Bengaluru Crime: ಟೆಸ್ಟ್ ಡ್ರೈವ್ ನೆಪದಲ್ಲಿ ಸ್ಕೂಟರ್, ದುಡ್ಡು ಸಮೇತ ಪರಾರಿಯಾದ ಬೆಂಗಳೂರು ಚಾಲಾಕಿ!

By Suvarna NewsFirst Published Jan 18, 2022, 7:52 PM IST
Highlights

* ಟೆಸ್ಟ್ ಡ್ರೈವ್ ನೆಪದಲ್ಲಿ ಡಿಕ್ಕಿಯಲ್ಲಿಟ್ಟಿದ್ದ 1 ಲಕ್ಷ ಹಣ ಸಮೇತ ಸ್ಕೂಟರ್ ಕದ್ದು ಎಸ್ಕೇಪ್

* ಬೈಕ್‌‌ ಖರೀದಿ‌ ಸೋಗಿನಲ್ಲಿ‌ ತಾನು ಹೇಳಿದ ಜಾಗಕ್ಕೆ‌ ಕರೆಯಿಸಿಕೊಂಡು ಕಳ್ಳತನ

* ಹೊಂಡಾ ಡಿಯೊ  ಮಾರಾಟ ಮಾಡುವುದಾಗಿ ಒಎಲ್ಎಕ್ಸ್ ಪೋಸ್ಟ್ ಹಾಕಿದ್ದ ಮಧು

* ಪೀಣ್ಯದ ವಿಜಿನಾಪುರದ ಟಾಟಾ ಏಸ್ ಚಾಲಕ ಮಧು

ಬೆಂಗಳೂರು(ಜು. 18)   ಎಂಥೆಂತ ಕಿರಾತಕರು ಇರುತ್ತಾರೆ.  ಟೆಸ್ಟ್ ಡ್ರೈವ್ ನೆಪದಲ್ಲಿ ಡಿಕ್ಕಿಯಲ್ಲಿಟ್ಟಿದ್ದ 1 ಲಕ್ಷ ಹಣ (Money) ಸಮೇತ ಸ್ಕೂಟರ್ ಕದ್ದು ಚಾಲಾಕಿ‌ ಎಸ್ಕೇಪ್ ಆಗಿದ್ದಾನೆ. ಬೈಕ್‌‌ ಖರೀದಿ‌ ಸೋಗಿನಲ್ಲಿ‌ ತಾನು ಹೇಳಿದ ಜಾಗಕ್ಕೆ‌ ಕರೆಯಿಸಿಕೊಂಡು ಕಳ್ಳತನ ಮಾಡಿದ್ದಾನೆ.

ಹೊಂಡಾ ಡಿಯೊ  ಮಾರಾಟ ಮಾಡುವುದಾಗಿ ಒಎಲ್ಎಕ್ಸ್ ಮಧು ಎಂಬುವರು ಪೋಸ್ಟ್ ಹಾಕಿದ್ದರು.  ಪೀಣ್ಯದ ವಿಜಿನಾಪುರದ ಟಾಟಾ ಏಸ್ ಚಾಲಕ ಮಧು ತನ್ನ  ಚಿಕ್ಕಪ್ಪನಿಂದ‌ ಪಡೆ  1.50 ಲಕ್ಷ ರೂಪಾಯಿ ಸಾಲ ಪಡೆದಿದ್ದ ಮಧು ಸಾಲ ತೀರಿಸಲು ಓಎಲ್ ಎಕ್ಸ್ (OLX)ಜಾಲತಾಣದಲ್ಲಿ ಬೈಕ್ ಮಾರಾಟ ಮಾಡುವ ಪೋಸ್ಟ್ ಹಾಕಿದ್ದರು.

ಜ.14ರಂದು ಕರೆ ಮಾಡಿದ ಆರೋಪಿ ಹೊಂಡಾ‌ ಸ್ಕೂಟರ್ ಖರೀದಿಸುವುದಾಗಿ ಹೇಳಿ‌ ನಾಗಸಂದ್ರಕ್ಕೆ ಕರೆಯಿಸಿಕೊಂಡಿದ್ದ. ಟೆಸ್ಟ್ ಡ್ರೈವ್ (escapes with scooter) ನೆಪದಲ್ಲಿ ಗಾಡಿ ಚಲಾಯಿಸಿ ಎಸ್ಕೇಪ್ ಆಗಿದ್ದಾನೆ. ಬೈಕ್ ಡಿಕ್ಕಿಯಲ್ಲಿದ್ದ 1 ಲಕ್ಷ ಹಣ ಸಮೇತ ಎಸ್ಕೇಪ್ ಆಗಿದ್ದಾನೆ.  ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಓಮಿಕ್ರೋನ್ ನಡುವೆ ಎಚ್ಚರಿಕೆ ಅಗತ್ಯ:   ಒಂದು ಕಡೆ ದೇಶದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ.  ಈನ ನಡುವೆ ಸರ್ಕಾರ ಒಂದು ಎಚ್ಚರಿಕೆಯನ್ನು ನೀಡಿದೆ.  ಗೃಹ ವ್ಯವಹಾರಗಳ ಸಚಿವಾಲಯವು (MHA) ಎಲ್ಲ ನಾಗರಿಕರಿಗೆ ಎಚ್ಚರಿಕೆ ರವಾನಿಸಿದ್ದು ಪ್ರಮುಖ ಮಾಹಿತಿಯನ್ನು ತಿಳಿದುಕೊಳ್ಳಲೇಬೇಕು.

ಓಮಿಕ್ರೋನ್ ಪರೀಕ್ಷೆ ಮಾಡಿ ವರದಿ ಕೊಡುತ್ತೇವೆ ಎಂದು ನಿಮ್ಮನ್ನು ಸುಲಿಗೆ ಮಾಡಬಹುದು  ಎಂದು ಕೇಂದ್ರ ಸರ್ಕಾರ ಎಚ್ಚರಿಕೆ  ನೀಡಿತ್ತು. .  Omicron ರೂಪಾಂತರವನ್ನು ಪತ್ತೆಹಚ್ಚಲು ಉಚಿತ ಪರೀಕ್ಷೆಗಳನ್ನು ನೀಡುತ್ತೇವೆ ಎಂದು ಕೆಲವರು  ವಿವಿಧ ಮಾರ್ಗಗಳ ಮೂಲಕ ಸಂಪರ್ಕ ಮಾಡಬಹುದು. ಡಿಜಿಟಲ್ ದುನಿಯಾದಲ್ಲಿ ಪ್ರತಿ ಹೆಜ್ಜೆಯನ್ನು ಎಚ್ಚರಿಕೆಯಿಂದ ಇಡಬೇಕು ಎಂದು ತಿಳಿಸಲಾಗಿದೆ.

ಸರ್ಕಾರದ ಅಧಿಕೃತ ಮುದ್ರೆ  ಇರುವ ಪ್ರಮಾಣಪತ್ರವನ್ನೇ ನೀಡುತ್ತೇವೆ ಎಂದು ಹೇಳುತ್ತಾರೆ. ನಕಲಿ ವೆಬ್ ತಾಣಗಳನ್ನು ಕ್ರಿಯೆಟ್ ಮಾಡಿಕೊಂಡು ನಿಮ್ಮ ಬಳಿ ಧಾವಿಸಬಹುದು ಎಂಬ ಎಚ್ಚರಿಕೆಯನ್ನು ಸದಾ ನೆನಪಿನಲ್ಲಿ ಇಟ್ಟುಕೊಳ್ಳಬೇಕು.

ಹೆಚ್ಚಾದ ಸೈಬರ್ ಅಪರಾಧ:  ಸೈಬರ್ ಅಪರಾಧಕ್ಕೆ ತಡೆ ಇಲ್ಲ: ಸೈಬರ್ ಅಪರಾಧ  ಆನ್ ಲೈನ್  ವಂಚನೆ ಪ್ರಕರಣ ಬಗ್ಗೆ ಪ್ರತಿ ದಿನ ವರದಿಯಾಗುತ್ತಲೇ ಇರುತ್ತವೆ. ನಿವೃತ್ತ ಬ್ಯಾಂಕ್  ಅಧಿಕಾರಿಗೆ ದೊಡ್ಡ ಮೊತ್ತದ ವಂಚನೆ ಮಾಡಿದ್ದರು.  ನಿವೃತ್ತ  ಮಹಿಳಾ ಅಧಿಕಾರಿಗೆ ನೀವು 7.5 ಲಕ್ಷ ರೂಪಾಯಿ ಮೌಲ್ಯದ ಲಾಟರಿ ಗೆದ್ದಿದ್ದೀರಿ ಎಂದು ನಂಬಿಸಿ 12.5 ಲಕ್ಷ ರೂಪಾಯಿ ವಂಚಿಸಿದ್ದರು.

ನೀವು  ನಾಪ್ಟೋಲ್ ಕಂಪನಿಯಿಂದ ಲಾಟರಿ ಗೆದ್ದಿದ್ದೀರಿ ಎಂದು ಹೇಳಿದ್ದು ಮಹಿಳೆ ನಿವಾಸದ ವಿಳಾಸಕ್ಕೆ ಸ್ಕ್ರಾಚ್ ಕಾರ್ಡ್ ಕಳಿಸಿದ್ದಾರೆ.  ಹಣ ಪಡೆದುಕೊಳ್ಳಲು ಮೊಬೈಲ್ ನಂಬರ್ ಗೆ ಕರೆ ಮಾಡಿ ಎಂದು  ನಂಬರ್ ನೀಡಿದ್ದಾರೆ. ನಂಬಿ ಕರೆ ಮಾಡಿದ ಮಹಿಳೆ ಹಣ ಕಳೆದುಕೊಂಡಿದ್ದರು. ಡಿಜಿಟಲ್ ಯುಗದಲ್ಲಿ ಮಾಹಿತಿಗಳು ಆರಾಮಾಗಿ ವಂಚಕರ ಕೈಗೆ ಸಿಗುತ್ತದೆ. ಹಾಗಾಗೊ ಒಟಿಪಿ, ಸ್ಕಾನ್ ಸೇರಿದಂತೆ ಅನೇಕ ವಿಚಾರಗಳಲ್ಲಿ ಎಚ್ಚರಿಕೆ ತೆಗೆದುಕೊಳ್ಳಬೇಕು .

click me!