ಪತ್ನಿ ಕುಟುಂಬಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಭೂಪ: ಸಂಧಾನಕ್ಕೆ ಕರೆದು ರಾಕ್ಷಸ ನಡೆ!

By Kannadaprabha News  |  First Published Jun 30, 2022, 9:58 AM IST

* ವಿಚ್ಛೇದನಕ್ಕೆ ಒಪ್ಪದ ಪತ್ನಿ: ಸಂಬಂಧಿಕರ ಮೇಲೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ ಪತಿ!

* ಡೈವೋರ್ಸ್‌ ಗೆ ಒಪ್ಪದ ಪತ್ನಿ : ಸಂಬಂಧಿಕರ ಮೇಲೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ ಪತಿ!

* ಸಂಧಾನ ಮಾಡಲು ಬಂದಿದ್ದ ನಾಲ್ವರ ಪೈಕಿ ಓರ್ವ ದುರ್ಮರಣ, ಮೂವರ ಸ್ಥಿತಿ ಚಿಂತಾಜನಕ


ಯಾದಗಿರಿ(ಜೂ.30): ವಿಚ್ಛೇದನ (ಡೈವೋರ್ಸ್‌) ಕೊಡಲು ಒಪ್ಪದ ಪತ್ನಿ ವಿರುದ್ಧ ಆಕ್ರೋಶಗೊಂಡ ಆಕೆಯ ಪತಿ, ಸಂಧಾನಕ್ಕೆಂದು ಬಂದಿದ್ದ ನಾಲ್ವರನ್ನು ಕೋಣೆಯೊಂದರಲ್ಲಿ ಕೂಡಿ ಹಾಕಿ, ಹೊರಗಿನಿಂದ ಅವರ ಮೇಲೆ ಕಿಟಕಿಯ ಮೂಲಕ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ ಘಟನೆ ಯಾದಗಿರಿ ಜಿಲ್ಲೆಯ ಕೊಡೆಕಲ್‌ ಸಮೀಪದ ನಾರಾಯಣಪುರದ ಛಾಯಾ ಕಾಲೋನಿಯಲ್ಲಿ ಬುಧವಾರ ಬೆಳಗ್ಗೆ ನಡೆದಿದೆ.

ಈ ದುರ್ಘಟನೆಯಲ್ಲಿ ಗಾಯಗೊಂಡಿದ್ದ ನಾಲ್ವರ ಪೈಕಿ ವ್ಯಕ್ತಿಯೊಬ್ಬ ಸುಟ್ಟಗಾಯಗಳಿಂದ ಮೃತಪಟ್ಟಿದ್ದು, ಇನ್ನು ಮೂವರ ಸ್ಥಿತಿ ಚಿಂತಾಜನಕ ಎನ್ನಲಾಗುತ್ತಿದೆ. ಗಾಯಾಳುಗಳನ್ನು ನಾರಾಯಣಪುರ ಸಮೀಪದ ರಾಯಚೂರು ಜಿಲ್ಲಾ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ರವಾನಿಸಲಾಗಿದೆ. ಆರೋಪಿ ಶರಣಪ್ಪ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

Tap to resize

Latest Videos

undefined

10 ಲಕ್ಷ ವರದಕ್ಷಿಣೆ ಕೊಟ್ಟ ನಂತ್ರ ಆಗಿತ್ತು ಮದುವೆ, ಹನಿಮೂನ್ ಆದ ನಂತ್ರ ಗೊತ್ತಾಗಿದ್ದೇ ಬೇರೆ!

ಘಟನೆಯ ಹಿನ್ನೆಲೆ:

ಜೆಸಿಬಿ ವಾಹನ ಚಾಲಕ, ಆರೋಪಿ ಶರಣಪ್ಪ ಹಾಗೂ ಪತ್ನಿ ಹುಲಿಗೆಮ್ಮ ಮಧ್ಯ ಕೌಟುಂಬಿಕ ಕಲಹ ಇತ್ತು. ಲಿಂಗಸೂಗೂರಿನ ಕೆಎಸ್‌ಆರ್‌ಟಿಸಿ ಡಿಪೋದಲ್ಲಿ ಮೆಕ್ಯಾನಿಕ್‌ ಆಗಿ ಕಾರ್ಯನಿರ್ವಹಿಸುತ್ತಿದ್ದ ಪತ್ನಿ ಹುಲಿಗೆಮ್ಮ, ಪತಿಯ ಕಿರುಕುಳ ತಾಳಲಾಗದೆ ಕಳೆದ ಹದಿನಾಲ್ಕು ತಿಂಗಳುಗಳಿಂದ ಲಿಂಗಸೂಗೂರಿನಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರು.

ಪತ್ನಿಯೊಡನೆ ಸೌಹಾರ್ದಯುತ ಜೀವನ ನಡೆಸುವಂತೆ ಶರಣಪ್ಪ ಗೆ ಸಂಬಂಧಿಕರು ಅನೇಕ ಬಾರಿ ಬುದ್ಧಿಮಾತು ಹೇಳಿದ್ದರಾದರೂ ಅದು ಫಲಿಸಿರಲಿಲ್ಲ. ಒಟ್ಟಿಗೆ ಇರದ ಕಾರಣ, ಡೈವೋರ್ಸ್‌ ನೀಡುವಂತೆ ಪತ್ನಿ ಹುಲಿಗೆಮ್ಮಗೆ ಶರಣಪ್ಪ ಬೆದರಿಕೆ ಹಾಕುತ್ತಿದ್ದ. ಈ ವಿಚಾರವಾಗಿ ಮಾತನಾಡಲು ಸಂಧಾನಕ್ಕೆಂದು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿನ ಪತ್ನಿಯ ತಂದೆ (ಮಾವ) ಹಾಗೂ ಮೂವರು ಸಂಬಂ​ಕರಿಗೆ ನಾರಾಯಣಪುರದ ತನ್ನ ನಿವಾಸಕ್ಕೆ ಆರೋಪಿ ಶರಣಪ್ಪ ಕರೆಯಿಸಿ ಕೊಂಡಿದ್ದಾನೆ. ಹುಲಿಗೆಮ್ಮಳ ಡೈವೋರ್ಸ್‌ ನೀಡಿಸುವಂತೆ ನೀವು ಸಹಕರಿಸಿ ಎಂದು ಅವರಿಗೆ ಹೇಳಿದ್ದಾನೆ, ಇದಕ್ಕೆ ಅವರು ಒಪ್ಪದಿದ್ದಾಗ, ಮನೆಯಲ್ಲಿನ ಆ ಕೋಣೆಯಿಂದ ಹೊರಗಡೆ ಬಂದು, ಕೋಣೆಯ ಬಾಗಿಲಿಗೆ ಬೀಗ ಹಾಕಿ ಕಿಟಕಿಯ ಮೂಲಕ ಅವರ ಮೇಲೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ್ದಾನೆ. ಈ ಕೃತ್ಯ ನಡೆಸಲಿಂದೇ ಆತ ಪೂರ್ವ ಯೋಜಿತವಾಗಿ ಕ್ಯಾನ್‌ ಒಂದರಲ್ಲಿ ಪೆಟ್ರೋಲ್‌ ತಂದು ಸಂಗ್ರಹಿಸಿಟ್ಟಿದ್ದ ಎನ್ನಲಾಗುತ್ತಿದೆ.

Bengaluru Crime: ಆ್ಯಪ್‌ ಲೋನ್‌ ತೀರಿಸಲು ಸರಗಳ್ಳತನಕ್ಕೆ ಇಳಿದ ಯುವತಿ..!

ಮನೆಯಲ್ಲಿ ಉರಿಯುತ್ತಿದ್ದ ಬೆಂಕಿ ಕಂಡು ಹಾಗೂ ಚೀರಾಟ ಕೇಳಿ ಅಲ್ಲಿನ ಜನರು, ಬೆಂಕಿ ನಂದಿಸುವ ಪ್ರಯತ್ನ ಕೇಳಿದರಲ್ಲದೆ ಪೊಲೀಸ್‌ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಗಾಯಾಳುಗಳಾದ ಸಿದ್ರಾಮಪ್ಪ ಮುರಾಳ, ಮುತ್ತಪ್ಪ ಮುರಾಳ, ಶರಣಪ್ಪ ಸರೂರ ಹಾಗೂ ನಾಗಪ್ಪ ಎಂಬುವವರ ಪೈಕಿ, ನಾಗಪ್ಪ ತೀವ್ರ ತರಹದ ಗಾಯಗಳಿಂದ ಮೃತಪಟ್ಟಿದ್ದಾರೆ. ಮೂವರಿಗೆ ಲಿಂಗಸೂಗೂರಿನ ಸರಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿಸಿ, ನಂತರ ಹೆಚ್ಚಿನ ಚಿಕಿತ್ಸೆಗೆಂದು ಸಮೀಪದ ರಾಯಚೂರು ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.

click me!