ರಾಣೇಬೆನ್ನೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮೇಲೆ ಎಫ್ ಐಆರ್/ ಅರುಣ್ ಕುಮಾರ್ ಮೇಲೆ ವಂಚನೆ ಪ್ರಕರಣ ದಾಖಲು/ ಬಳಕೆಯಲ್ಲಿದ್ದ ವಾಹನದ ಮೇಲೆ ಸಾಲ ಪಡೆದುಕೊಂಡ ಆರೋಪ
ಬೆಂಗಳೂರು [ನ.15] ರಾಣೇಬೆನ್ನೂರು ಕ್ಷೇತ್ರದ ಉಪ ಚುನಾವಣೆಯಲ್ಲಿ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬ ಕುತೂಹಲಕ್ಕೆ ತೆರೆ ಬಿದ್ದಿದ್ದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಅರುಣ್ ಕುಮಾರ್ ಜೆ ಅವರನ್ನು ಫೈನಲ್ ಮಾಡಿದ್ದಾರೆ.
ಆದರೆ ಒಂದು ಕಡೆ ಚುನಾವಣೆ ಬಿಸಿ ರಂಗೇರುತ್ತಿದ್ದರೆ ಇತ್ತ ಬಿಜೆಪಿ ಅಭ್ಯರ್ಥಿ ಅರುಣ್ ಕುಮಾರ್ ವಿರುದ್ಧ ಎಫ್ ಐಆರ್ ಒಂದು ದಾಖಲಾಗಿದೆ. ಉಪಚುನಾವಣೆ ಸಂದರ್ಭದಲ್ಲಿಯೇ ದಾಖಲಾಗಿರುವ ಎಫ್ ಐ ಆರ್ ಸಹಜವಾಗಿ ಕುತೂಹಲಕ್ಕೆ ಕಾರಣವಾಗಿದೆ.
ಬಿಜೆಪಿ ಸೇರಲು ಒಂದೇ ಒಂದು ಕಂಡಿಶನ್ ಹಾಕಿದ್ದ ರಮೇಶ್ ಜಾರಕಿಹೊಳಿ ಮತ್ತು ಟೀಂ
ಫೈನಾನ್ಸ್ ಸಂಸ್ಥೆಯೊಂದಕ್ಕೆ ನಕಲಿ ದಾಖಲೆಗಳನ್ನು ನೀಡಿ ಸಾಲ ಪಡೆದುಕೊಂಡಿರುವ ಸಂಬಂಧ ಪ್ರಕರಣ ದಾಖಲಾಗಿದೆ.
ಚಾಲಕನಾಗಿ ಕೆಲಸ ಮಾಡಿಕೊಂಡಿರುವ ನಾಗರಾಜ ಲಮಾಣಿ ಆತನ ಪತ್ನಿ ಕಾವ್ಯಾ, ಬಿಜೆಪಿ ಅಭ್ಯರ್ಥಿ ಅರುಣ್ ಕುಮಾರ್, ತುಂಗಭದ್ರ ಕೋ- ಆಪ್ ಸೊಸೖಟಿ ಮ್ಯಾನೇಜರ್ ರವಿ ಎಂಬುವರ ಮೇಲೆ ಚೋಳಮಂಡಳಮ್ ಿಇನ್ವೆಸ್ಟ್ ಮೆಂಟ್ ಮತ್ತು ಫೈನಾನ್ಸ್ ಕಂಪನಿ ಹಾವೇರಿ ಶಾಖೆಯ ಮ್ಯಾನೇಜರ್ ಮೃತ್ಯುಂಜಯ ದೂರು ದಾಖಲಿಸಿದ್ದಾರೆ.
ನಾಗರಾಜ ಲಮಾಣಿ ಎಂಬುವವರು ವಾಹನವೊಂದರ ಮೇಲೆ ಸಾಲ ಪಡೆದುಕೊಳ್ಳಲು ಚೋಳಮಂಡಳಮ್ ಿಇನ್ವೆಸ್ಟ್ ಮೆಂಟ್ ಮತ್ತು ಫೈನಾನ್ಸ್ ಕಂಪನಿ ಹಾವೇರಿಗೆ ಅರ್ಜಿ ಸಲ್ಲಿಸಿ ಸಾಲ ಪಡೆದುಕೊಳ್ಳುತ್ತಾರೆ. ಆದರೆ ಅದಾಗಲೆ ಯಾವ ವಾಹನಕ್ಕೆ ಸಾಲ ಪಡೆದುಕೊಳ್ಳಲಾಗಿತ್ತೋ ಅದು ಬಿಜೆಪಿ ಅಭ್ಯರ್ಥಿ ಅರುಣ್ ಕುಮಾರ್ ಒಡೆತನದಲ್ಲಿ ಇತ್ತು. ಆ ವಾಹನದ ಮೇಲೆ ತುಂಗಭದ್ರ ಕೋ- ಆಪ್ ಸೊಸೖಟಿಯಲ್ಲಿ ಸಾಲವೂ ಇತ್ತು ಎಂದು ದೂರಿನಲ್ಲಿ ಹೇಳಿದ್ದಾರೆ.
ಆದರೆ ಈ ನಾಲ್ಕು ಜನರು ಸೇರಿ ಉದ್ದೇಶಪೂರ್ವಕವಾಗಿ ಅದೆ ವಾಹನದ ಮೇಲೆ ಸಾಲ ಪಡೆದುಕೊಂಡು ವಂಚಿಸಿದ್ದಾರೆ ಎಂದು ದೂರು ದಾಖಲಾಗಿದೆ.