ಉಳ್ಳಾಲ: ಫ್ಯಾನಿಗೆ ನೇಣು ಬಿಗಿದು ಯುವತಿ ಆತ್ಮಹತ್ಯೆ, ಕಾರಣ ನಿಗೂಢ?

Published : Jul 07, 2023, 10:30 PM IST
ಉಳ್ಳಾಲ: ಫ್ಯಾನಿಗೆ ನೇಣು ಬಿಗಿದು ಯುವತಿ ಆತ್ಮಹತ್ಯೆ, ಕಾರಣ ನಿಗೂಢ?

ಸಾರಾಂಶ

ಮಂಗಳೂರಿನ ಕಾಲ್‌ ಸೆಂಟರ್‌ ಒಂದರಲ್ಲಿ ಪ್ರೀತಿಕಾ ಉದ್ಯೋಗದಲ್ಲಿದ್ದ ಪ್ರೀತಿಕಾ ಪೂಜಾರಿ, ಮಧ್ಯಾಹ್ನ ಕೆಲಸದಿಂದ ಮರಳಿದ್ದ ಪ್ರೀತಿಕಾ ನೇಣಿಗೆ ಕೊರಳೊಡ್ಡಿದ್ದಾರೆ.

ಉಳ್ಳಾಲ(ಜು.07):  ಬಾಡಿಗೆ ಮನೆಯಲ್ಲಿ ತಾಯಿ ಮತ್ತು ಅಣ್ಣನೊಂದಿಗೆ ವಾಸವಿದ್ದ ಯುವತಿಯೋರ್ವಳು ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪಜೀರು ಗ್ರಾಮದ ಅಡಪ್ಪ ರೆಸಿಡೆನ್ಸಿಯಲ್ಲಿ ನಡೆದಿದೆ.

ಪ್ರೀತಿಕಾ ಪೂಜಾರಿ(21)ಆತ್ಮಹತ್ಯೆಗೈದ ಯುವತಿ. ಪ್ರೀತಿಕ ತನ್ನ ತಾಯಿ ಮತ್ತು ಅಣ್ಣನೊಂದಿಗೆ ಪಜೀರು ಗ್ರಾಮದ ಅಡಪ್ಪ ರೆಸಿಡೆನ್ಸಿಯ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಮಂಗಳೂರಿನ ಕಾಲ್‌ ಸೆಂಟರ್‌ ಒಂದರಲ್ಲಿ ಪ್ರೀತಿಕಾ ಉದ್ಯೋಗದಲ್ಲಿದ್ದರು. ನಿನ್ನೆ(ಗುರುವಾರ) ಮಧ್ಯಾಹ್ನ 12.30 ರ ವೇಳೆಗೆ ಪ್ರೀತಿಕಾ ಮನೆಯೊಳಗೆ ಆತ್ಮಹತ್ಯೆಗೆ ಶರಣಾಗಿರುವ ವಿಚಾರ ಬೆಳಕಿಗೆ ಬಂದಿದೆ.

ಮದುವೆ‌‌ ವಿಚಾರದಲ್ಲಿ ಬೇಸರ: ಬೆಂಗಳೂರಿನ ಬೆಸ್ಕಾಂ ಇಂಜಿನಿಯರ್ ಪಾವಗಡದಲ್ಲಿ ಆತ್ಮಹತ್ಯೆ

ಮಧ್ಯಾಹ್ನ ಕೆಲಸದಿಂದ ಮರಳಿದ್ದ ಪ್ರೀತಿಕಾ ನೇಣಿಗೆ ಕೊರಳೊಡ್ಡಿದ್ದಾರೆ. ಕೊಣಾಜೆ ಪೊಲೀಸರು ಮೃತ ದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು ಪ್ರಕರಣ ದಾಖಲಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು
ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ