
ಪಾಟ್ನಾ(ಜೂ.28) ಹೆಣ್ಣುಮಕ್ಕಳ ಸುರಕ್ಷತೆ ಕುರಿತು ಹಲವು ಬಾರಿ ಪ್ರಶ್ನೆಗಳು ಏಳುತ್ತಲೇ ಇವೆ. ಕರ್ನಾಟಕ, ದೆಹಲಿ ಸೇರಿದಂತೆ ಹಲೆವೆಡೆ ಪಾಗಲ್ ಪ್ರೇಮಿಗಳಿಂದ ನಡೆದ ಸಾಲು ಸಾಲು ಹತ್ಯೆ ಘಟನೆಗಳು ಮರುಕಳಿಸುತ್ತಿದೆ. ಇದೀಗ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದ ಟೀಚರ್ ಅಡ್ಡಗಟ್ಟಿದ ಪಾಗಲ್ ಪ್ರೇಮಿ ಪಿಸ್ತೂಲ್ ತೋರಿಸಿ ಬೆದರಿಸಿದ್ದಾನೆ. ಬಳಿಕ ಹಣೆಗೆ ಸಿಂಧೂರ ಇಟ್ಟು ರಸ್ತೆಯಲ್ಲಿ ಮದುವೆಯಾಗಲು ಮುಂದಾಗಿದ್ದಾನೆ. ಆದರೆ ಟೀಚರ್ ತಂದೆಯ ಪ್ರಯತ್ನದಿಂದ ಭಾರಿ ಅನಾಹುತ ತಪ್ಪಿದೆ. ಈ ಘಟನೆಯನ್ನು ವಿಡಿಯೋ ರೆಕಾರ್ಡ್ ಮಾಡಲಾಗಿದೆ.
ಈ ಘಟನೆ ಬಿಹಾರದ ಬಂಕಾ ಜಿಲ್ಲೆಯಲ್ಲಿ ನಡೆದಿದೆ. ಘಟನೆ ಬಳಿಕ ಟೀಚರ್ ದೂರು ದಾಖಲಿಸಿದ್ದಾರೆ. ಅಮರಪುರ್ ಬ್ಲಾಕ್‌ನಲ್ಲಿರುವ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಈಕೆ ತಂದೆ ಜೊತೆ ಮನೆಗೆ ಮರಳುತ್ತಿರುವಾಗ ಈ ಘಟನೆ ನಡೆದಿದೆ. ಶಾಲಾ ತರಗತಿ ಮುಗಿಸಿ ಸಂಜೆ ವೇಳೆ ತಂದೆ ಜೊತೆ ಮನೆಗೆ ಮರಳಿದ್ದಾರೆ. ಶಾಲೆಯಿಂದ ತಂದೆ ಸ್ಕೂಟರ್ ನಿಲ್ಲಿಸಿದ ಬಳಿಗೆ ನಡೆದುಕೊಂಡು ಬರುವಾಗ ಈ ಘಟನೆ ನಡೆದಿದೆ.
ಬೆಳಗಾವಿಯಲ್ಲಿ ಪಾಗಲ್ ಪ್ರೇಮಿಯ ಹುಚ್ಚಾಟ: ಪ್ರೀತಿ ನಿರಾಕರಿಸಿದ್ಧಕ್ಕೆ ಯುವತಿ ಮನೆ ಮೇಲೆ ದಾಳಿ!
ತುಂತುರು ಮಳೆ ಸುರಿಯುತ್ತಿದ್ದ ರಸ್ತೆಯಲ್ಲಿ ಟೀಚರ್ ತನ್ನ ತಂದೆ ಜೊತೆ ನಡೆದುಕೊಂಡು ಬಂದಿದ್ದಾರೆ. ಇತ್ತ ಪಾಗಲ್ ಪ್ರೇಮಿ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಆಗಮಿಸಿದ್ದಾನೆ. ಟೀಚರ್ ಹತ್ತಿರ ಬರುತ್ತಿದ್ದಂತೆ ಅಡ್ಡಗಟ್ಟಿ ಗನ್ ಹೊರತೆಗೆದಿದ್ದಾನೆ. ಬಳಿಕ ಮದುವೆಯಾಗಲು ಸೂಚಿಸಿದ್ದಾನೆ. ನಿರಾಕರಿಸುತ್ತಿದ್ದಂತೆ ಗನ್ ತೋರಿಸಿ ಬೆದರಿದ್ದಾನೆ. ಟೀಚರ್ ಹಣೆಗೆ ಸಿಂಧೂರ ಹಾಕಿ ಮದುವೆಯಾಗಲು ಮುಂದಾಗಿದ್ದಾನೆ.
ಪಾಗಲ್ ಪ್ರೇಮಿಯ ಪ್ರಯಯತ್ನಕ್ಕೆ ಟೀಚರ್ ತಂದೆ ಪ್ರತಿರೋಧ ತೋರಿದ್ದಾರೆ. ನನ್ನ ಮಗಳನ್ನು ಮುಟ್ಟಲು ಬಿಡುವುದಿಲ್ಲ ಎಂದು ಗದರಿಸಿದ್ದಾರೆ. ಆಕೆಯಿಂದ ನಾನು ಹುಚ್ಚನಾಗಿದ್ದೇನೆ. ನಾನು ಮದುವೆಯಾಗುತ್ತೇನೆ ಎಂದು ರಾದ್ದಾಂತ ಶುರುಮಾಡಿದ್ದಾನೆ. ಈ ಘಟನೆಯ ವಿಡಿಯೋ ಕೂಡ ರೆಕಾರ್ಡ್ ಮಾಡಲಾಗಿದೆ.
ಯಾರೊಬ್ಬರು ಟೀಚರ್ ಹಾಗೂ ಆಕೆಯ ತಂದೆಯ ನೆರವಿಗೆ ಬಂದಿಲ್ಲ. ಪಾಗಲ್ ಪ್ರೇಮಿಯನ್ನು ದೂರಕ್ಕೆ ತಳ್ಳಿ ಮಗಳ ಜೊತೆ ಪೊಲೀಸ್ ಠಾಣೆಗೆ ತೆರಳಿದ ತಂದೆ ದೂರು ನೀಡಿದ್ದಾರೆ. ಈ ಪಾಗಲ್ ಪ್ರೇಮಿಯ ಕಿರುಕುಳ ಕುರಿತು 2 ತಿಂಗಳ ಹಿಂದೆ ಟೀಚರ್ ದೂರು ನೀಡಿದ್ದರು. ಈ ವೇಳೆ ಪೊಲೀಸರು ಈತನ ಕರೆದು ವಾರ್ನಿಂಗ್ ನೀಡಿದ್ದರು.ಆದರೆ ಕಿರುಕುಳ ಮಾತ್ರ ನಿಂತಿಲ್ಲ.
ಪ್ರೀತಿ ನಿರಾಕರಿಸಿದಳೆಂದು ಯುವತಿ ಮನೆಗೆ ಕಲ್ಲು ತೂರಿದ ಪಾಗಲ್ ಪ್ರೇಮಿ!
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಈ ಪಾಗಲ್ ಪ್ರೇಮಿ ಬಂಧನಕ್ಕೆ ಹುಡುಕಾಟ ಆರಂಭಿಸಿದ್ದಾರೆ. ಇತ್ತ ಪಾಗಲ್ ಪ್ರೇಮಿ ಪರಾರಿಯಾಗಿದ್ದಾನೆ. ಕಳೆದ ಕೆಲ ತಿಂಗಳುಗಳಿಂದ ಈತ ಕಿರುಕುಳ ನೀಡುತ್ತಿದ್ದಾನೆ. ಸೂಕ್ತ ಕ್ರಮ ಕೈಗೊಳ್ಳದಿದ್ದರೆ, ಜೀವಕ್ಕೆ ಅಪಾಯವಿದೆ ಎಂದು ಟೀಚರ್ ದೂರಿನಲ್ಲಿ ಮನವಿ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ