ಮಗನ ಮೇಲಿನ ಸಿಟ್ಟಿಗೆ ವಾಹನಗಳಿಗೆ ಬೆಂಕಿ ಇಟ್ಟ ಅಪ್ಪ/ ಗೆಳತಿಯೊಂದಿಗಿನ ಸಂಬಂಧ ಮುರಿದುಕೊಂಡಿಲ್ಲ ಎಂಬ ಕೋಪ/ ಮಗ ತನ್ನ ಗೆಳತಿಗೆ ಹೊಸ ಬೈಕ್ ಕೊಡಿಸಿದ್ದ/ ಏಕಾಏಕಿ ಏಳು ವಾಹನಗಳಿಗೆ ಬೆಂಕಿ ಇಟ್ಟು ಪರಾರಿ
ಚೆನ್ನೈ (ಡಿ. 14) ಗೆಳತಿಯೊಂದಿಗೆ ಸಂಬಂಧ ಮುರಿದುಕೊಳ್ಳಲು ಒಪ್ಪದ ಮಗನ ಮೇಲಿನ ಸಿಟ್ಟಿಗೆ ಅಪ್ಪ ಕಂಡ ಕಂಡಲ್ಲಿ ಬೆಂಕಿ ಇಟ್ಟಿದ್ದಾನೆ.
52 ವರ್ಷದ ಆಟೋರಿಕ್ಷಾ ಚಾಲಕ ಅಪ್ಪ ತಮಿಳುನಾಡಿನ ಚೆನ್ನೈನ ನ್ಯೂ ವಾಷರ್‌ಮ್ಯಾನ್‌ಪೇಟೆ ಪ್ರದೇಶದಲ್ಲಿ ಏಳು ಮೋಟರ್ ಸೈಕಲ್‌ಗಳಿಗೆ ಬೆಂಕಿ ಹಚ್ಚಿದ್ದಾನೆ.
ಅಕ್ಟೋಬರ್ 14 ರಂದು ಈ ಘಟನೆ ನಡೆದರೂ ಪೊಲೀಸರು ಆಟೋರಿಕ್ಷಾ ಚಾಲಕನನ್ನು ಕನ್ನನ್ ಎಂದು ಗುರುತಿಸಿ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ಅಸಲಿ ಕಾರಣ ಬೆಳಕಿಗೆ ಬಂದಿದೆ. ಡಿಸೆಂಬರ್ 12 ರಂದು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ಕಿಡಿಗೇಡಿಗಳ ಸಿಗರೇಟ್ ಚಟಕ್ಕೆ ರೈತನ ಬೆಳೆ ಭಸ್ಮ
ಕನ್ನನ್ ಮಗ ಅರುಣ್ ಮೀನಾ (ಹೆಸರು ಬದಲಾಯಿಸಲಾಗಿದೆ) ಎಂಬುವರೊಂದಿಗೆ ಲಿವ್ ಇನ್ ನಲ್ಲಿದ್ದ. ಅಪ್ಪನಿಗೆ ಕೋಪ ಇದ್ದು ಆಕೆಯೊಂದಿಗಿನ ಸಂಬಂಧ ಮುರಿದುಕೊಳ್ಳಬೇಕು ಎಂದು ಒತ್ತಾಯ ಮಾಡುತ್ತಿದ್ದ. ಆದರೆ ಮಗ ಒಪ್ಪಿರಲಿಲ್ಲ.
ಒಂದು ದಿನ ಮಗ ಮತ್ತು ಮೀನಾ ಬೈಕ್ ನಲ್ಲಿ ಸಂಚಾರ ಹೊರಟಿದ್ದನ್ನು ಅಪ್ಪ ಕಂಡಿದ್ದಾನೆ. ಮಗನೇ ಆ ಬೈಕ್ ನ್ನು ಆಕೆಗೆ ಗಿಫ್ಟ್ಮ ಕೊಟ್ಟಿರುವುದು ಗೊತ್ತಾಗಿ ಮತ್ತಷ್ಟು ಸಿಟ್ಟು ನೆತ್ತಿಗೇರಿದೆ. ಇದೇ ಕಾರಣಕ್ಕೆ ಅರುಣ್ ಮನೆ ಸಮೀಪ ನಿಲ್ಲಿಸಿದ್ದ ಬೈಕ್ ಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಇಟ್ಟಿದ್ದು ನಂತರ ಅಲ್ಲಿಂದ
ಪರಾರಿಯಾಗಿದ್ದಾನೆ.
ಆರಂಭದಲ್ಲಿ, ಈ ಪ್ರದೇಶದಲ್ಲಿ ಯಾವುದೇ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸದ ಕಾರಣ ಪ್ರಕರಣವನ್ನು ಪರಿಹರಿಸಲು ಪೊಲೀಸರಿಗೆ ಸಾಧ್ಯವಾಗಲಿಲ್ಲ. ನಂತರ, ಮೀನಾ ತನ್ನ ತನ್ನ ಗೆಳೆಯನ ತಂದೆಯಿಂದ ಬೆದರಿಕೆಗಳು ಬರುತ್ತಿವೆ ಎಂದು ದೂರು ನೀಡಿದ್ದಳು. ಪ್ರಕರಣ ಬೆನ್ನು ಹತ್ತಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿದಾಗ ಬೆಂಕಿ ಇಟ್ಟ ಪ್ರಕರಣವೂ ಬಹಿರಂಗವಾಗಿದೆ.