
ಬುಲಂದ್‌ಶಹರ್(ಡಿ. 29) ಕೊರೋನಾ ಪಾಸಿಟಿವ್ ಇದ್ದ ನಾಲ್ವರು ಕೈದಿಗಳು ಬುಲಂದ್‌ಶಹರ್‌ನ ಆಸ್ಪತ್ರೆಯಿಂದ ಭಾನುವಾರ ಪರಾರಿಯಾಗಿದ್ದರು. ನಾಲ್ವರಲ್ಲಿ ಮೂವರು ಮತ್ತೆ ಸೆರೆ ಸಿಕ್ಕಿದ್ದು ಇನ್ನೊಬ್ಬನ ಪತ್ತೆಗೆ ಬಲೆ ಬೀಸಲಾಗಿದೆ.
ಪರಾರಿಯಾದವರಲ್ಲಿ ಖುರ್ಜಾ ನಗರ ಪ್ರದೇಶದಿಂದ ಮತ್ತು ಮತ್ತೊಬ್ಬನನ್ನು ಕೊಟ್ವಾಲಿ ದೇಹತ್‌ನಿಂದ ಬಂಧಿಸಲಾಗಿದೆ. ನಾಲ್ವರನ್ನು ಡಿಸೆಂಬರ್ 19 ರಂದು ಬಂಧಿಸಲಾಗಿತ್ತು. ವಂಚನೆ ಪ್ರಕರಣದಲ್ಲಿ ಇಬ್ಬರು, ಕಳ್ಳತನ ಕೇಸ್ ನಲ್ಲಿ ಒಬ್ಬ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಮತ್ತೊಬ್ಬನನ್ನು ಬಂಧಿಸಲಾಗಿತ್ತು.
ರೂಪಾಂತರಿ ವೈರಸ್ ನಿಂದ ಬಚಾವಾಗುವ ಪ್ಲಾನ್ ಹೇಳಿದ ICMR
ಆಸ್ಪತ್ರೆಯ ಎರಡನೇ ಮಹಡಿಯಿಂದ ಹಾರಿ ತಪ್ಪಿಸಿಕೊಂಡಿದ್ದರು ಮೋನು, ಅವರ ಸಹೋದರ ರಿಂಕು, ಯಮೀನ್ ಮತ್ತು ಅರ್ಷದ್ ಎಸ್ಕೇಪ್ ಆಗಿದ್ದರು. ಶೋಧ ನಡೆಸಿದ ಪೊಲೀಸರು ಮೋನು, ರಿಂಕು ಮತ್ತು ಯಮೀನ್ ನನ್ನು ಸೆರೆ ಹಿಡಿದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ