
ಬೆಂಗಳೂರು(ಜು.08): ಎರಡು ದಶಕಗಳ ಹಿಂದೆ ಏಡ್‌್ಸ ರೋಗ ಕುರಿತು ಜಾಗೃತಿ ಮೂಡಿಸಲು ಸೈಕಲ್‌ನಲ್ಲಿ ‘ವಿಶ್ವ ಪರ್ಯಟನೆ’ ಮಾಡಿ ಅದ್ವಿತೀಯ ಸಾಧನೆ ಮಾಡಿದ್ದ ವ್ಯಕ್ತಿಯೊಬ್ಬ ಈಗ ಹೊಟ್ಟೆಹಸಿವು ನೀಗಿಸಿಕೊಳ್ಳಲು ದೇವಾಲಯದಲ್ಲಿ ಬೆಳ್ಳಿ ವಸ್ತು ಕದ್ದು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದಾರೆ.
ಕೆ.ಜಿ.ನಗರದ ರವಿನಾಯ್ಡು ಬಂಧಿತನಾಗಿದ್ದು, ಆರೋಪಿಯಿಂದ 1 ಕೇಜಿ ಬೆಳ್ಳಿ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಸಜ್ಜನ್‌ರಾವ್ ಸರ್ಕಲ್ ಸಮೀಪದ ಕನ್ನಿಕಾ ಪರಮೇಶ್ವರಿ ದೇವಾಲಯದ ನವಗ್ರಹ ಮೂರ್ತಿ ಹಾಕಲಾಗಿದ್ದ ಬೆಳ್ಳಿ ಕವಚ ಕಳ್ಳತನವಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಇನ್‌ಸ್ಪೆಕ್ಟರ್ ಮಿರ್ಜಾ ಅಲಿ ಹಾಗೂ ಸಬ್ ಇನ್‌ಸ್ಪೆಕ್ಟರ್ ರಾಜೇಂದ್ರ ಪ್ರಸಾದ್ ನೇತೃತ್ವದ ತಂಡವು, ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಆಧರಿಸಿ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಚಿಕ್ಕಮಗಳೂರಲ್ಲಿ ಹೆಚ್ಚುತ್ತಿರುವ ಬೈಕ್ ಹೆಲ್ಮೆಟ್ ಕಳ್ಳತನ: ಬೈಕ್ ಸವಾರರ ಪೀಕಲಾಟ..!
ಸೈಕಲ್‌ನಲ್ಲಿ ವಿಶ್ವ ಸುತ್ತಿ ಬೀದಿಗೆ ಬಿದ್ದರು:
ಬಾಲ್ಯದಲ್ಲಿ ಹೆತ್ತವರನ್ನು ಕಳೆದುಕೊಂಡು ಸಂಬಂಧಿಕರ ಆಶ್ರಯದಲ್ಲಿ ಬೆಳೆದ ರವಿನಾಯ್ಡು, ಬಳಿಕ ಸಣ್ಣಪುಟ್ಟಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಸಾಮಾಜಿಕ ಕಾಳಜಿ ಹೊಂದಿದ್ದ ಅವರು, 2000 ರಿಂದ 2014ವರೆಗೆ ಏಡ್‌್ಸ ರೋಗದ ಕುರಿತು ಜಾಗೃತಿ ಮೂಡಿಸಲು ಸೈಕಲ್‌ನಲ್ಲಿ ಜಾಥ ಶುರು ಮಾಡಿದ್ದರು. ಅಂತೆಯೇ ನೇಪಾಳ, ಮಾಲ್ಡೀವ್‌್ಸ, ಶ್ರೀಲಂಕಾ, ಬರ್ಮಾ, ಬಾಂಗ್ಲಾದೇಶ ಸೇರಿದಂತೆ ಹಲವು ದೇಶಗಳು ಮಾತ್ರದಲ್ಲದೆ ಭಾರತದ 28 ರಾಜ್ಯಗಳಲ್ಲಿ ಸೈಕಲ್‌ನಲ್ಲಿ ಅವರು ಯಾತ್ರೆ ನಡೆಸಿದ್ದರು. ನಾಯ್ಡು ಅವರ ಸಾಧನೆ ಮೆಚ್ಚಿ ಮಹಾರಾಷ್ಟ್ರದ ಶಿವಸೇನೆ ಮುಖಂಡ ದಿ.ಬಾಳಾ ಠಾಕ್ರೆ ಅವರು ಬೈಕ್ ಉಡುಗೊರೆ ಕೊಟ್ಟಿದ್ದರು. ಅದೇ ರೀತಿ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಮಹಾರಾಷ್ಟ್ರ ರಾಜ್ಯಪಾಲರಾಗಿದ್ದಾಗ ನಾಯ್ಡು ಅವರನ್ನು ಅಭಿನಂದಿಸಿದ್ದರು. ಹೀಗಿರುವಾಗ ತನಗೆ ಆಶ್ರಯ ನೀಡಿದ್ದ ಸಂಬಂಧಿಕರು ಮೃತಪಟ್ಟಬಳಿಕ ನಾಯ್ಡು ಬೀದಿ ಪಾಲಾದರು. ನೆಲೆ ಇಲ್ಲದೆ ಅಲೆಯುತ್ತಿದ್ದ ಅವರು, ಚಿಂದಿ ಆಯುತ್ತ ಜೀವನ ಸಾಗಿಸುತ್ತಿದ್ದರು. ಇತ್ತೀಚೆಗೆ ದೇವಾಲಯಗಳಲ್ಲಿ ಪ್ರಸಾದವೇ ಅವರಿಗೆ ಆಧಾರವಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.
ಹುಮನಾಬಾದ: ಎತ್ತು, ಆಕಳು ಕದ್ದಿದ್ದ ಮೂವರು ಖದೀಮರ ಬಂಧನ
ಜೂ.28ರಂದು ಹೊಟ್ಟೆಹಸಿವು ಸಹಿಸಲಾರದೆ ನಾಯ್ಡು, ಪ್ರತಿ ದಿನ ಪ್ರಸಾದ ಸ್ವೀಕರಿಸಲು ಹೋಗುತ್ತಿದ್ದ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ಕಳ್ಳತನಕ್ಕೆ ಯೋಜಿಸಿದ್ದರು. ಅಂತೆಯೇ ಭಕ್ತನಂತೆ ತೆರಳಿ ಆ ದೇವಾಲಯದ ನವಗ್ರಹ ಮೂರ್ತಿ ಹಾಕಲಾಗಿದ್ದ 1.5 ಕೆ.ಜಿ. ತೂಕದ ಬೆಳ್ಳಿ ಕವಚವನ್ನು ಕಳವು ಮಾಡಿದ್ದರು.
ಈ ಬಗ್ಗೆ ವಿ.ವಿ.ಪುರ ಠಾಣೆಗೆ ದೇವಾಲಯದ ಆಡಳಿತ ಮಂಡಳಿ ದೂರು ನೀಡಿತು. ಅದರನ್ವಯ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಆಧರಿಸಿ ಆರೋಪಿ ಬೆನ್ನಹತ್ತಿದ್ದಾಗ ಬಸವನಗುಡಿಯ ರಾಮಕೃಷ್ಣ ಆಶ್ರಮದ ಸಮೀಪ ರಸ್ತೆ ಬದಿ ಮಲಗಿದ್ದ ರವಿನಾಯ್ಡು ಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ