ಮೊಬೈಲ್ ಬಳಕೆಗೆ ಹೆತ್ತವರು ಆಕ್ಷೇಪಿಸಿದರು ಎಂಬ ಕಾರಣಕ್ಕೆ ಪಿಯು ವಿದ್ಯಾರ್ಥಿಯೊಬ್ಬ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಿರಿಯಡ್ಕ ಎಂಬಲ್ಲಿ ನಡೆದಿದೆ.
ಉಡುಪಿ(ಆ.21): ಮೊಬೈಲ್ ಬಳಕೆಗೆ ಹೆತ್ತವರು ಆಕ್ಷೇಪಿಸಿದರು ಎಂಬ ಕಾರಣಕ್ಕೆ ಪಿಯು ವಿದ್ಯಾರ್ಥಿಯೊಬ್ಬ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಿರಿಯಡ್ಕ ಎಂಬಲ್ಲಿ ನಡೆದಿದೆ. ಹಿರಿಯಡ್ಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ಪ್ರಥಮೇಶ್ (16) ಆತ್ಮಹತ್ಯೆ ಮಾಡಿಕೊಂಡಾತ.
ಈತ ಮೊಬೈಲ್‌ಗೀಳಿಗೆ ಬಿದ್ದಿದ್ದು ಸದಾ ಅದರಲ್ಲಿಯೇ ತಲ್ಲೀನನಾಗಿರುತ್ತಿದ್ದ. ಅದಕ್ಕೆ ಹೆತ್ತವರು ಮೊಬೈಲ್ ಬಿಟ್ಟು ಓದಿನ ಕಡೆ ಗಮನ ಕೊಡು ಎಂದು ಬುದ್ಧಿವಾದ ಹೇಳಿದ್ದರು. ಇದರಿಂದ ಸಿಟ್ಟುಗೊಂಡಿದ್ದ ಪ್ರಥಮೇಶ್ ಸೋಮವಾರ ಕಾಲೇಜಿಗೆಂದು ಮನೆಯಿಂದ ಹೋದಾತ ನಾಪತ್ತೆಯಾಗಿದ್ದ.
ಬೆಂಗಳೂರು: ಜೀವನದಲ್ಲಿ ಜಿಗುಪ್ಸೆ, ಹೀಲಿಯಂ ಸೇವಿಸಿ ಸಾಫ್ಟ್‌ವೇರ್ ಉದ್ಯೋಗಿ ಆತ್ಮಹತ್ಯೆ
ಆತನಿಗಾಗಿ ಮನೆಯವರು ಸಾಕಷ್ಟು ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಮಂಗಳವಾರ ಆತನ ಮೃತದೇಹ ಕಾಲೇಜು ಹಿಂಬದಿ ನಿರ್ಜನ ಪ್ರದೇಶದ ಬಾವಿಯಲ್ಲಿ ಪತ್ತೆಯಾಗಿದೆ.