
ಲಕ್ನೋ(ಡಿ. 29) ಹೆಣ್ಣಿನ ಮೇಲಿನ ಶೋಷಣೆಗೆ ಮಾತ್ರ ಕೊನೆ ಇಲ್ಲ. ಮದುವೆಯಾಗಿ ಮೂರು ವರ್ಷವಾದರೂ ಮಗು ಹೆರಲಿಲ್ಲ ಎಂಬ ಕಾರಣಕ್ಕೆ ಪಾಪಿ ಪತಿ ಹೆಂಡತಿಯನ್ನು ಹತ್ಯೆ ಮಾಡಿದ್ದಾನೆ.
ವರದಕ್ಷಿಣೆ ಕಿರುಕುಳವನ್ನು ನೀಡುತ್ತಿದ್ದ ಪತಿರಾಯ ಹೀನ ಕೆಲಸ ಮಾಡಿದ್ದಾನೆ. ಉತ್ತರ ಪ್ರದೇಶ ಬಿಜ್ನೋರ್ ಮುಕಾರ್ಪುರಿ ನಿವಾಸಿ ರೋಹಿತ್ ಕುಮಾರ್ ಮೂರು ವರ್ಷದ ಹಿಂದೆ ಪ್ರೀತಿ ಎಂಬಾಕೆಯನ್ನು ಮದುವೆಯಾಗಿದ್ದ.
ಪ್ರವಾಸಕ್ಕೆ ಬಂದ ಹದಿನೆಂಟರ ಯುವತಿ ಮೇಲೆ ಎರಗಿದ ಆಟೋ ಚಾಲಕ
ಮದುವೆಯಾದ ಮೇಲೆ ಗಂಡನ ಕುಟುಂಬದವರು ಯುವತಿಗೆ ಪ್ರತಿದಿನ ಕಿರುಕುಳ ನೀಡಲು ಆರಂಭಿಸಿದ್ದಾರೆ. ಮೂರು ವರ್ಷವಾದರೂ ಗರ್ಭ ಧರಿಸಲು ಸಾಧ್ಯವಾಗಿರಲಿಲ್ಲ.
ಗಂಡ ಮತ್ತು ಕುಟುಂದವರು ಆಖೆಯನ್ನು ಹತ್ಯೆ ಮಾಡಿ ನೇಣು ಹಾಕಿಕೊಂಡಿದ್ದಾಳೆ ಎಂದು ಬಿಂಬಿಸುವ ಪ್ರಯತ್ನ ಮಾಡಿದ್ದರು. ಆದರೆ ಪೊಲೀಸರ ತನಿಖೆಯಲ್ಲಿ ಎಲ್ಲವೂ ಬಯಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ