* ಪೊಲೀಸ್ ಪೇದೆ ನೇಮಕಾತಿ ಪರೀಕ್ಷೆ
* ಬ್ಲೂಟೂತ್ ಬಳಸಿ ಕಾಪಿ: 12 ಮಂದಿ ಸೆರೆ
* ಪರೀಕ್ಷಾ ಅಕ್ರಮದ ಹಿಂದೆ ದೊಡ್ಡ ಜಾಲವೇ ಇದೆ ಎಂಬ ಶಂಕೆ
ಬೆಳಗಾವಿ(ಅ.25): ಪೊಲೀಸ್(Police) ಪೇದೆ ನೇಮಕಾತಿ(Recruitment) ಪರೀಕ್ಷೆಯಲ್ಲಿ ನಕಲು ಮಾಡುತ್ತಿದ್ದ ಇಬ್ಬರು ಪರೀಕ್ಷಾರ್ಥಿಗಳು ಮತ್ತು ನಕಲು ಮಾಡಲು ಸಹಾಯ ಮಾಡುತ್ತಿದ್ದ 12 ಮಂದಿ ಸೇರಿ ಒಟ್ಟು 14 ಮಂದಿಯನ್ನು ಬೆಳಗಾವಿ(Belagavi) ಜಿಲ್ಲೆಯ ವಿವಿಧೆಡೆ ಕಾರ್ಯಾಚರಣೆ ನಡೆಸಿದ ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಗೋಕಾಕ(Gokak) ತಾಲೂಕಿನ ಮಸಗುಪ್ಪಿ ಗ್ರಾಮದ ಲಕ್ಷ್ಮಣ ಹಸಿರೊಟ್ಟಿ ಹಾಗೂ ಮೂಡಲಗಿ ತಾಲೂಕಿನ ತಿಗಡಿ ಗ್ರಾಮದ ಸರಸ್ವತಿ ಪೂಜಾರಿ ನಕಲು ಮಾಡುವ ವೇಳೆ ಸಿಕ್ಕಿಬಿದ್ದಿದ್ದರೆ, ರಾಮತೀರ್ಥ ನಗರದ ಒಂದು ಕೊಠಡಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಬ್ಲೂಟೂತ್(Bluetooth) ಉಪಯೋಗಿಸಿ ನಕಲು ಮಾಡಲು ಸಹಾಯ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ 12 ಮಂದಿಯನ್ನು ಬಂಧಿಸಿದ್ದಾರೆ(Arrest). ಬಂಧಿತರಿಂದ 33 ಮೊಬೈಲ್(Mobile), 9 ಮಾಸ್ಟರ್ ಕಾರ್ಡ್ ಡಿವೈಸರ್, 19 ಬ್ಲೂಟೂತ್, 3 ಟ್ಯಾಬ್(Tab), 1 ಲ್ಯಾಪ್‌ಟಾಪ್(Laptop), ಒಂದು ಪ್ರಿಂಟರ್(Printer), ಮೂರು ಬೈಕ್(Bike)ಮತ್ತು ಒಂದು ಕಾರ್(Car) ವಶಪಡಿಸಿಕೊಂಡಿದ್ದಾರೆ.
undefined
3,500 ಪೇದೆ ಹುದ್ದೆಗೆ 3.5 ಲಕ್ಷ ಜನ ಪರೀಕ್ಷೆ..!
ಈ ಹಿಂದೆ ಕೂಡ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳ(Competitive Exam) ವೇಳೆ ಗೋಕಾಕ ತಾಲೂಕಿನ ಅನೇಕರು ಅಕ್ರಮಗಳಲ್ಲಿ ಸಿಕ್ಕಿಬಿದ್ದಿದ್ದು, ಆ ಪ್ರಕರಣಗಳು ತನಿಖೆಯ ಹಂತದಲ್ಲಿರುವಾಗಲೇ ಮತ್ತೊಂದು ಘಟನೆ ನಡೆದಿದೆ. ಹೀಗಾಗಿ ಈ ಪರೀಕ್ಷಾ ಅಕ್ರಮದ(Illegal) ಹಿಂದೆ ದೊಡ್ಡ ಜಾಲವೇ ಇದೆ ಎಂದು ಶಂಕಿಸಲಾಗಿದ್ದು, ಪೊಲೀಸರು(Police) ತನಿಖೆ ನಡೆಸುತ್ತಿದ್ದಾರೆ.