ಯುವತಿಯರೇ ಹುಷಾರ್.. ಬೆಂಗ್ಳೂರಲ್ಲಿ ಮೈಮರೆತು ಮಾತಾಡ್ತಾ ಇದ್ರೆ ಅಷ್ಟೆ ಕತೆ!

Published : Oct 20, 2020, 12:37 AM ISTUpdated : Oct 20, 2020, 12:39 AM IST
ಯುವತಿಯರೇ ಹುಷಾರ್.. ಬೆಂಗ್ಳೂರಲ್ಲಿ ಮೈಮರೆತು ಮಾತಾಡ್ತಾ ಇದ್ರೆ ಅಷ್ಟೆ ಕತೆ!

ಸಾರಾಂಶ

ರಸ್ತೆ ಬದಿಯಲ್ಲಿ ಮೊಬೈಲ್‌ನಲ್ಲಿ ಮಾತಾಡೋ ಯುವತಿಯರೇ ಹುಷಾರ್/  ಸಿಲಿಕಾನ್ ಸಿಟಿಯಲ್ಲಿ ನಡೆಯಿತು ಹಾಡಹಗಲೇ ಸುಲಿಗೆ/ ಮೊದಲು ಏರಿಯಾದ ಅಕ್ಕ ಪಕ್ಕದ ರಸ್ತೆಯನ್ನ ಗಮನಿಸೋ ಖರ್ತನಾಕ್ ಕಳ್ಳ/ ನಂತರ ಮೊಬೈಲ್ ನಲ್ಲಿ ಒಬ್ಬಂಟಿಯಾಗಿ ರಸ್ತೆಬದಿ ಮಾತಾಡೊ ಯುವತಿಯನ್ನ ಗಮನಿಸಿದ್ದಾನೆ

ಬೆಂಗಳೂರು(ಅ. 19) ಬೆಂಗಳೂರು ಪೊಲೀಸರು ಪದೇ ಪದೆ ಎಚ್ಚರಿಕೆ ನೀಡುತ್ತಲೇ ಇರುತ್ತಾರೆ. ಆದರೆ ಒಂದು ಕ್ಷಣ ನಾವೆಲ್ಲರೂ ತಾಳುವ ನಿರ್ಲಕ್ಷ್ಯ ಅಪಾಯವನ್ನು ಎದುರಿಗೆ ತಂದಿಡುತ್ತದೆ.

ರಸ್ತೆ ಬದಿಯಲ್ಲಿ ಮೊಬೈಲ್‌ನಲ್ಲಿ ಮಾತಾಡೋ ಯುವತಿಯರೇ ಹುಷಾರ್ ಎಂದು ಹೇಳಲೇಬೇಕಿದೆ ಸಿಲಿಕಾನ್ ಸಿಟಿಯಲ್ಲಿ  ಹಾಡಹಗಲೇ ಮೊಬೈಲ್ ಕಸಿದುಕೊಂಡು ಬೈಕ್ ಸವಾರ ನೋಡುನೋಡುತ್ತಿದ್ದಂತೆ ಪರಾರಿಯಾಗಿದ್ದಾನೆ.

ಕೋಟಿ ಚಿನ್ನ ಕದ್ದವ ಊರು ಸೇರುವ ಮುನ್ನ ಸಿಕ್ಕಿಬಿದ್ದ

ಮೊದಲು ಏರಿಯಾದ ಅಕ್ಕ ಪಕ್ಕದ ರಸ್ತೆಯನ್ನ ಗಮನಿಸೋ ಖರ್ತನಾಕ್ ಕಳ್ಳ  ನಂತರ ಮೊಬೈಲ್ ನಲ್ಲಿ ಒಬ್ಬಂಟಿಯಾಗಿ ರಸ್ತೆಬದಿ ಮಾತಾಡೊ ಯುವತಿಯನ್ನು ಟಾರ್ಗೆಟ್ ಮಾಡಿದ್ದಾನೆ. ನಂತರ ಮೊಬೈಲ್ ನಲ್ಲಿ ಮಗ್ನಳಾಗಿದ್ದ ಯುವತಿಯ ಮೊಬೈಲ್ ಎಗರಿಸಿ ಕ್ಷಣಾರ್ಧದಲ್ಲಿ ಎಸ್ಕೇಪ್ ಆಗಿದ್ದಾನೆ.

ನಂಬರ್ ಪ್ಲೇಟ್ ಇಲ್ಲದ  ಬೈಕ್ ನಲ್ಲಿ ಬಂದಿದ್ದ ಕಳ್ಳ ಕೃತ್ಯ ಎಸಗಿ ನೋಡ ನೋಡುತ್ತಿದ್ದಂತೆ ಜಾಗ ಖಾಲಿ ಮಾಡಿದ್ದಾನೆ. ಬೆಂಗಳೂರಿನ ಕೆಂಪಾಪುರದ ಗೋಪಾಲಪ್ಪ ಲೇಔಟ್ ನಲ್ಲಿ ಘಟನೆ ನಡೆದಿದ್ದು ಅಮೃತಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
ಡ್ರಗ್ಸ್‌ ಸಪ್ಲೈಗೆ ಸ್ತ್ರೀಯರ ಬಳಕೆ ಅಧಿಕ! ಆಫ್ರಿಕಾ ಖಂಡದ ಸ್ತ್ರೀಯರೇ ಅಧಿಕ