
ಮುಂಬೈ (ಡಿ. 14) ವಾಟ್ಸಪ್ ವಿಡಿಯೋ ಕಾಲ್ ಮಾಡಿ ಯುವಕನೊಬ್ಬ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ನಟಿಯೊಬ್ಬರು ದೂರು ಸಲ್ಲಿಸಿದ್ದಾರೆ. ಮುಂಬೈ ಮೂಲದ ಈ ನಟಿಗೆ ವಾಟ್ಸಪ್ ಮೂಲಕ ವಿಡಿಯೋ ಕಾಲ್ ಮಾಡಿರುವ 20ರ ಹರೆಯದ ಯುವಕನ ಕೃತ್ಯಕ್ಕೆ ನಟಿ ಬೆಚ್ಚಿ ಬಿದ್ದಿದ್ದಾಳೆ.
ನಟಿಗೆ ಅನೌನ್ ನಂಬರ್‌ನಿಂದ ವಾಟ್ಸಪ್ ವಿಡಿಯೋ ಕಾಲ್ ಬಂದಿದೆ. ಎರಡು ಬಾರಿ ಅವರು ಅದನ್ನು ರಿಜೆಕ್ಟ್ ಮಾಡಿದ್ದಾರೆ. ಆದರೆ ಮೂರನೇ ಬಾರಿ ಕರೆ ಬಂದಾಗ ಆಕಸ್ಮಿಕವಾಗಿ ರಿಸೀವ್ ಮಾಡಿದ್ದಾರೆ. ದೃಶ್ಯ ನೋಡಿ ಬೆಚ್ಚಿ ಬಿದ್ದಿದ್ದಾರೆ.
ಜೂಮ್ ಕಾಲ್ ನಲ್ಲಿ ಇದ್ದಾಗಲೆ ಹಸ್ತ ಮೈಥುನ ..ಪತ್ರಕರ್ತ ಸಸ್ಪೆಂಡ್
ಕಾಲ್ ಮಾಡಿದ್ದ ಯುವಕ ಅತ್ತ ಕಡೆಯಿಂದ ಹಸ್ತಮೈಥುನ ಮಾಡಿಕೊಳ್ಳುತ್ತಿದ್ದ. ನನ್ನ ಸ್ಕೀನ್ ಶಾಟ್ ಆತ ತೆಗೆದುಕೊಳ್ಳುತ್ತಾನೆ ಎಂಬ ಭಯದಿಂದ ಕ್ಯಾಮರಾ ಆಫ್ ಮಾಡಿದೆ ಎಂದು ನಟಿ ದೂರಿನಲ್ಲಿ ಹೇಳಿದ್ದಾರೆ.
ಯುವಕನ ಕೃತ್ಯದಿಂದ ಬೇಸತ್ತ ನಟಿಯ ವರ್ಸೋವಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ನೀಡುವ ಸಲುವಾಗಿ ಪೊಲೀಸ್ ಸ್ಟೇಷನ್‌ಗೆ ಹೋಗಿದ್ದಾಗಲೇ ಆ ಯುವಕ ಮತ್ತೊಂದು ಅಶ್ಲೀಲ ವಿಡಿಯೋ ಕಳಿಸಿದ್ದಾನೆ.
ಈ ರೀತಿ ಗೊತ್ತಿಲ್ಲದ ನಂಬರ್ ಗಳಿಂದ ಬರುವ ಕರೆ ಸ್ವೀಕಾರ ಮಾಡಲ್ಲ. ಇದು ಆಕಸ್ಮಿಕವಾಗಿ ರಿಸೀವ್ ಆಗಿತ್ತು. ಈಗ ಆತ ನನ್ನ ಬೆನ್ನು ಹತ್ತಿದ್ದು ರಕ್ಷಣೆ ಕೊಡಿ ಎಂದು ಪೊಲೀಸರ ಮೊರೆ ಹೋಗಿದ್ದಾರೆ.
ನಟಿ ಆತನ ಮೆಸೇಜ್ ಸ್ಕ್ರೀನ್ ಶಾಟ್‌ಗಳನ್ನು ಟ್ವೀಟ್ ಮಾಡಿದ್ದಾರೆ. ಜೊತೆಗೆ ಮುಂಬೈ ಪೊಲೀಸರನ್ನು ಟ್ಯಾಗ್ ಮಾಡಿದ್ದಾರೆ. ನಾನು ವಿದ್ಯಾರ್ಥಿಯಾಗಿದ್ದು ಗೆಳತಿಗೆ ಮಾಡಬೇಕಿದ್ದ ಕರೆ ನಿಮಗೆ ತಪ್ಪಾಗಿ ಬಂದಿದೆ. ದಯವಿಟ್ಟು ಕ್ಷಮಿಸಿ ಎಂದು ಯುವಕ ಬೇಡಿಕೊಳ್ಳುತ್ತಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ