ದಂಡ ವಿಧಿಸಿದ ಕಾರಣಕ್ಕೆ ನ್ಯಾಯಾಧೀಶರ ಮೇಲೆ ಚಪ್ಪಲಿ ತೂರಿದ ಆರೋಪಿಯೊಬ್ಬನನ್ನು ಸ್ಥಳದಲ್ಲಿದ್ದ ಪೊಲೀಸರು ಕೂಡಲೇ ವಶಕ್ಕೆ ಪಡೆದ ಘಟನೆ ಚಿಕ್ಕಮಗಳೂರು ನಗರದ ಜಿಲ್ಲಾ ನ್ಯಾಯಾಲಯದಲ್ಲಿ ನಡೆದಿದೆ.
ಚಿಕ್ಕಮಗಳೂರು (ಅ.14): ದಂಡ ವಿಧಿಸಿದ ಕಾರಣಕ್ಕೆ ನ್ಯಾಯಾಧೀಶರ ಮೇಲೆ ಚಪ್ಪಲಿ ತೂರಿದ ಆರೋಪಿಯೊಬ್ಬನನ್ನು ಸ್ಥಳದಲ್ಲಿದ್ದ ಪೊಲೀಸರು ಕೂಡಲೇ ವಶಕ್ಕೆ ಪಡೆದ ಘಟನೆ ಚಿಕ್ಕಮಗಳೂರು ನಗರದ ಜಿಲ್ಲಾ ನ್ಯಾಯಾಲಯದಲ್ಲಿ ನಡೆದಿದೆ. ನಗರದ ಅರವಿಂದ ನಗರ ಬಡಾವಣೆ ನಿವಾಸಿ ಲೋಕೇಶ್ ಬಂಧಿತ ಆರೋಪಿಯಾಗಿದ್ದಾನೆ. ಮದ್ಯ ಸೇವಿಸಿದ್ದ ಆರೋಪಿ ಏಕಾಏಕಿ ಒಂದನೇ ಹೆಚ್ಚುವರಿ ಕಿರಿಯ ಶ್ರೇಣಿಯ ಕೋರ್ಟ್‌ಗೆ ನುಗ್ಗಿ ನ್ಯಾಯಾಧೀಶರತ್ತ ಚಪ್ಪಲಿ ತೂರಿದ್ದಾನೆ.
ಡ್ರಿಂಕ್ ಅಂಡ್ ಡ್ರೈವ್ ಕೇಸ್‌ನಲ್ಲಿ ದಂಡ ಕಟ್ಟಿದ್ದ ಆರೋಪಿ: ಕಳೆದ ಒಂದು ತಿಂಗಳ ಹಿಂದೆ ಡ್ರಿಂಕ್ ಅಂಡ್ ಡ್ರೈವ್ ಮಾಡುವಾಗ ಆರೋಪಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದ. ಪೊಲೀಸರು ಆತನಿಗೆ ಕೋರ್ಟ್‌ನಲ್ಲಿ ದಂಡ ಕಟ್ಟುವಂತೆ ಸೂಚಿಸಿದ್ದರು. ಆತ ಕೋರ್ಟ್‌ನಲ್ಲಿ ದಂಡವನ್ನೂ ಕಟ್ಟಿದ್ದ. ಆದರೆ ಇದಾದ ಒಂದು ತಿಂಗಳ ಬಳಿಕ ಇಂದು ಕೋರ್ಟಿಗೆ ಕುಡಿದು ಬಂದಿದ್ದ ಆತ ಜಡ್ಜ್ ಮೇಲೆ ಚಪ್ಪಲಿ ತೂರಿದ್ದಾನೆ. ಈ ವೇಳೆ ನಾನೇನು ತಪ್ಪು ಮಾಡಿದ್ದೇನೆ, ದಂಡ ಹಾಕಿದ್ದು ಏಕೆ ಎಂದು ಕೂಗಾಡಿದ್ದಾನೆ. ಕೂಡಲೇ ಅಲ್ಲೇ ಇದ್ದ ನಗರ ಠಾಣೆ ಪೊಲೀಸರು ಆತನನ್ನ ಬಂಧಿಸಿದ್ದಾರೆ. ಆರೋಪಿ ಲೋಕೇಶನ ಈ ವರ್ತನೆ ನೋಡಿದ ಕೂಡಲೇ ಕೋರ್ಟಿನಲ್ಲಿದ್ದ ವಕೀಲರು ಕೂಡ ಆತನ ವಿರುದ್ದ ಆಕ್ರೋಶ ಹೊರಹಾಕಿದ್ದರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಹಳಿಯೂರು ಸುಧಾಕರ್ ಕೂಡ ಖಂಡನೆ ವ್ಯಕ್ತಪಡಿಸಿದ್ದಾರೆ.
undefined
ಭ್ರಷ್ಟಮುಕ್ತ ಸಮಾಜ ನಿರ್ಮಾಣ ಆಗಬೇಕು: ನಿವೃತ್ತ ನ್ಯಾ.ಸಂತೋಷ್ ಹೆಗ್ಡೆ ಸಲಹೆ
ಸರಗಳ್ಳತನ ಮಾಡುತ್ತಿದ್ದ ಆರೋಪಿ ಬಂಧನ: ಮನೆಕಳ್ಳತನ ಹಾಗೂ ಸರಗಳ್ಳತನ ಮಾಡುತ್ತಿದ ಆರೋಪಿಯನ್ನು ಮೈಸೂರಿನ ಅಶೋಕಪುರಂ ಠಾಣೆಯ ಪೊಲೀಸರು ಬಂಧಿಸಿ, . 18.16 ಲಕ್ಷ ಮೌಲ್ಯದ 305 ಗ್ರಾಂ ಚಿನ್ನದ ಆಭರಣಗಳು, 1200 ಗ್ರಾಂ ತೂಕದ ಬೆಳ್ಳಿಯ ಪದಾರ್ಥಗಳು ಹಾಗೂ ಕೃತ್ಯಕ್ಕೆ ಬಳಸಿದ ಒಂದು ಬೈಕ್ ಮತ್ತು ಒಂದು ಕಾರನ್ನು ವಶಪಡಿಸಿಕೊಂಡಿದ್ದಾರೆ. ಅಶೋಕಪುರಂ ಠಾಣೆಯಲ್ಲಿ ದಾಖಲಾಗಿದ್ದ ಕನ್ನಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಆರಂಭಿಸಿದ ಪೊಲೀಸರು, ಒಬ್ಬ ಆರೋಪಿಯನ್ನು ಬಂಧಿಸಿ ವಿಚಾರಣೆ ಮಾಡಿದಾಗ ಆರೋಪಿಯು ತಾನು ಇತರೆ ತಲೆ ಮರೆಸಿಕೊಂಡಿರುವ ಇಬ್ಬರು ಆರೋಪಿಗಳ ಜೊತೆಗೂಡಿ ಮೈಸೂರು ನಗರ ಹಾಗೂ ಮಂಡ್ಯ ಜಿಲ್ಲೆ ವ್ಯಾಪ್ತಿಯಲ್ಲಿ ಮನೆಕಳ್ಳತನ ಮತ್ತು ಸರಗಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಈ ಪ್ರಕರಣಗಳಲ್ಲಿ 18,16,500 ಬೆಲೆ ಬಾಳುವ ಸುಮಾರು 305 ಗ್ರಾಂ ತೂಕದ ಚಿನ್ನಾಭರಣಗಳು, 1200 ಗ್ರಾಂ ತೂಕದ ಬೆಳ್ಳಿಯ ಪದಾರ್ಥಗಳು, ಕೃತ್ಯಕ್ಕೆ ಬಳಸಿದ ಒಂದು ಪಲ್ಸರ್ ದ್ವಿಚಕ್ರ ವಾಹನ ಹಾಗೂ ಒಂದು ಬೊಲೆನೋ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಧಿತನಿಂದ ಅಶೋಕಪುರಂ ಠಾಣೆಯ- 1 ಸರಗಳ್ಳತನ ಮತ್ತು 1 ಮನೆಕಳ್ಳತನ, ಸರಸ್ವತಿಪುರಂ ಠಾಣೆಯ 2 ಸರಗಳ್ಳತನ ಮತ್ತು 1 ಮನೆ ಕಳ್ಳತನ, ಅಲನಹಳ್ಳಿ ಠಾಣೆಯ 1 ಮನೆ ಕಳ್ಳತನ, ಮೇಟಗಳ್ಳಿ ಠಾಣೆಯ 1 ಸರಗಳ್ಳತನ ಪ್ರಕರಣಗಳು ಮತ್ತು ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ಟೌನ್ ಠಾಣೆಯ 1 ಮನೆ ಕಳ್ಳತನ, ಪಾಂಡವಪುರ ಟೌನ್ ಠಾಣೆಯ 1 ಮನೆ ಕಳ್ಳತನ ಪ್ರಕರಣಗಳು ಪತ್ತೆಯಾಗಿವೆ.
ಕಾರ್ಮಿಕರ ಮೇಲೆ ಹಲ್ಲೆ ಪ್ರಕರಣ: ದಲಿತ ಸಂಘಟನೆಗಳಿಂದ ಬಾಳೆಹೊನ್ನೂರು ಚಲೋ ಬೃಹತ್ ಜಾಥಾ
ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ, ಡಿಸಿಪಿ ಎಂ.ಎಸ್. ಗೀತಾ, ಕೆ.ಆರ್. ಉಪ ವಿಭಾಗದ ಎಸಿಪಿ ಎಸ್.ಇ. ಗಂಗಾಧರಸ್ವಾಮಿ ಅವರ ಮಾರ್ಗದರ್ಶನದಲ್ಲಿ ಅಶೋಕಪುರಂ ಠಾಣೆಯ ಪ್ರಭಾರ ಇನ್ಸ್‌ಪೆಕ್ಟರ್ ಸಿ.ಎಂ. ರವೀಂದ್ರ, ಎಸ್‌ಐ ಎಂ.ಕೆ. ಸ್ಮಿತಾ, ಸಿಬ್ಬಂದಿ ಪಿ.ಜೆ. ರಾಜು, ನಾರಾಯಣಶೆಟ್ಟಿ, ಲೋಕೇಶ, ಎಚ್.ಜೆ. ಗಿರೀಶ್, ಮಹದೇವಯ್ಯ, ಬಸವರಾಜ ಮುನ್ಯಾಳ್, ಮಹೇಶ, ಕೆ.ಆರ್. ವಿಭಾಗದ ಎಸಿಪಿ ಸ್ಕಾ$್ವಡ್ ಸಿಬ್ಬಂದಿ ಮೋಹನ್‌ಕುಮಾರ್, ಸಾಗರ್, ಸುರೇಶ, ಹರೀಶ, ಮೇಘ್ಯಾನಾಯ್ಕ್, ವೆಂಕಟೇಶ್, ಶ್ರೀನಿವಾಸ್, ಸೋಮಶೇಖರ್, ಹರೀಶ ಈ ಪತ್ತೆ ಮಾಡಿದ್ದಾರೆ.