ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾಗೆ ತಲವಾರು ತೋರಿಸಿ ಜೀವ ಬೆದರಿಕೆ ದೂರು ವಿಚಾರಕ್ಕೆ ಸಂಬಂಧಿಸಿ ಆರೋಪಿ ರಿಯಾಜ್(38) ನನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಂಗಳೂರು (ಅ.14): ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾಗೆ ತಲವಾರು ತೋರಿಸಿ ಜೀವ ಬೆದರಿಕೆ ದೂರು ವಿಚಾರಕ್ಕೆ ಸಂಬಂಧಿಸಿ ಆರೋಪಿ ರಿಯಾಜ್(38) ನನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಂಗಳೂರಿನ ಫಳ್ನೀರ್ ನಿವಾಸಿ ರಿಯಾಜ್ ನನ್ನ ಸ್ಕಾರ್ಫಿಯಾ ಕಾರು ಸಹಿತ ವಶಕ್ಕೆ ಪಡೆಯಲಾಗಿದೆ. ಬಂಧನದ ಬಳಿಕ ದೂರುದಾರರಾದ ಹರೀಶ್ ಪೂಂಜಾ ಕಾರು ಚಾಲಕ ನವೀನ್, ರಿಯಾಜ್ ಗುರುತು ಪತ್ತೆ ಮಾಡಿದ್ದಾರೆ.
ಆರೋಪಿ ಬಂಧನದ ಬಗ್ಗೆ ದ.ಕ ಜಿಲ್ಲಾ ಎಸ್ಪಿ ಋಷಿಕೇಷ್ ಸೋನಾವಣೆ ಮಾಹಿತಿ ನೀಡಿದ್ದು, ಆರೋಪಿಗೆ ಯಾವುದೇ ಕ್ರಿಮಿನಲ್ ಹಿನ್ನೆಲೆ ಇಲ್ಲ, ಯಾವುದೇ ಮಾರಕಾಸ್ತ್ರ ಕಾರಿನಲ್ಲಿ ಪತ್ತೆಯಾಗಿಲ್ಲ. ಕೇರಳ ರಿಜಿಸ್ಟ್ರೇಷನ್‌ನ ಕಾರು ಇದಾಗಿದ್ದು, ಕಾರು ಓವರ್ ಟೇಕ್ ವಿಚಾರದಲ್ಲಿ ಶಾಸಕರಿದ್ದ ಕಾರು ತಡೆದು ಅವಾಚ್ಯ ನಿಂದನೆ ಮಾಡಲಾಗಿದೆ. ಹೆಚ್ಚಿನ ತನಿಖೆ ನಡೆಸುವುದಾಗಿ ಎಸ್ಪಿ ಋಷಿಕೇಷ್ ಸೋನಾವಣೆ ಮಾಹಿತಿ ನೀಡಿದ್ದಾರೆ.
ಶಾಸಕ ಹರೀಶ್ ಪೂಂಜಾಗೆ ತಲವಾರು ತೋರಿಸಿ ಬೆದರಿಕೆ: ಪ್ರಕರಣ ದಾಖಲು
ಘಟನೆಯ ಹಿನ್ನೆಲೆ?: ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಪರಂಗೀಪೇಟೆ ಬಳಿ ಘಟನೆ ನಡೆದಿದ್ದು, ನಿನ್ನೆ (ಗುರುವಾರ) ರಾತ್ರಿ 11.15ರ ಸುಮಾರಿಗೆ ಶಾಸಕ ಪೂಂಜಾ ಕಾರು ಅಡ್ಡಗಟ್ಟಿ ಕೊಲೆ ಬೆದರಿಕೆ ಒಡ್ಡಿದ ಬಗ್ಗೆ ದೂರು ನೀಡಲಾಗಿತ್ತು. ಶಾಸಕ ಪೂಂಜಾ ಕಾರು ಚಾಲಕ ನವೀನ್‌ರಿಂದ ಬಂಟ್ವಾಳ ಗ್ರಾಮಾಂತರ ಠಾಣೆಗೆ ದೂರು ನೀಡಲಾಗಿತ್ತು. ಬಿಳಿ ಬಣ್ಣದ ಸ್ಕಾರ್ಫಿಯೋ ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದು ಬೆದರಿಕೆ ಒಡ್ಡಲಾಗಿದೆ.
ನಿನ್ನೆ ಸಂಜೆ 6.20ಕ್ಕೆ ವಿಮಾನ ಮೂಲಕ ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸಿದ್ದ ಶಾಸಕ ಪೂಂಜಾ, ಅಲ್ಲಿಂದ ಸರ್ಕ್ಯೂಟ್ ಹೌಸ್‌ಗೆ ಆಗಮಿಸಿ ಮೀಟಿಂಗ್‌ನಲ್ಲಿ ಭಾಗವಹಿಸಿದ್ದರು. ಬಳಿಕ ರಾತ್ರಿ 10.45ರ ಹೊತ್ತಿಗೆ ಸಂಬಂಧಿಕರಾದ ಕುಶಿತ್ ಮತ್ತು ಪ್ರಶಾಂತ್ ಜೊತೆ ಬೇರೆ ಕಾರಿನಲ್ಲಿ ಶಾಸಕ ಹರೀಶ್ ಪೂಂಜಾ ಬೆಳ್ತಂಗಡಿ ಕಡೆಗೆ ಹೊರಟಿದ್ದರು. ಹೀಗಾಗಿ ಪೂಂಜಾ ಹೋಗುತ್ತಿದ್ದ ಕಾರಿನ ಹಿಂದೆ ಶಾಸಕರ ಅಧಿಕೃತ ಕಾರನ್ನು ಚಾಲಕ ನವೀನ್ ಚಲಾಯಿಸಿಕೊಂಡು ಬಂದಿದ್ದರು. ಈ ವೇಳೆ ಪಡೀಲ್ ರೈಲ್ವೇ ಬ್ರಿಡ್ಜ್ ಅಡಿಯಿಂದ ಸ್ಕಾರ್ಪಿಯೋ ಕಾರು ಹಿಂಬಾಲಿಸಿಕೊಂಡು ಬಂದಿತ್ತು.
ಮಂಗಳೂರು: ಡಿಸಿ ಕಚೇರಿಯಲ್ಲಿ ಸರ್ಕಾರಿ ಕೆಲಸಕ್ಕೆ ಹಾಜರಾದ ದಿ. ಪ್ರವೀಣ್ ನೆಟ್ಟಾರು ಪತ್ನಿ
ಈ ಬಗ್ಗೆ ಫೋನ್ ಮೂಲಕ ಶಾಸಕ ಪೂಂಜಾಗೆ ಮಾಹಿತಿ ನೀಡಿದ ಚಾಲಕ ನವೀನ್, ಕಾರು ಹಿಂಬಾಲಿಸುವ ಬಗ್ಗೆ ಮಾಹಿತಿ ನೀಡಿದ್ದಾರೆ. ಆದರೆ ಈ ವೇಳೆ ಎದುರಿಗಿದ್ದ ಶಾಸಕರ ಸಂಬಂಧಿಯ ಕಾರು ಅಡ್ಡಗಟ್ಡಿದ ಸ್ಕಾರ್ಫಿಯಾ ಕಾರು, ಪರಂಗೀಪೇಟೆ ಬಳಿ ಅಡ್ಡಗಟ್ಟಿ ತಲವಾರು ತೋರಿಸಿ ಅವಾಚ್ಯ ಶಬ್ದಗಳಿಂದ ಬೈದು ಪರಾರಿಯಾಗಿದೆ. ಬಿ.ಸಿ.ರೋಡ್ ಕಡೆಗೆ ವೇಗವಾಗಿ ಕಾರು ಚಲಾಯಿಸಿ ಪರಾರಿಯಾಗಿದೆ ಎಂದು ದೂರು ನೀಡಲಾಗಿತ್ತು. ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಬಂಧನವಾಗಿದೆ.