರಾರಿಯಾಗಿದ್ದಾರೆ ಎಂದು ಮೃತ ಸ್ವಾತಿ ಪೋಷಕರು ಆರೋಪ ಮಾಡಿದ್ದರು. ಸ್ಥಳಕ್ಕೆ ಆಗಮಿಸಿದ ಕಿಕ್ಕೇರಿ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ನಾಪತ್ತೆಯಾಗಿರುವ ಗಂಡ ಹಾಗೂ ಅವನ ಮನೆಯವರಿಗಾಗಿ ಶೋಧ ಕಾರ್ಯ ನಡೆಸಿದ್ದರು.
ನನ್ನ ತಂದೆಯನ್ನ ಜೈಲಿನೊಳಗೆ ಹಾಕಿ- ಪೊಲೀಸ್ ಠಾಣೆಗೆ ಬಂದು ದೂರು ಸಲ್ಲಿಸಿದ 5ರ ಪೋರ
ಈ ವೇಳೆ ಸ್ವಾತಿಯ ಗಂಡ ಮೋಹನ್ ಕೂಡ ಆತ್ಮಹತ್ಯೆಗೆ ಶರಣಾಗಿರಬಹುದು ಎನ್ನುವ ಸೂಚನೆ ಸಿಕ್ಕಿದೆ. ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಗದ್ದೆ ಹೊಸೂರು ಸಮೀಪದ ಕೆರೆಯಲ್ಲಿಯೆ ಶವ ಪತ್ತೆಯಾಗಿದ್ದು. ಆ ಶವ ಮೃತಳ ಗಂಡನದ್ದೆ ಎಂಬ ಅನುಮಾನ ವ್ಯಕ್ತವಾಗಿದೆ. ಗ್ರಾಮದಲ್ಲಿ ಬಿಗುವಿನ ವಾತಾವರಣ, ಪೊಲೀಸ್ ಬಂದೋಬಸ್ತ್ ನೀಡಲಾಗಿದೆ. ಮರಣೋತ್ತರ ಪರೀಕ್ಷೆಗಾಗಿ ಆದಿಚುಂಚನಗಿರಿ ಆಸ್ಪತ್ರೆಗೆ ಮೃತದೇಹ ರವಾನೆ ಮಾಡಲಾಗಿದೆ.
ಬರೋಬ್ಬರಿ 100 ಕೋಟಿ ಮೌಲ್ಯದ ಆಸ್ತಿ ಬಿಟ್ಟು ನಿತ್ಯಾನಂದನ ಕೈಲಾಸ ಸೇರಿದ ಸುಂದರಿ ಯಾರೀಕೆ?