ಆರಂಭದಲ್ಲಿ ಪೊಲೀಸರು ಈ ಪ್ರಕರಣವನ್ನು ಆತ್ಮಹತ್ಯೆಯ ಪ್ರಕರಣವೆಂದು ದಾಖಲಿಸಿಕೊಂಡಿದ್ದರು. ಅಲ್ಲದೆ, ಬಾಲಕಿಯ ಮಲತಾಯಿ, ಚಿಕ್ಕಪ್ಪ, ಚಿಕ್ಕಮ್ಮ ಹಾಗೂ ಅಜ್ಜಿ - ತಾತ ಈ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆಂದೂ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
40 ವರ್ಷದ ವ್ಯಕ್ತಿಯೊಬ್ಬರು ತನ್ನ ಹದಿಹರೆಯದ ಮಗಳನ್ನೇ ಕೊಲೆ ಮಾಡಿದ್ದಾರೆ. ಅಲ್ಲದೆ, ಮಗಳ ಕೈಯಲ್ಲಿ ಡೆತ್ ನೋಟ್ ಬರೆಸಿ ಆ ಸಾವಿಗೆ ಸಂಬಂಧಿಕರು ಕಾರಣವೆಂದು ಬಿಂಬಿಸಲು ಅವರ ಹೆಸರನ್ನು ಬರೆಸಿ ಈ ಕೊಲೆಯನ್ನು ಆತ್ಮಹತ್ಯೆ ಎಂದು ಬಿಂಬಿಸುವಂತೆಯೂ ಮಾಡಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ. ತಂದೆಯೇ ಮಗಳನ್ನು ಕೊಲೆ ಮಾಡಿದ್ದರೂ, ಅದನ್ನು ಆತ್ಮಹತ್ಯೆ ಎಂಬಂತೆ ಪ್ಲ್ಯಾನ್ ಮಾಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ನವೆಂಬರ್ 6 ರಂದು ನಾಗ್ಪುರದ ಕಾಲಮ್ನಾ ಪ್ರದೇಶದಲ್ಲಿ 16 ವರ್ಷದ ಹುಡುಗಿ ತನ್ನ ಮನೆಯ ಸೀಲಿಂಗ್ ಫ್ಯಾನ್‌ಗೆ ನೇಣು ಹಾಕಿಕೊಂಡಂತೆ ಆಕೆಯ ಮೃತದೇಹ ಪತ್ತೆಯಾಗಿತ್ತು ಎಂದು ಪೊಲೀಸ್ ಅಧಿಕಾರಿಗಳು ಶನಿವಾರ ಹೇಳಿದ್ದಾರೆ. ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿರುವ ತಂದೆಯನ್ನು ಬಳಿಕ ಬಂಧಿಸಲಾಗಿದ್ದು, ತನಿಖೆ ವೇಳೆ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಹಾಗೂ, ಕೊಲೆಗೆ ಕಾರಣವೇನೆಂಬುದನ್ನು ಸಹ ಹೇಳಿದ್ದಾರೆ.
ಇದನ್ನು ಓದಿ: Bengaluru: ಪತಿಗೆ ಮದ್ಯ ಕುಡಿಸಿ, ಕಬಾಬ್ ತಿನ್ನಿಸಿ ಕತ್ತು ಹಿಸುಕಿ ಹತ್ಯೆ!
ಆರಂಭದಲ್ಲಿ ಪೊಲೀಸರು ಈ ಪ್ರಕರಣವನ್ನು ಆತ್ಮಹತ್ಯೆಯ ಪ್ರಕರಣವೆಂದು ದಾಖಲಿಸಿಕೊಂಡಿದ್ದರು. ಅಲ್ಲದೆ, ಬಾಲಕಿಯ ಮಲತಾಯಿ, ಚಿಕ್ಕಪ್ಪ, ಚಿಕ್ಕಮ್ಮ ಹಾಗೂ ಅಜ್ಜಿ - ತಾತ ಈ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆಂದೂ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಆದರೆ, ಮೃತ ಬಾಲಕಿಯ ತಂದೆಯ ಮೊಬೈಲ್ ಫೋನ್ ಅನ್ನು ಪರಿಶೀಲಿಸಿದ ವೇಳೆ ತಂದೆಯ ವಿರುದ್ಧ ಅನುಮಾಣ ಬಂದಿದೆ. ನಂತರ, ತನಿಖೆ ವೇಳೆ ಆತ್ಮಹತ್ಯೆಯಾಗಿ ಕಾಣುವಂತೆ ಮಾಡಿ ಕೊಲೆ ಮಾಡಿರುವುದು ಬಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮೊಬೈಲ್ ಫೋನ್‌ನಲ್ಲಿ ನಾವು ಬಾಲಕಿ ಆತ್ಮಹತ್ಯೆಯ ನಾಟಕ ಮಾಡುವ ಫೋಟೋವನ್ನು ನೋಡಿದೆವು. ಆಕೆಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿ ತಂದೆ ಅದರ ಫೋಟೋ ತೆಗೆದಿದ್ದಾರೆ. ಆತನ ಸಂಬಂಧಿಕರಿಗೆ ಪಾಠ ಕಲಿಸಲು ಈ ರೀತಿ ಮಾಡಿದ್ದಾರೆ ಎಂಬುದು ನಮ್ಮ ಗಮನಕ್ಕೆ ಬಂತು ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಇದನ್ನೂ ಓದಿ: ಡಾ.ಕೃಷ್ಣಮೂರ್ತಿ ನಿಗೂಢ ಸಾವು: ಕರ್ನಾಟಕದಲ್ಲೂ ತನಿಖೆ
ಅವರ ಫೋನ್‌ನಲ್ಲಿ ಆತ್ಮಹತ್ಯೆಯ ನಾಟಕದ ಫೋಟೋವನ್ನು ನಾವು ನೋಡಿದ ಬಳಿಕ, ಬಾಲಕಿಯ ತಂದೆಯನ್ನು ಪ್ರಶ್ನೆ ಮಾಡಿದೆವು. ನಂತರ, ತನಿಖೆ ವೇಳೆ ತನ್ನ ಮಗಳನ್ನು ಕೊಲೆ ಮಾಡಿರುವುದನ್ನು ಅವರು ಒಪ್ಪಿಕೊಂಡರು. ಅಲ್ಲದೆ, 2016 ರಲ್ಲಿ ಅವರ ಮೊದಲನೇ ಹೆಂಡತಿ ಆತ್ಮಹತ್ಯೆ ಮಾಡಿಕೊಂಡಿದ್ದಳು ಹಾಗೂ ಎರಡನೇ ಹೆಂಡತಿ ಸಹ ಮನೆ ಬಿಟ್ಟು ಹೋಗಿದ್ದಳು ಎಂದೂ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ನಂತರ, ಕೊಲೆ ಮಾಡಿರುವ ಆರೋಪದ ಮೇಲೆ ತಂದೆಯನ್ನು ಬಂಧಿಸಲಾಗಿದೆ. ಹಾಗೂ, ಈ ಕೊಲೆಗೆ ನಿಜವಾದ ಕಾರಣವೇನೆಂದು ತಿಳಿದುಕೊಳ್ಳಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದೂ ಆ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಬಾಲಕಿ ಸಾಯುವ ಮುನ್ನ ಆಕೆ ತನ್ನ ಸಂಬಂಧಿಕರ ಹೆಸರು ಬರೆದಿಟ್ಟು 5 ಬಾರಿ ಡೆತ್ ನೋಟ್ ಬರೆದಿದ್ದಳು. ನಂತರ, ಆಕೆ ಸ್ಟೂಲ್ ಮೇಲೆ ನಿಂತುಕೊಂಡು ತನ್ನ ಕತ್ತಿಗೆ ಹಗ್ಗ ಕಟ್ಟಿಕೊಂಡಿ ತನ್ನ ತಮದೆ ಹೇಳಿದಂತೆ ನಿಂತಿದ್ದಳು. ಆ ವೇಳೆ, ತಂದೆ ಫೋಟೋ ತೆಗೆದರು, ನಂತರ ಸ್ಟೂಲ್ ಅನ್ನು ತಳ್ಳಿ ಆಕೆ ಆತ್ಮಹತ್ಯೆ ಮಾಡಿಕೊಂಡಿರುವ ರೀತಿ ಕೊಲೆ ಮಾಡಿದ್ದಾನೆ. ಬಾಲಕಿಯ ತಂದೆ ಹಾಗೂ 12 ವರ್ಷದ ತಂಗಿಯೇ ಎದುರೇ ಬಾಲಕಿ ಬಲಿಯಾಗಿದ್ದಾಳೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ: ಲಿಂಗರಾಜು ಹತ್ಯೆ: ಮಾಜಿ ಕಾರ್ಪೋರೇಟರ್ ಖುಲಾಸೆ
ನಂತರ, ಆರೋಪಿ ಮನೆ ಬಿಟ್ಟು ಪರಾರಿಯಾಗಿದ್ದಾರೆ. ಬಳಿಕ, ಪೊಲೀಸರಿಗೆ ಕರೆ ಮಾಡಿ ನಾನು ಸ್ವಲ್ಪ ಕೆಲಸಕ್ಕೆಂದು ಹೊರಕ್ಕೆ ಹೋಗಿದ್ದೆ. ನಂತರ, ಮನೆಗೆ ವಾಪಸ್ ಬಂದು ನೋಡಿದಾಗ ಮಗಳು ನೇಣು ಬಿಗಿದುಕೊಂಡಿದ್ದಾಳೆ ಎಂದು ಆತ ಪೊಲೀಸರಿಗೆ ದೂರು ನೀಡಿದರು ಎಂದೂ ಪೊಲೀಸ್ ಅಧಿಕಾರಿ ಮಾಧ್ಯಮಗಳಿಗೆ ವಿವರಿಸಿದ್ದಾರೆ.
ನಂತರ, ಪೊಲೀಸರು ಆರಂಭದಲ್ಲಿ ಆತ್ಮಹತ್ಯೆಯ ಪ್ರಕರಣ ದಾಖಲಿಸಿಕೊಂಡು ನಕಲಿ ಡೆತ್‌ನೋಟ್‌ನಲ್ಲಿರುವ ಹಾಗೆ ಐವರು ಸಂಬಂಧಿಕರ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ದೂರು ದಾಖಲಿಸಿದ್ದರು. ಆದರೆ, ತನಿಖೆ ವೇಳೆ ಪೊಲೀಸರಿಗೆ ಅನುಮಾನ ಬಂದು, ನಂತರ ತಂದೆಯನ್ನು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: ಹಾಸನ: ಪತ್ನಿ ಕೊಂದು ಮನೆಗೆ ಬೀಗ ಹಾಕಿ ಪತಿ ಎಸ್ಕೇಪ್