ಗಂಡನ ಪೋಸ್ಟ್‌ಗೆ ಮಹಿಳಾಮಣಿಗಳ ಲೈಕ್ಸ್ ಸಹಿಸದ ಪತ್ನಿ ಮಾಡಿದ ಕೆಲಸ!

By Suvarna NewsFirst Published Oct 25, 2021, 7:23 PM IST
Highlights

* ಗಂಡ-ಹೆಂಡತಿ ನಡುವೆ ಸೋಶಿಯಲ್  ಮೀಡಿಯಾ ಲೈಕ್ಸ್ ಕಿತ್ತಾಟ
* ಗಂಡನ ಪೋಸ್ಟ್ ಗೆ ಹೆಚ್ಚಿನ ಲೈಕ್ಸ್ ಬರುತ್ತಿದ್ದಕ್ಕೆ ಪತ್ನಿಗೆ ಅಸೂಹೆ
* ಗಂಡನಿಂದ ಹಲ್ಲೆಯಾಗಿದೆ ಎಂದು ಸಹಾಯವಾಣಿಗೆ ಕರೆ ಮಾಡಿದ ಮಹಿಳೆ
* ಗಂಡನ ಪೋಸ್ಟ್‌ಗೆ ಲೈಕ್ಸ್‌ ಒತ್ತಿದ ಮಹಿಳಾ ಮಣಿಗಳು... ಪತ್ನಿ ಮೊಬೈಲ್ ಕಿತ್ತೆಸೆದಳು!

ವಡೋದರಾ(ಅ. 25)   ಈ ಸೋಶಿಯಲ್ ಮೀಡಿಯಾದ (Social Media) ಹುಚ್ಚು ಎಂತೆಂಥ ಸಂಕಷ್ಟ ತಂದಿಡುತ್ತದೆ ಎನ್ನುವುದಕ್ಕೆ ಈ ಘಟನೆಗಿಂತ ಬೇರೆ ಸಾಕ್ಷಿ ಬೇಕಿಲ್ಲ. ಲೈಕ್ ಮತ್ತು ಕಮೆಂಟ್ಸ್ ಗಳ ಹಪಹಪಿ ಗಲಾಟೆ ಜಗಳಕ್ಕೆ ಕಾರಣವಾಗುವುದು ಹೊಸದೇನಲ್ಲ.

ಗುಜರಾತ್‌ನ (Gujarat) ವಡೋದರಾದಿಂದ ಇಂಥದ್ದೆ ಪ್ರಕರಣ ವರದಿಯಾಗಿದೆ.  ಲೈಕ್ಸ್ ವಿಚಾರದಲ್ಲಿ ಗಂಡ (Husband) ತನ್ನ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಿರುವ ಮಹಿಳೆ (Wife) ಸಹಾಯವಾಣಿಗೆ ಕರೆ ಮಾಡಿದ್ದಾರೆ.

ಪ್ರತ್ಯೇಕ ಸೋಶಿಯಲ್ ಮೀಡಿಯಾ ಖಾತೆಗಳನ್ನು ಹೊಂದುವುದು ಸಾಮಾನ್ಯ ಬಿಡಿ. ಗಂಡನ ಪೋಸ್ಟ್ ಗಳಿಗೆ ಹೆಚ್ಚಿನ ಲೈಕ್ಸ್ ಬರುತ್ತಿದ್ದ ಕಾರಣ ಹೆಂಡತಿಗೆ ಅಸೂಹೆ ಆರಂಭವಾಗಿದೆ.  ಅದರಲ್ಲೂ ಮಹಿಳೆಯರು ಗಂಡನ ಪೋಸ್ಟ್ ಗೆ ಲೈಕ್ ಒತ್ತುತ್ತಿದ್ದುದ್ದು ಪತ್ನಿಯನ್ನು ಕೆರಳಿಸಿದೆ.  ಅಪ್ ಲೋಡ್ ಮಾಡಿ ನಿಮಿವಾಗುವುದರೊಳಗೆ ಗಂಡನ ಪೋಸ್ಟ್ ಗೆ ಸಾಕಷ್ಟು ಲೈಕ್ ಬರುತ್ತಿದ್ದವು.

ಪೋರ್ನ್ ಗೆ ದಾಸನಾಗಿದ್ದ ಪತಿ ಪತ್ನಿಗೆ ಹೀಗೆಲ್ಲ ಹೇಳಿದ

ಅಸೂಹೆ ಪರಿಣಾಮ ಮಹಿಳೆ ತಾಳ್ಮೆ ಕಳೆದುಕೊಂಡು  ಗಂಡನ ಮೊಬೈಲ್ ಕಸಿದುಕೊಂಡಿದ್ದಾಳೆ.   ಇದರಿಂದ ಇಬ್ಬರ ನಡುವೆ ಕಿತ್ತಾಟ ಶುರುವಾಗಿದೆ. ಈ ವೇಳೆ ಗಂಡ ತನ್ನ ಮೇಲೆ ಹಲ್ಲೆ ಮಾಡಿದ್ದಾನೆ ಎನ್ನುವುದು ಮಹಿಳೆಯ ಆರೋಪ. ಇದಾದ ನಂತರ ಮಹಿಳೆ ಅಭಯಂ ಸಹಾಯವಾಣಿಗೆ ಕರೆ ಮಾಡಿ, ಪತಿ ತನ್ನ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ದೂರು ನೀಡಿದ್ದಾಳೆ. (ಸಾಂದರ್ಭಿಕ ಚಿತ್ರ)

ಗಂಡನಿಗೆ ಕೌನ್ಸಿಲರ್ ನಿಂದ ಎಚ್ಚರಿಕೆ;  ಪ್ರಕರಣದ ಮಾಹಿತಿ ಗೊತ್ತಾದ ಸ್ಥಳೀಯ ಕೌನ್ಸಿಲರ್ ದಂಪತಿ ಮನೆಗೆ ಭೇಟಿ ನೀಡಿ ಹೆಂಡತಿ ಮೇಲೆ ಹಲ್ಲೆ ಮಾಡದಂತೆ ಗಂಡನಿಗೆ ಎಚ್ಚರಿಕೆ ಕೊಟ್ಟಿದ್ದಾನೆ.  ನಿಮ್ಮ ಮೇಲೆ ಕಾನೂನು ಕ್ರಮಕ್ಕೆ  ನಾನೇ ಶಿಫಾರಸು ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾನೆ.

ನಿಸರ್ಗಕ್ಕೆ ವಿರುದ್ಧ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ ಗಂಡ;  
ಮಹಾರಾಷ್ಟ್ರದಿಂದ ವರದಿಒಯಾಗಿರುವ  ಇನ್ನೊಂದು ಪ್ರಕರಣದಲ್ಲಿ, 27 ವರ್ಷದ ವ್ಯಕ್ತಿಯೊಬ್ಬ ತನ್ನ 21 ವರ್ಷದ ಪತ್ನಿಗೆ ಅಸ್ವಾಭಾವಿಕ ಸಂಭೋಗಕ್ಕೆ ಒತ್ತಾಯಿಸಿದ್ದಾನೆ. ಒಪ್ಪದಿದ್ದಾಗ ಆಕೆಯನ್ನು ಥಳಿಸಿದ್ದು ಅಲ್ಲದೆ ಪತ್ನಿಯ ಬೆತ್ತಲೆ ಪೋಟೋಗಳನ್ನು ಸೋಶಿಯಲ್ ಮೀಡಿಯಾಕ್ಕೆ ಅಪ್ ಲೋಡ್ ಮಾಡಿದ್ದಾನೆ.  ಈತನಿಗೆ ಈ ಹಿಂದೆಯೇ ಒಂದು ಮದುವೆಯಾಗಿದ್ದು ಮದುವೆಯಾದ ದಿನದಿಂದಲೂ ನಿರಂತರ ಕಿರುಕುಳ ನೀಡಿಕೊಂಡು ಬಂದಿದ್ದಾನೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾಳೆ

click me!