Hubballi ಊಟ ಮಾಡಿ ಮನೆಯಿಂದ ಹೊರ ಹೋದವ ಸಿಕ್ಕಿದ್ದು ಹೆಣವಾಗಿ!

By Suvarna News  |  First Published May 14, 2022, 5:12 PM IST

ಹೆಂಡತಿ  ಮೂರು ತಿಂಗಳ ಗರ್ಭಿಣಿ ಇನ್ನೇನು ಮನೆಗೆ ಕಂದನ ಆಗಮಕ್ಕೆ ಎದುರು ನೋಡುತ್ತಾ ಹೆಂಡತಿ ಹಾಗೂ ಮನೆಯವರ ಜೊತೆಗೆ ಚನ್ನಾಗಿಯೇ ಜೀವನ ನಡೆಸುತ್ತಿದ್ದಾತ ಹುಬ್ಬಳ್ಳಿಯಲ್ಲಿ ಕೊಲೆಯಾಗಿದ್ದಾನೆ.


ಹುಬ್ಬಳ್ಳಿ (ಮೇ.14): ಆತ ಒಂದು ವರ್ಷದ ಹಿಂದೆಯಷ್ಟೆ ಮದುವೆಯಾಗಿದ್ದ. ಆತನ ಹೆಂಡತಿ ಈಗ ಮೂರು ತಿಂಗಳ ಗರ್ಭಿಣಿ (pregnant). ಇನ್ನೇನು ಮನೆಗೆ ಕಂದನ ಆಗಮಕ್ಕೆ ಎದುರು ನೋಡುತ್ತಾ ಹೆಂಡತಿ ಹಾಗೂ ಮನೆಯವರ ಜೊತೆಗೆ ಚನ್ನಾಗಿಯೇ ಜೀವನ ನಡೆಸುತ್ತಿದ್ದ. ತಾನಾಯಿತು ತನ್ನ ಕೆಲಸ ಆಯ್ತು ಎಂದುಕೊಂಡು ಹೊಲ ಮನೆ ಕೆಲಸ ಮಾಡುತ್ತಿದ್ದವ ಈಗ ರಸ್ತೆ ಪಕ್ಕದಲ್ಲೇ ಬರ್ಬರವಾಗಿ ಕೊಲೆಯಾಗಿ (Murder) ಹೋಗಿದ್ದಾನೆ. 

 ಹುಬ್ಬಳ್ಳಿ ತಾಲೂಕಿನ ನೂಲ್ವಿ ಗ್ರಾಮದ ಹೊರವಲಯದ ಅದರಗುಂಚಿ ಗ್ರಾಮದ ಮಧ್ಯದಲ್ಲಿರುವ ರಸ್ತೆ ಪಕ್ಕದಲ್ಲಿಯೇ ಶಂಭು ಕಮಡೊಳ್ಳಿ (34) ಎಂಬಾತನನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿಯೇ ಕೊಲೆ ಮಾಡಲಾಗಿದೆ ಎಂಬುವಂತ ಶಂಕೆ ವ್ಯಕ್ತವಾಗಿದೆ.

Tap to resize

Latest Videos

ಹೋದ ವರ್ಷವಷ್ಟೇ ಮದುವೆಯಾಗಿದ್ದ ಶಂಭು, ಹೊಲ ಮನೆ ಕೆಲಸ ಮಾಡಿಕೊಂಡ ತಾಯಿ ಹಾಗೂ ಹೆಂಡತಿ ಜೊತೆಗೆ ಚೆನ್ನಾಗಿಯೇ ಇದ್ದ ಆದರೆ ಅದ್ಯಾವ ವಕ್ರದೃಷ್ಟಿ ಆ ಕುಟುಂಬದ ಮೇಲೆ ಬಿದ್ದಿತೋ ಗೊತ್ತಿಲ್ಲ. ಶಂಭು ಕಮಡೊಳ್ಳಿ ಈಗ ಭೀಕರವಾಗಿ ಕೊಲೆಯಾಗಿ ಹೋಗಿದ್ದಾನೆ. ಆದರೆ ಆತನ ತಾಯಿ ಮಲ್ಲವ್ವ ಮಾತ್ರ ಈ ಕೊಲೆಯ ಹಿಂದೆ  ಕೈವಾಡವಿದೆ ಎಂಬುವಂತೇ ತನ್ನ ಮನದಾಳದ ಮಾತನ್ನು ದುಃಖದಲ್ಲಿಯೇ ಹೊರ ಹಾಕಿದ್ದಾಳೆ.

ಕಾರಿನಲ್ಲಿ ಇಟ್ಟಿದ್ದ ಲಕ್ಷಾಂತರ ರೂಪಾಯಿ ಹಣ ಎಗರಿಸಿದ ಕಳ್ಳರು!

ಇನ್ನೂ ಮನೆಯಿಂದ ಊಟ ಮಾಡಿ, ಹೊರಗಡೆ ಹೋಗಿ ಬರುತ್ತೇನೆ ಎಂದು ಹೆಂಡತಿಗೆ ಹೇಳಿ ಹೋದ ವ್ಯಕ್ತಿ ಬೆಳಿಗ್ಗೆ ಪತ್ತೆಯಾಗಿದ್ದು ಮಾತ್ರ ಹೆಣವಾಗಿ. ಮಡದಿಯ ಜೊತೆ ಮಾತನಾಡಿ ಊಟ ಮುಗಿಸಿಕೊಂಡು ಹೋದ ಶಂಭುವಿನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಊರಿಗೆ ಊರೇ ಬೆಚ್ಚಿ ಬಿದ್ದಿದೆ. ಯಾವುದೇ ಗಲಾಟೆ ಹಾಗೂ ಜಗಳ ಇಲ್ಲದೇ ಶಾಂತವಾಗಿದ್ದ ನೂಲ್ವಿಯ ಹೊರ ವಲಯದಲ್ಲಿ ನೆತ್ತರು ಹರಿದಿದೆ. ಗಂಡನ ಸಾವಿನ ಸುದ್ಧಿ ತಿಳಿಯುತ್ತಿದ್ದಂತೆಯೇ ಮಡದಿ ಗಾಬರಿಗೊಂಡಿದ್ದಾಳೆ. ಈ ಕೊಲೆಯ ಬಗ್ಗೆ ನನಗೆ ಗೊತ್ತಾಗಿದ್ದು ಬೆಳಿಗ್ಗೆಯೇ ಎನ್ನುತ್ತಿದ್ದಾಳೆ ಮೃತ ಶಂಭುನ ಹೆಂಡತಿ.

ಇನ್ನೂ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ ಕೊಲೆ ನಡೆದಿರುವ ಬಗ್ಗೆ ಈಗಾಗಲೇ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಲೆಯ ಬಗ್ಗೆ ತನಿಖೆ ನಡೆಸಿ ಕೊಲೆ ಮಾಡಿದ ಆರೋಪಿಗಳನ್ನು ಬಂಧಿಸುವುದಾಗಿ ಕೂಡ ಭರವಸೆ ನೀಡಿದ್ದಾರೆ.

ಒಟ್ಟಾರೆ ಶಂಭು ಕಮಡೋಳ್ಳಿ ಕೊಲೆಗೆ ಕೌಟುಂಬಿಕ ಕಾರಣ ಎನ್ನಲಾಗುತ್ತಿದೆ. ಆದ್ರೇ ಆಸ್ತಿ ವಿಚಾರಕ್ಕೂ ಕೊಲೆಯಾಗಿರಬುದು ಅಂತಾರೆ ಗ್ರಾಮಸ್ಥರು. ಶಾಂತವಾಗಿದ್ದ ಊರಲ್ಲಿ ನೆತ್ತರು ಹರಿಸಿದ ದುಷ್ಕರ್ಮಿಗಳಿಗೆ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸ್ ಸೂಕ್ತ ತನಿಖೆ ನಡೆಸಿ‌ ನೈಜ ಆರೋಪಿಗಳ ಎಡೆಮುರಿ ಕಟ್ಟು ಮೂಲಕ ಮೃತನ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕಿದೆ.

Chitradurga ರಾಗಿ ಖರೀದಿ ಕೇಂದ್ರ ಬಂದ್ ನಿಂದ ರೈತರು ಕಂಗಾಲು

ಕುಡುಕ ಗಂಡ ಹೆಂಡತಿಯ ಹೆಣ ಮಲಗಿಸಿದ, ಪಾಪ ಪ್ರಜ್ಞೆಯಲ್ಲಿ ನೇಣಿಗೆ ಶರಣಾದ! : ಆತನದ್ದು ಒಂದೇ ಚಟ ದಿನದ 24 ಗಂಟೆಯೂ ಸಹ ಅವನಿಗೆ ಎಣ್ಣೆಯದ್ದೆ ಚಿಂತೆ. ಎಣ್ಣೆಯಾಗಿ ಆತ ಮಾಡದ ಕೆಲಸ ಇಲ್ಲ ಅಡವಿಡದ ವಸ್ತು ಇಲ್ಲ. ಹೀಗೆ ಎಣ್ಣೆಗಾಗಿ ಹಪಹಪಿಸುತ್ತದ್ದ ಆತ ಮನೆಗೆ ಬಂದು ಹೆಂಡತಿಯ ಬಳಿ ಹಣ ಕೇಳಿದ್ದಾನೆ. ಹಣ ನೀಡೊಲ್ಲ ಎಂದು ಎದುತ್ತರ ನೀಡಿದ ಹೆಂಡತಿಯನ್ನ ಕೊಂದು ಪಾಪ ಪ್ರಜ್ಞೆಯಲ್ಲಿ ನೇಣಗೆ ಶರಣಾದ ಪತಿ! 

ಬೆಳಗಾವಿ (Belagavi) ಜಿಲ್ಲೆಯ ರಾಯಭಾಗ ತಾಲೂಕಿನ ಹಂದಿಗುಂದ ಗ್ರಾಮದ ಬಾಳವ್ವ ಮುತ್ತಪ್ಪ ಬಿರಾಜ್ (33) ತೋಟದ ವಸತಿಯಲ್ಲಿ ತನ್ನ ಮೂರು ಮಕ್ಕಳು ಮತ್ತು ಗಂಡನೊಂದಿಗೆ ವಾಸವಾಗಿದ್ದಳು.‌ ಕಳೆದ ಮಂಗಳವಾರ ಮುತ್ತಪ್ಪ‌ ಸಂಜೆ ಹೊತ್ತಿಗೆ ಎಣ್ಣೆ ಏರಿಸಿಕೊಂಡು ಅರೆಬರೆ ನಶೆಯಲ್ಲಿ ಮನೆಯ ಹಾದಿ ಹಿಡಿದಿದ್ದ ಸಂಬಂಧಿಕರೊಬ್ಬರು ಅಪಘಾತದಲ್ಲಿ ತೀರಿ ಹೋಗಿದ್ದರಿಂದ ಅವರ ಅಂತ್ಯಸ್ಕಾರಕ್ಕಾಗಿ ಸಂಬಂಧಿಕರು ಅಕ್ಕಪಕ್ಕದ ಮನೆಯವರು ಹೋಗಿದ್ದರು.‌

ಈ ಸಮಯಕ್ಕೆ ಮನೆಗೆ ಬಂದ ಮುತ್ತಪ್ಪ ಹೆಂಡತಿನ್ನ ಹಣ ಕೊಡುವಂತೆ ಕಾಡಲು ಆರಂಭಿಸಿದ್ದಾನೆ. ಯಾವುದೇ ಕಾರಣಕ್ಕೂ ಹಣ ನೀಡಲ್ಲ ಅಂತ ಬಾಳವ್ವ ಮುತ್ತಪ್ಪನೊಂದಿಗೆ ವಾದಿಸಿದ್ದಾಳೆ ಮೊದಲೇ ಅರೆ ಬರೆ ನಶೆಯಲ್ಲಿದ್ದ ಮುತ್ತಪ್ಪ ಪಕ್ಕದಲ್ಲಿಯೇ ಇದ್ದ ಒನಕೆ ತೆಗೆದುಕೊಂಡು ಬಾಳವ್ವನ ತಲೆಗೆ ಗಂಭೀರವಾಗಿ ಹೊಡೆದಿದ್ದಾ‌ನೆ.‌ ತೀವ್ರ ರಕ್ತಸ್ರಾವವಾಗಿ ಬಾಳವ್ವ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ.. 

click me!