Crime News: 15 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ 31 ವರ್ಷದ ವ್ಯಕ್ತಿಯೊಬ್ಬ ತನ್ನ ಪತ್ನಿಯ ಸಹಾಯದಿಂದ ಅತ್ಯಾಚಾರವೆಸಗಿರುವ ಆಘಾತಕಾರಿ ಘಟನೆ ದೆಹಲಿಯಲ್ಲಿ ನಡೆದಿದೆ
ನವದೆಹಲಿ (ಜು. 17): 15 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ 31 ವರ್ಷದ ವ್ಯಕ್ತಿಯೊಬ್ಬ ತನ್ನ ಪತ್ನಿಯ ಸಹಾಯದಿಂದ ಅತ್ಯಾಚಾರವೆಸಗಿರುವ ಆಘಾತಕಾರಿ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ಈ ಘೋರ ಕೃತ್ಯವೆಸಗಿದ ಮೂರು ದಿನಗಳ ಬಳಿಕ ಆರೋಪಿ ಸಂತ್ರಸ್ತೆಯ ಬಾಯಿಗೆ ಕೆಲವು ದ್ವರ ಪದಾರ್ಥವೊಂದನ್ನು ಸುರಿದಿದ್ದು ನಂತರ ಅಕೆಯನ್ನು ಆಸ್ಪತ್ರೆಗೆ ಸೇರಿಸಿದ್ದಾನೆ. ಜುಲೈ 2 ರಂದು ದೆಹಲಿಯ ನಂಗ್ಲೋಯ್ ಪ್ರದೇಶದಲ್ಲಿ ಶೂ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ಜೈ ಪ್ರಕಾಶ್ ಎಂಬಾತ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಉಪ ಕಮಿಷನರ್ (ಹೊರ) ಸಮೀರ್ ಶರ್ಮಾ ಮಾತನಾಡಿ, “ಜುಲೈ 5 ರಂದು ಸಂತ್ರಸ್ತೆಯನ್ನು ಮನೆಗೆ ಹೋಗುತ್ತಿದ್ದಾಗ ಆರೋಪಿ ಜೈ ಪ್ರಕಾಶ್ ತಡೆದು ಬಲವಂತವಾಗಿ ಸ್ವಲ್ಪ ದ್ರವವನ್ನು ಅವಳ ಬಾಯಿಗೆ ಸುರಿದಿದ್ದಾನೆ. ಹುಡುಗಿ ಹೇಗೋ ಮನೆಗೆ ತಲುಪಿ ಪ್ರಜ್ಞಾಹೀನಳಾಗಿದ್ದಳು. ನಂತರ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು" ಎಂದು ತಿಳಿಸಿದ್ದಾರೆ.
ಜುಲೈ 15 ರಂದು ಸಂತ್ರಸ್ತೆಯ ಸಹೋದರ ಪಿಸಿಆರ್‌ಗೆ ಮಾಹಿತಿ ನೀಡಿದ ನಂತರ ವಿಷಯ ಬೆಳಕಿಗೆ ಬಂದಿದೆ. ಈ ನಡುವೆ ಆರೋಪಿ ಜೈ ಪ್ರಕಾಶ್‌ನನ್ನು ಪೊಲೀಸರು ಬಂಧಿಸಿದ್ದಾರೆ. "ಈ ವಿಷಯದ ಬಗ್ಗೆ ಅಗತ್ಯ ಕ್ರಮಕ್ಕಾಗಿ ಪಿಸಿಆರ್ ಕರೆಯನ್ನು ಒಬ್ಬ ಮಹಿಳಾ ಸಬ್ ಇನ್ಸ್‌ಪೆಕ್ಟರ್‌ಗೆ ನೀಡಲಾಗಿದೆ" ಎಂದು ಡಿಸಿಪಿ ಶರ್ಮಾ ಹೇಳಿದ್ದಾರೆ.
ಇದನ್ನೂ ಓದಿ: ಅಪ್ರಾಪ್ತೆಯ ಅತ್ಯಾಚಾರಗೈದ ಅಪ್ಪ, ಇಬ್ಬರು ಸ್ನೇಹಿತರು 20 ವರ್ಷ ಜೈಲುಪಾಲು!
ಸಂತ್ರಸ್ತೆ ಏಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು ಆರಂಭದಲ್ಲಿ ಹೇಳಿಕೆ ನೀಡಲು ಅನರ್ಹರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಶನಿವಾರ ಅಂದರೆ ಜುಲೈ 16ರಂದು ವೈದ್ಯರು ಆಕೆ ಹೇಳಿಕೆಗೆ ಅರ್ಹರು ಎಂದು ತಿಳಿಸಿದ ಬೆನ್ನಲ್ಲೇ ಎನ್‌ಜಿಒ ಸದಸ್ಯರೊಬ್ಬರ ಸಮ್ಮುಖದಲ್ಲಿ ಬಾಲಕಿಯ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದರ ಬೆನ್ನಲ್ಲೇ ಇಂದು ಎನ್‌ಜಿಒ ಸದಸ್ಯರೊಬ್ಬರ ಸಮ್ಮುಖದಲ್ಲಿ ಬಾಲಕಿಯ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಂತ್ರಸ್ತೆಯ ಹೇಳಿಕೆಯ ಆಧಾರದ ಮೇಲೆ ಆರೋಪಿ ಜೈ ಪ್ರಕಾಶ್ ವಿರುದ್ಧ ನಂಗ್ಲೋಯ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 307 (ಕೊಲೆ ಯತ್ನ), 376 (ಅತ್ಯಾಚಾರ), ಮತ್ತು 34 (ಸಾಮಾನ್ಯ ಉದ್ದೇಶ) ಹಾಗೂ ಫೋಸ್ಕೋ ಕಾಯಿದೆಯ ಸೆಕ್ಷನ್ 6ರಮ ಅನ್ವಯ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ: 10 ವರ್ಷದ ಬಾಲಕಿಯ ರೇಪ್ ಮಾಡಿ ಗರ್ಭಿಣಿ ಮಾಡಿದ ವ್ಯಕ್ತಿ, ಅಬಾರ್ಷನ್ ಮಾಡಿಸಿ ಸಿಕ್ಕಿಬಿದ್ದ
15 ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಯತ್ನದ ಬಗ್ಗೆ ಆಯೋಗವು ದೂರು ಸ್ವೀಕರಿಸಿದೆ ಎಂದು ಡಿಸಿಡಬ್ಲ್ಯೂ ಮುಖ್ಯಸ್ಥ ಮಲಿವಾಲ್ ಹೇಳಿದ್ದಾರೆ. ಬಾಲಕಿಯ ತಂದೆ ಆಯೋಗದ ಮೊರೆ ಹೋಗಿದ್ದು, ಇವರು ದಿನಗೂಲಿ ಕಾರ್ಮಿಕರಾಗಿದ್ದು, ತನ್ನ ಕುಟುಂಬದೊಂದಿಗೆ ದೆಹಲಿಯಲ್ಲಿ ವಾಸಿಸುತ್ತಿರುವುದಾಗಿ ತಿಳಿಸಿದ್ದಾರೆ.
ತನ್ನ ಅಪ್ರಾಪ್ತ ಮಗಳು ಶೂ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದಳು ಎಂದು ಅವರು ಡಿಸಿಡಬ್ಲ್ಯೂಗೆ ತಿಳಿಸಿದರು. ಒಂದು ದಿನ, ಶೂ ಫ್ಯಾಕ್ಟರಿಯ ಗುತ್ತಿಗೆದಾರನು ತನ್ನ ಹೆಂಡತಿಯ ಅನಾರೋಗ್ಯದ ನೆಪದಲ್ಲಿ ತನ್ನ ಮಗಳನ್ನು ತನ್ನ ಮನೆಗೆ ಕರೆದೊಯ್ದು ಅಲ್ಲಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ದೂರುದಾರರು ಆರೋಪಿಸಿದ್ದಾರೆ.