ಆನ್‌ಲೈನ್‌ ಮೋಸದ ಜಾಲ: ಕಾರಿನ ಆಸೆಗೆ 11 ಲಕ್ಷ ಹಣ ಕಳೆದುಕೊಂಡ ಕಾಫಿನಾಡಿನ ಯುವಕ

By Govindaraj S  |  First Published Aug 18, 2023, 6:09 PM IST

ಆನ್‌ಲೈನ್‌ನಲ್ಲಿ ಬಂದ ಕರೆಗೆ 29 ಲಕ್ಷ ಸಾಲಗಾರನಾದ ಯುವಕನ ಸ್ಟೋರಿ ಇದು. ಚಿಕ್ಕಮಗಳೂರು ನಗರದ ಯುವಕ ನವೀನ್ (ಹೆಸರು ಬದಲಾಸಲಾಗಿದೆ). ವೃತ್ತಿಯಲ್ಲಿ ಪೆಟ್ರೋಲ್ ಬಂಕ್‌ವೊಂದರಲ್ಲಿ ಕೆಲಸ. ಯುವಕನಿಗೆ ಬಂದ  ಆನ್‍ಲೈನ್ ಕಾಲ್‌ನಿಂದ ಹಾಗೂ ಕ್ಯಾಸಿನೋ ಆಡಿ ಕಳೆದದ್ದು ಬರೋಬ್ಬರಿ 29 ಲಕ್ಷ. 


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು

ಚಿಕ್ಕಮಗಳೂರು (ಆ.18): ಆನ್‌ಲೈನ್‌ನಲ್ಲಿ ಬಂದ ಕರೆಗೆ 29 ಲಕ್ಷ ಸಾಲಗಾರನಾದ ಯುವಕನ ಸ್ಟೋರಿ ಇದು. ಚಿಕ್ಕಮಗಳೂರು ನಗರದ ಯುವಕ ನವೀನ್ (ಹೆಸರು ಬದಲಾಸಲಾಗಿದೆ). ವೃತ್ತಿಯಲ್ಲಿ ಪೆಟ್ರೋಲ್ ಬಂಕ್‌ವೊಂದರಲ್ಲಿ ಕೆಲಸ. ಯುವಕನಿಗೆ ಬಂದ  ಆನ್‍ಲೈನ್ ಕಾಲ್‌ನಿಂದ ಹಾಗೂ ಕ್ಯಾಸಿನೋ ಆಡಿ ಕಳೆದದ್ದು ಬರೋಬ್ಬರಿ 29 ಲಕ್ಷ. ಪೆಟ್ರೋಲ್ ಬಂಕ್ ಮಾಲೀಕ ಬಂದು ನೋಡಿದ್ರೆ ಬಂಕ್‌ನಲ್ಲಿ ಹಣ ಇಲ್ಲ.

Tap to resize

Latest Videos

undefined

ಮೋಸದ ಜಾಲಕ್ಕೆ ಕಾಫಿನಾಡಿನ ಯುವಕ ಬಲಿ!: ಚಿಕ್ಕಮಗಳೂರು ನಗರದ ಹೊರಹೊಲಯದಲ್ಲಿರುವ ಪೆಟ್ರೋಲ್ ಬಂಕ್‍ವೊಂದರಲ್ಲಿ ಕೆಲಸ ಮಾಡುವ ಯುವಕನಿಗೆ  ಬಂದ ಆನ್‍ಲೈನ್ ಕಾಲ್ 29 ಲಕ್ಷ ರೂಪಾಯಿ ಬರೆ ಹಾಕಿದೆ. ಎಸ್ ಎಲ್ ಎಲ್ ಸಿ ವಿದ್ಯಾಭ್ಯಾಸ ಮಾಡಿರುವ  ಯುವಕನಿಗೆ ಒಂದು ತಿಂಗಳ ಹಿಂದೆ ಮೊಬೈಲ್ ಪೋನ್ ಗೆ ಕರೆ ಬಂದಿದೆ. ಆ ಕಡೆಯಿಂದ ಫೋನ್ ಮಾಡಿದ ಹುಡುಗಿ ಲಕ್ಕಿ ಡಿಪ್‍ನಲ್ಲಿ ನಿಮ್ಮ ನಂಬರ್ ಡ್ರಾ ಆಗಿದೆ. 

ಹುಬ್ಬಳ್ಳಿಯಲ್ಲಿ ಕೈಗಾರಿಕೆ ಸ್ಥಾಪನೆಗೆ ಒತ್ತು ನೀಡಿ: ಜಗದೀಶ್‌ ಶೆಟ್ಟರ್‌

25 ಲಕ್ಷದ ಎಸ್.ಯು.ವಿ. 500 ಕಾರು ನಿಮಗೆ ಕೇವಲ 11 ಲಕ್ಷಕ್ಕೆ ಸಿಗಲಿದೆ ಅಂತ ಫೋನ್ ಮಾಡದ್ದೇ ತಡ ಪೆಟ್ರೋಲ್ ಬಂಕ್ ದುಡ್ಡಲ್ಲಿ 11 ಲಕ್ಷ ಹಾಕಿದ್ದಾನೆ. 11 ಲಕ್ಷ ಹಣವನ್ನು ಬ್ಯಾಂಕಿ ಹೋಗಿ ಆ ಹುಡುಗಿ ಹೇಳಿದ ಅಕೌಂಟ್ ನಂಬರ್ ಗೆ ಹಣ ಹಾಕಿದ್ದೇನೆ. ಉಳಿದ 19 ಲಕ್ಷ ಹಣವನ್ನ ಕ್ಯಾಸಿನೋ ಆಡಿ ಕಳೆದಿದ್ದಾನೆ. ಇದೀಗ, ಆ ಹುಡುಗಿ ಫೋನ್ ಮಾಡಿದ್ದ ನಂಬರ್‍ಗೆ ಎಷ್ಟೇ ಕಾಲ್ ಮಾಡಿದ್ರು ಪಿಕ್ ಮಾಡೋರೆ ಗತಿ ಇಲ್ಲ. ಯಾರ್ದೋ ದುಡ್ಡಲ್ಲಿ ಯಲ್ಲಮ್ಮನ ಜಾತ್ರೆ ಮಾಡೋಕೆ ಅಂತ ದುಡ್ಡ್ ಕೊಟ್ಟು ಆಸೆಗಣ್ಣಿನಿಂದ ಕಾರಿನ ದಾರಿ ಕಾಯ್ತಿದ್ದ ಯುವಕ ಕಂಗಾಲಾಗಿದ್ದು ಅತ್ತ ಕಾರು ಇಲ್ಲ. ಇತ್ತ ಹಣವೂ ಇಲ್ದೆ ತಲೆ ಮೇಲೆ ಕೈಹೊದ್ದು ಕೂತಿದ್ದಾನೆ.

ಸೆನ್ ಸ್ಟೇಷನ್ ಗೆ ದೂರು ನೀಡಿರುವ ಯುವಕ: ಅಯ್ಯೋ ದೇವ್ರೇ, ಹೀಗಾಯ್ತಲ್ಲ ಅಂತ ಕರೆ ಬಂದ ನಂಬರಿಗೆ ವಾಪಸ್ ಕಾಲ್ ಮಾಡಿದ್ರೆ ಪಿಕ್ ಮಾಡೋರು ಇಲ್ಲ. ಆ ಹದಿಹರೆಯದ ಹುಡುಗಿಯ ಸ್ವೀಟ್ ವಾಯ್ಸು ಇಲ್ಲ.11 ಲಕ್ಷ ಅಂತ ಫುಲ್ ತಲೆ ಕೆಡಿಸಿಕೊಂಡು ಡಿಪ್ರೆಷನ್‍ಗೆ ಹೋಗಿದ್ದಾರೆ. 21 ಲಕ್ಷ ಅಂತ ಸೆನ್ ಸ್ಟೇಷನ್‍ಗೆ ದೂರು ನೀಡಿದ್ದಾನೆ. ಅಲ್ಲಿ ಪೊಲೀಸರು ತನಿಖೆ ವೇಳೆ ಬಿಡಿಸಿ-ಬಿಡಿಸಿ ಕೇಳಿದಾಗ ಎಲ್ಲೆಲ್ಲಿ ಎಷ್ಟೆಷ್ಟು ಕಳೆದುಕೊಂಡಿದ್ದೇನೆ ಅನ್ನೋದು ಎಳೆ-ಎಳೆಯಾಗಿ ಬಿಚ್ಚಿಟ್ಟಿದ್ದಾನೆ. 

ಅಲ್ಲಿ ಸಂಬಂಧಿಕರಿಗೆ ಹುಷಾರಿಲ್ಲ ಅಂತ ಹೋಗಿದ್ದ ಬಂಕ್ ಮಾಲೀಕ ವಾಪಸ್ ಬಂದಾಗ ಪೆಟ್ರೋಲ್ ಬಂಕ್ ಸ್ಥಿತಿ ನೋಡಿ ಆತ ಮತ್ತಷ್ಟು ಕಂಗಾಲಾಗಿದ್ದಾರೆ. ಬಂಕ್ ನಲ್ಲಿ 29 ಲಕ್ಷ ಹಣ ಇಲ್ಲದೇ ಇರುವುದು ಮಾಲೀಕನಿಗೆ ನುಂಗಲಾರದ ತುತ್ತಾಗಿ ಪರಿಣಾಮಿಸಿದೆ.  ಆದ್ರೆ, ಈ ರೀತಿಯ ಹತ್ತಾರು ಪ್ರಕರಣ ನೋಡಿರೋ ಪೊಲೀಸರು ಸಾರ್ವಜನಿಕರು ಇಂತಹಾ ಅಫರ್ ಕರೆಗಳ ಬಗ್ಗೆ ಎಚ್ಚರ ಅಂತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾಪ್ರಶಾಂತ್  ಮನವಿ ಮಾಡಿದ್ದಾರೆ. ಒಟ್ಟಾರೆ, ಕೊಟ್ಟೋನು ಕೋಡಂಗಿ ಇಸ್ಕಂಡೋನು ವೀರಭದ್ರ ಎಂಬಂತಾಗಿದೆ ಈ ನಗರ ನಿವಾಸಿ ಪಾಡು. 

ಸೌಜನ್ಯ ಪ್ರಕರಣ ಮರು ತನಿಖೆಯಾಗಲಿ: ಪ್ರಮೋದ್‌ ಮುತಾಲಿಕ್‌

ಹೊಸ ಕಾರಿನ ಆಸೆಗೆ ಪೆಟ್ರೋಲ್ ಬಂಕ್‍ನಲ್ಲಿ ದುಡಿದ ಹಣವನ್ನೆಲ್ಲಾ ಆನ್‌ಲೈನ್‌ ಕರೆಗೆ ಹಾಕಿದ್ದೇನೆ. ಎಲ್ಲಿವರ್ಗೆ ಮೋಸ ಹೋಗೋರ್ ಇರ್ತಾರೋ ಅಲ್ಲಿವರ್ಗೆ ಮೋಸ ಮಾಡೋರು ಇದ್ದೇ ಇರ್ತಾರೆ ಅನ್ನೋದಕ್ಕೆ ಈ ಬುದ್ಧಿವಂತನೇ ಸಾಕ್ಷಿ. ಈ ರೀತಿ ಆಫರ್ ಮೇಲೆ ಆಫರ್ ನೀಡೋ ಕರೆಗಳ ಬಗ್ಗೆ ಜನ ಎಚ್ಚರದಿಂದಿರಬೇಕು. ಕುಲ-ಗೊತ್ರ ಇಲ್ಲದ ಆನ್‍ಲೈನ್ ಫೋನ್ ಬಗ್ಗೆ ಹುಷಾರು. ಇಲ್ಲವಾದರೆ ಮೋಸ ಹೋಗುವುದು ಖಂಡಿತ.

click me!