
ಮಡಿಕೇರಿ(ಜು.07): ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ, ವಕೀಲ ಕೃಷ್ಣಮೂರ್ತಿ ಅವರಿಗೆ ಬೆದರಿಕೆ ಬಂದಿದ್ದು, ಬೆದರಿಕೆ ಪತ್ರದ ಕೊನೆಯಲ್ಲಿ ನಕ್ಸಲ್ ಪರ ಜಿಂದಾಬಾದ್ ಪದ ಉಲ್ಲೇಖವಾಗಿದ್ದು, ಈ ಬಗ್ಗೆ ಕೃಷ್ಣಮೂರ್ತಿ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಪೋಸ್ಟ್‌ನಲ್ಲಿ ಬೆದರಿಕೆ ಪತ್ರ ಬಂದಿದ್ದು, ಈ ಪತ್ರ ಓದಲು ನೀನು ಬದುಕಿರುವುದಕ್ಕೆ ಅಭಿನಂದನೆ, ಗೌರಿ ಕೊಂದವರಿಗೆ ನಮ್ಮ ಸರ್ಕಾರ ಇದ್ದಾಗ ಶಿಕ್ಷೆ ನೀಡಿದ್ದೇವೆ. ಆರೋಪಿತರ ಬಿಡುಗಡೆ ಪ್ರಯತ್ನ ತಕ್ಷಣ ನಿಲ್ಲಿಸು, ಇದಕ್ಕಾಗಿ ಕೊಟ್ಟಎಚ್ಚರಿಕೆ ವಿಫಲ ಆಗಿದ್ದಕ್ಕೆ ಖುಷಿ ಬೇಡ, ಇದು ನಾವು ಕೊಟ್ಟ ಎಚ್ಚರಿಕೆ ಅಷ್ಟೇ. ತಕ್ಷಣ ನೀನು ಹಿಂದೆ ಸರಿಯದಿದ್ದರೆ ಮಣ್ಣನ್ನು ಕೆಂಪಗಾಗಿಸುತ್ತೇವೆ ಎಂದು ಉಲ್ಲೇಖಿಸಲಾಗಿದೆ.
ಗೌರಿ ಲಂಕೇಶ್ ಕೊಂದವರು ಸನಾತನ ಧರ್ಮದವರು: ಸಿದ್ದರಾಮಯ್ಯ ಗುಡುಗು
ಗುರುವಾರ ಪೋಸ್ಟ್‌ನಲ್ಲಿ ಕೃಷ್ಣಮೂರ್ತಿ ಅವರಿಗೆ ಪತ್ರ ತಲುಪಿದೆ. ಈ ಹಿಂದೆ ಏ. 12 ರಂದು ಕೃಷ್ಣಮೂರ್ತಿ ಮೇಲೆ ಗುಂಡಿನ ದಾಳಿ ನಡೆದು, ಗುಂಡಿನ ದಾಳಿಯಲ್ಲಿ ಕೃಷ್ಣಮೂರ್ತಿ ಪಾರಾಗಿದ್ದರು. ವಕೀಲರೂ ಆಗಿರುವ ಕೃಷ್ಣಮೂರ್ತಿ ಪರ್ತಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಆರೋಪಿಗಳಾಗಿರುವವರ ಪರವಾಗಿ ಕಾನೂನು ಹೋರಾಟ ನಡೆಸುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ